ವಿಜಯಪುರ:- ಚಾಲಕನ ನಿಯಂತ್ರಣ ತಪ್ಪಿ ಆಂಬ್ಯುಲೆನ್ಸ್ ಪಲ್ಟಿ ಹೊಡೆದಿದ್ದು, ಡ್ರೈವರಿಗೆ & ಸಿಬ್ಬಂದಿಗೆ ಗಾಯವಾಗಿದೆ.
ವಿಜಯಪೂರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ರಸ್ತೆಯ ಮಧ್ಯೆ ಘಟನೆ ಜರುಗಿದೆ. ಆಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ. ಗರ್ಭಿಣಿಯನ್ನು ತಾಳಿಕೋಟಿಯಿಂದ ವಿಜಯಪುರಕ್ಕೆ ಕರೆದು ಕೊಂಡು ಬರುವ ವೇಳೆ ಅಪಘಾತ ಸಂಭವಿಸಿದೆ. ಗರ್ಭಿಣಿಗೆ ಯಾವುದೇ ತೊಂದರೆ ಆಗಿಲ್ಲ. ಆಂಬ್ಯುಲೆನ್ಸ್ ಡ್ರೈವರ್ & ಸಿಬ್ಬಂದಿಗೆ ಸಣ್ಣಪುಟ್ಟ ಗಾಯವಾಗಿದೆ.
ಜಿಲ್ಲಾಸ್ಪತ್ರೆಗೆ ಗಾಯಾಳುಗಳು ದಾಖಲಾಗಿದೆ. ಬಸವನಬಾಗೇವಾಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.