ಹಾವೇರಿ: ರಾಣಿಬೆನ್ನೂರಿನ ಪರಿವರ್ತನಾ ಸಂಸ್ಥೆ ವತಿಯಿಂದ ಆಯೋಜಿಸಿರುವ ‘ಕರ್ನಾಟಕ ವೈಭವ’ ವೈಚಾರಿಕ ಹಬ್ಬಕ್ಕೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಚಾಲನೆ ನೀಡಿದರು. ಈ ವೇಳೆ ಉಪರಾಷ್ಟ್ರತಿಗಳಿಗೆ ಕಂಬಳಿ ಹೊದಿಸಿ, ಯಾಲಕ್ಕಿ ಮಾಲೆ ಹಾಕಿ ತ್ರಿಪದಿ ಕವಿ ಸರ್ವಜ್ಞನ ಮೂರ್ತಿ ನೀಡಿ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಅವರ ಧರ್ಮಪತ್ನಿ ಸುದಿಷ್ಠಾ ಧನಕರ್, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಕರ್ನಾಟಕ ವೈಭವ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿ.ಹಲಸೆ, ಪ್ರಜ್ಞಾ ಪ್ರವಾಹ ಅಖಿಲ ಭಾರತ ಸಹಸಂಯೋಜಕ ರಘುನಂದನ ಇದ್ದರು.