ಟಿ20 ವಿಶ್ವಕಪ್ 2024 ರ 25 ನೇ ಪಂದ್ಯದಲ್ಲಿ ಭಾರತವಪ ಆತಿಥೇಯ ಅಮೆರಿಕ ತಂಡವನ್ನು 7 ವಿಕೆಟ್ಗಳಿಂದ ಮಣಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸೂಪರ್ 8 ಸುತ್ತಿಗೆ ಲಗ್ಗೆ ಇಟ್ಟಿದೆ.
ಚಿನ್ನ, ಬೆಳ್ಳಿ ಎರಡೂ ಬೆಲೆಯಲ್ಲಿ ಹೆಚ್ಚಳ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!
ಮೊದಲು ಬ್ಯಾಟ್ ಮಾಡಿದ ಅಮೆರಿಕ 20 ಓವರ್ಗಳಲ್ಲಿ ಎಂಟು ವಿಕೆಟ್ಗೆ 110 ರನ್ ಗಳಿಸಿತು. ಈ ಸವಾಲನ್ನು ಟೀಂ ಇಂಡಿಯಾ 18.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಪೂರ್ಣಗೊಳಿಸಿತು. ಸೂರ್ಯಕುಮಾರ್ ಯಾದವ್ (Suryakumar Yadav) ಮತ್ತು ಶಿವಂ ದುಬೆ (Shivam Dube) ಜೋಡಿ ಟೀಂ ಇಂಡಿಯಾ ಗೆಲುವಿನ ರೂವಾರಿಗಳಾದರು. ಇವರಿಬ್ಬರ ನಡುವೆ 4 ನೇ ವಿಕೆಟ್ಗೆ 72 ರನ್ಗಳ ಜೊತೆಯಾಟವೂ ಕಂಡುಬಂತು. ಇದೆಲ್ಲದರ ಹೊರತಾಗಿ ಅಲ್ಪ ಟಾರ್ಗೆಟ್ ನೀಡಿಯೂ ಗೆಲುವಿಗಾಗಿ ಅಮೆರಿಕ ನೀಡಿದ ಹೋರಾಟ ಶ್ಲಾಘನೀಯವಾಗಿತ್ತು. ಸ್ಟಾರ್ ಆಟಗಾರರೇ ಹೊಂದಿರುವ ಟೀಂ ಇಂಡಿಯಾವನ್ನು ಅಮೆರಿಕ ವೇಗಿಗಳು ಕಟ್ಟಿಹಾಕಿದ್ದು ನಿಜಕ್ಕೂ ಮೆಚ್ಚುವಂತಿತ್ತು.
ಅಮೆರಿಕಕ್ಕೆ ವೇಗದ ಬೌಲರ್ ಅರ್ಶ್ದೀಪ್ ಸಿಂಗ್ ಮೊದಲ ಓವರ್ನಲ್ಲೇ ಡಬಲ್ ಹೊಡೆತ ನೀಡಿದರು. ಇದರಿಂದ ತಂಡವು ಕೊನೆಯವರೆಗೂ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಂಡದ ಪರ ಒಂದೇ ಒಂದು ಉತ್ತಮ ಜೊತೆಯಾಟ ಕಂಡು ಬರಲಿಲ್ಲ. ಹೀಗಾಗಿ ಅಮೆರಿಕ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿತು. ತಂಡದ ಪರ ಸ್ಟೀವನ್ ಟೇಲರ್ 24 ರನ್ ಹಾಗೂ ನಿತೀಶ್ ಕುಮಾರ್ 27 ರನ್ ಗಳಿಸಿದರೆ, ಈ ಇಬ್ಬರು ಬ್ಯಾಟ್ಸ್ಮನ್ಗಳ ಹೊರತಾಗಿ ಆರನ್ ಜೋನ್ಸ್ 11 ರನ್, ಕೋರಿ ಆಂಡರ್ಸನ್ 15 ರನ್, ಹರ್ಮೀತ್ ಸಿಂಗ್ 10 ರನ್ ಮತ್ತು ವ್ಯಾನ್ ಶಾಲ್ಕ್ವಿಕ್ 11 ರನ್ಗಳ ಕೊಡುಗೆ ನೀಡಿದರು. ಭಾರತದ ಪರ ಅರ್ಷದೀಪ್ ಸಿಂಗ್ ತಮ್ಮ 4 ಓವರ್ಗಳಲ್ಲಿ 9 ರನ್ ನೀಡಿ 4 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 2 ಮತ್ತು ಅಕ್ಷರ್ ಪಟೇಲ್