ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಹಲವು ವರ್ಷಗಳಿಂದ ಸಾಕಷ್ಟು ಆತ್ಮಿಯರಾಗಿದ್ದಾರೆ. ಹಲವಾರ ಇಬ್ಬರೇ ಕ್ಯಾಮೆರಾ ಕಣ್ಣೀಗೆ ಸಿಕ್ಕಿ ಬಿದ್ದಿದ್ದಾರೆ. ಆದರೆ ಇದುವರೆಗೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವ ವಿಷಯ ಮಾತ್ರ ಬಹಿರಂಗ ಪಡಿಸಿಲ್ಲ. ಸ್ನೇಹಿತರು ಎಂದು ಹೇಳುತ್ತಲೆ ಬಂದಿದ್ದಾರೆ.ಇದೀಗ ನಟ ವಿಜಯ್ ದೇವರಕೊಂಡ ಹೆಮ್ಮೆಯಿಂದ ಗರ್ಲ್ ಫ್ರೆಂಡ್ ಪರಿಚಿಯಿಸಿದ್ದಾರೆ.
ಅಂದ ಹಾಗೆ ‘ದಿ ಗರ್ಲ್ಫ್ರೆಂಡ್’ ಅನ್ನೋದು ಸಿನಿಮಾ. ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್ ಫ್ರೆಂಡ್ ಸಿನಿಮಾದ ಟೀಸರ್ ಬಿಡುಗಡೆ ಮಾಡಿರುವ ವಿಜಯ್ ದೇವರಕೊಂಡ ರಶ್ಮಿಕಾರನ್ನು ಸಿಕ್ಕಾಪಟ್ಟೆ ಹೊಗಳಿದ್ದಾರೆ.
‘ದಿ ಗರ್ಲ್ಫ್ರೆಂಡ್’ ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ. ರಾಹುಲ್ ರವೀಂದ್ರನ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರ ಪಾತ್ರ ಯಾವ ರೀತಿ ಇರಲಿದೆ ಎಂಬುದನ್ನು ತಿಳಿಸುವ ಟೀಸರ್ ಬಿಡುಗಡೆ ಆಗಿದೆ. ವಿಜಯ್ ದೇವರಕೊಂಡ ಅವರು ಸೋಶಿಯಲ್ ಮೀಡಿಯಾದಲ್ಲಿ ಟೀಸರ್ ಹಂಚಿಕೊಂಡಿದ್ದಾರೆ.
‘ಜಗತ್ತಿಗೆ ದಿ ಗರ್ಲ್ಫ್ರೆಂಡ್ ಪರಿಚಯಿಸುತ್ತಿದ್ದೇನೆ. ಈ ಟೀಸರ್ನ ಪ್ರತಿ ದೃಶ್ಯವೂ ನನಗೆ ಇಷ್ಟ ಆಯಿತು. ಈ ಕಥೆ ತೆರೆದುಕೊಳ್ಳುವುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ. ನಮ್ಮಂಥ ಹಲವು ನಟರಿಗೆ ರಶ್ಮಿಕಾ ಅವರು ಅದೃಷ್ಟದ ನಟಿ. ದೊಡ್ಡ ದೊಡ್ಡ ಯಶಸ್ಸಿನ ಭಾಗವಾಗಿದ್ದಾರೆ. ಅವರು ದೊಡ್ಡ ಸ್ಟಾರ್ ನಟಿಯಾಗಿ ಬೆಳೆದಿದ್ದರೂ ಕೂಡ ನಾನು 8 ವರ್ಷಗಳ ಹಿಂದೆ ಭೇಟಿಯಾದ ಹುಡುಗಿಯ ರೀತಿಯೇ ಇದ್ದಾರೆ. ಅವರಿಗೆ ಇನ್ನಷ್ಟು ಯಶಸ್ಸು ಸಿಗಲೆಂದು ಹಾರೈಸುತ್ತೇನೆ’ ಎಂದು ವಿಜಯ್ ದೇವರಕೊಂಡ ಅವರು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.