ವಿಜಯನಗರ:- ಹಂಪಿ ಉತ್ಸವಕ್ಕೆ ಇಂದು ವೈಭವಯುತ ತೆರೆ ಬಿದ್ದಿದೆ. ಸಂಜೆ ನಡೆಯ ಸಮಾರೋಪ ಕಾರ್ಯಕ್ರಮ ನಡೆದಿದ್ದು, ಜಾನಪದ ಮೆರವಣಿಗೆ ನಡೆದಿದೆ.
Hubballi: ಜವಳಿ ಉದ್ಯಮ ಉತ್ತೇಜನಕ್ಕೆ ಬದ್ಧ- ಶಾಸಕ ಅಬ್ಬಯ್ಯಾ ಪ್ರಸಾದ್!
ಕಮಲಾಪುರ ರಸ್ತೆಯಲ್ಲಿ ಜಾನಪದ ಮೆರವಣಿಗೆ ನಡೆದಿದ್ದು, ಮೆರವಣಿಗೆಯಲ್ಲಿ ಸಮಾಳ, ವಾದನ, ಡೊಳ್ಳು ಕುಣಿತ, ನಂದಿಕೋಲು ಕುಣಿತ, ಮುಂತಾದ ವಾದ್ಯಗಳನ್ನು ಕಲಾವಿದರು ನುಡಿಸಿದರು. ಪ್ರಪ್ರಥಮ ಬಾರಿಗೆ ಭುವನೇಶ್ವರಿ ಉತ್ಸವ ಮೂರ್ತಿಯ ಮೆರವಣಿಗೆ ನಡೆದಿದ್ದು, ಪ್ರಥಮ ಬಾರಿ ದೇವಸ್ಥಾನದ ಆನೆ ಲಕ್ಷ್ಲಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ.
ಮೆರವಣಿಗೆ ನೋಡಲು ಜನ ಕಿಕ್ಕಿರಿದಿದ್ದರು. ಹಂಪಿಯ ವಿರೂಪಾಕ್ಷ ದೇವಾಲಯದವರೆಗೂ ಮೆರವಣಿಗೆ ನಡೆದಿದೆ. ಮೆರವಣಿಗೆ ಮುಗಿದ ನಂತರ ಎಂ ಪಿ ಪ್ರಕಾಶ್ ಪ್ರಧಾನ ವೇದಿಕೆಯಲ್ಲಿ ಸಮಾರೋಪ ಗೊಂಡಿದೆ.