ಕಲಬುರಗಿ : ಜೈಲಿನೊಳಗೆ ಹಣ್ಣು ಬಿಡಲು ನಿರಾಕರಿಸಿದ ಹಿನ್ನೆಲೆ ಮುಸ್ಲಿಂ ಕೈದಿಗಳು ಗಲಾಟೆ ಮಾಡಿದ ಘಟನೆ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ನಡೆದಿದ್ದು ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ರಂಜಾನ್ ಉಪವಾಸ ಪ್ರಯುಕ್ತ ಕಲಬುರಗಿ ಜೈಲಿಗೆ ಹೊರಗಿನಿಂದ ಹಣ್ಣುಗಳು ಬರುತ್ವವೆ. ವಿವಿಧ ಸಂಘ ಸಂಸ್ಥೆಗಳು ಕೈದಿಗಳಿಗಾಗಿ ಪ್ರತಿದಿನ ಸಂಜೆ ಹಣ್ಣು ಕಳುಹಿಸುತ್ತವೆ. ಮೊದಲ ಹತ್ತು ದಿನ ಭದ್ರತಾ ಸಿಬ್ಬಂದಿ ಹಣ್ಣು ಒಳಗಡೆ ಬಿಟ್ಟಿದ್ದಾರೆ. ಕಳೆದ ಶುಕ್ರವಾರ ಏಕಾಎಕಿ ತಡೆದಿದ್ದಕ್ಕೆ ಕೈದಿಗಳು ಆಕ್ರೋಶ ಹೊರಹಾಕಿದ್ದಾರೆ.
ಹೀಗಾಗಿ ಭದ್ರತಾ ಸಿಬ್ಬಂದಿ ವಿರುದ್ದ ಕೈದಿಗಳು ಗರಂ ಆಗಿದ್ದು ಕೈದಿಗಳ ಚಿರಾಟ-ಕೂಗಾಟ ವಿಡಿಯೋ ವೈರಲ್ ಆಗಿದೆ. ಸೆಂಟ್ರಲ್ ಜೈಲಿನ ‘ಡಿ’ ಗೇಟ್ನಿಂದ ‘ಎ’ ಗೇಟ್ವರೆಗೆ ಬಂದು ಪ್ರತಿಭಟನೆ ಮಾಡಿದ್ದಾರೆ. ನಂತರ ಅಧಿಕಾರಿಗಳು ಆಗಮಿಸಿ ಹಣ್ಣು ಪರೀಕ್ಷೆ ಮಾಡಿ ನಂತ್ರ ಒಳಗೆ ಕಳುಹಿಸಿದ್ದಾರೆ.