ನವದೆಹಲಿ:- ಉಪರಾಷ್ಟ್ರಪತಿ ಜಗದೀಪ್ ಧನಕರ್ ದೆಹಲಿಯ ಏಮ್ಸ್ ಆಸ್ಪತ್ರೆಗೆ ಇಂದು ಮುಂಜಾನೆ ದಾಖಲಿಸಲಾಗಿದೆ. ಎದೆಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಡೋಲಿಯಲ್ಲೇ ರೋಗಿಯ ಆಸ್ಪತ್ರೆಗೆ ಕೊಂಡೊಯ್ದ ಗ್ರಾಮಸ್ಥರು ; ಕಾಡಂಚಿನ ಗ್ರಾಮದ ಜನರ ಗೋಳು..
73 ವಯಸ್ಸಿನ ಅವರನ್ನು ತಡರಾತ್ರಿ 2 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಎಐಐಎಂಎಸ್ನಲ್ಲಿ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ರಾಜಿವ್ ನಾರಾಂಗ್ ಅವರು ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಧನಕರ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ವೈದ್ಯರ ತಂಡವು ಅವರ ಆರೋಗ್ಯವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ.