ವಿಜಯನಗರ: ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾ ಬಳಿಯ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದು, ಕೆರೆ ನಿರ್ಮಾಣ ಕಾರ್ಯ ಪೂರ್ಣಗೊಂಡ ಮೂರು ತಿಂಗಳೊಳಗೆ ಜನರಲ್ಲಿ ಹರ್ಷ ಮೂಡಿದೆ. ಕೆರೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿತ್ತು. ಅಲ್ಲದೆ, ಇಮಡಾಪುರ ಕೆರೆ ತುಂಬಿ ಕೋಡಿ ಬಿದ್ದು ನೀರು ಹರಿದ ಪರಿಣಾಮ ಇದೀಗ ಭರ್ತಿಯಾಗಿ ಕೋಡಿ ಬಿದ್ದಿರುವುದು ಸಿ.ಜೆ.ಹಳ್ಳಿ ತಾಂಡಾ ಸೇರಿ ಸುತ್ತಲಿನ ಹಳ್ಳಿಗಳ ಜನರಲ್ಲಿ ಸಂತಸ ಮನೆ ಮಾಡಿದೆ.
ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್: ಈ ಯೋಜನೆಯಡಿ ಸಿಗಲಿದೆ ಉಚಿತ ‘ಹೊಲಿಗೆ ಯಂತ್ರ’!
ಕೆರೆ ತುಂಬಿ ಕೋಡಿ ಬಿದ್ದಿರುವುದರಿಂದ ಸುತ್ತಲಿನ ಬೋರ್ವೆಲ್ಗಳಲ್ಲಿ ಅಂತರ್ಜಲಮಟ್ಟ ಹೆಚ್ಚಳವಾಗಿ ರೈತರಿಗೆ ಅನುಕೂಲವಾಗಲಿದೆ. ಕೆರೆ ಭರ್ತಿಯಾಗಿ ಕೋಡಿ ಬಿದ್ದು ನೀರು ಹರಿಯುವು ದನ್ನು ಕಣ್ಣುಂಬಿಕೊಳ್ಳಲು ಚಿಕ್ಕಜೋಗಿಹಳ್ಳಿ ಜನರು ಆಗಮಿಸುತ್ತಿದ್ದಾರೆ. ಕೆರೆಯ ಕೋಡಿ ನೀರು ಹರಿಯುವುದರಿಂದ ಕೆಳಭಾಗದಲ್ಲಿರುವ ಚೆಕ್ಡ್ಯಾಂ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿದ್ದು, ದುರಸ್ತಿ ಮಾಡುವಂತೆ ಜನರು ಆಗ್ರಹಿಸಿದ್ದಾರೆ.