ರಜನಿಕಾಂತ್ ನಟನೆಯ ಬಹು ನಿರೀಕ್ಷಿತ ಕ್ರೈಮ್ ಆಕ್ಷನ್-ಥ್ರಿಲ್ಲರ್ ವೆಟ್ಟೈಯಾನ್ ಸಿನಿಮಾ ಅದ್ಧೂರಿಯಾಗಿ ತೆರೆ ಕಂಡಿದೆ. ನಿನ್ನೆ ಬೆಳಗ್ಗೆಯಿಂದಲೇ ತಲೈವರ್ ಅವರ ಅಭಿಮಾನಿಗಳು ಚಿತ್ರದ ಮೊದಲ ದಿನದ ಮೊದಲ ಪ್ರದರ್ಶನವನ್ನು ಸಖತ್ ಎಂಜಾಯ್ ಮಾಡಿ ನೋಡಿದ್ದಾರೆ. ವೆಟ್ಟೈಯಾನ್ ಅಮಿತಾಭ್ ಅವರ ತೆಲುಗು ಚೊಚ್ಚಲ ಮತ್ತು ರಜನಿಕಾಂತ್ ಅವರ 170 ನೇ ಚಿತ್ರವಾಗಿದೆ.
‘ವೆಟ್ಟೈಯಾನ್’ ಸಿನಿಮಾ ಮೊದಲ ದಿನ ಭಾರತದ ಬಾಕ್ಸ್ ಆಫೀಸ್ನಲ್ಲಿ 30 ಕೋಟಿ ರೂಪಾಯಿ ಗಳಿಕೆ ಮಾಡಿದೆ. ತಮಿಳಿನಿಂದ ಈ ಚಿತ್ರಕ್ಕೆ ಸಿಕ್ಕಿರೋದು ಕೇವಲ 26 ಕೋಟಿ ರೂಪಾಯಿ. ತೆಲುಗಿನಲ್ಲಿ 3.2 ಕೋಟಿ ರೂಪಾಯಿ, ಹಿಂದಿಯಲ್ಲಿ ಕೇವಲ 60 ಲಕ್ಷ ರೂಪಾಯಿ ಗಳಿಕೆ ಆಗಿದೆ. ಕನ್ನಡದಲ್ಲಿ ಕೇವಲ 5 ಲಕ್ಷ ರೂಪಾಯಿ ವ್ಯವಹಾರ ಆಗಿದೆ. 30 ಕೋಟಿ ರೂಪಾಯಿ ಎಂದರೆ ಅದು ದೊಡ್ಡ ಮೊತ್ತವೇ. ಆದರೆ, ರಜನಿಕಾಂತ್ಗೆ ಇರೋ ಹೈಪ್ಗೆ ಅದು ಕಡಿಮೆ.
Tata Group successors: ‘ರತನ್’ ಕಣ್ಮರೆ: 3,800 ಕೋಟಿ ರೂ. ಟಾಟಾ ಸಾಮ್ರಾಜ್ಯಕ್ಕೆ ಮುಂದಿನ ಉತ್ತರಾಧಿಕಾರಿ ಯಾರು..?
ಅಮಿತಾಭ್ ಬಚ್ಚನ್ ಅವರು ‘ವೆಟ್ಟೈಯನ್’ ಚಿತ್ರದಲ್ಲಿ ನಟಿಸಿದ್ದಾರೆ. ಅವರು ನಟಿಸಿದ ಕಾರಣಕ್ಕೆ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಬೇಕಿತ್ತು. ಆದರೆ, ಚಿತ್ರವು ಹಿಂದಿಯಲ್ಲೂ ಅಂಥ ದೊಡ್ಡ ಹವಾ ಸೃಷ್ಟಿ ಮಾಡಿಲ್ಲ. ಇದು ತಂಡದ ಬೇಸರ ಹೆಚ್ಚಿಸಿದೆ. ಇಂದು (ಅಕ್ಟೋಬರ್ 11) ದಸರಾ ಪ್ರಯುಕ್ತ ರಜಾ ಇದೆ. ಇಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಲಿದೆಯೇ ಎನ್ನುವ ಕುತೂಹಲ ಮೂಡಿದೆ.
ಹಲವು ವರ್ಷಗಳ ಬಳಿಕ ಅಮಿತಾಭ್ ಬಚ್ಚನ್ ಹಾಗೂ ರಜನಿಕಾಂತ್ ಅವರು ‘ವೆಟ್ಟೈಯಾನ್’ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಚಿತ್ರವನ್ನು ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಸೂರ್ಯ ಅಭಿನಯದ ಕಂಗುವ ಅಕ್ಟೋಬರ್-10 ರಂದು ರಿಲೀಸ್ ಆಗಬೇಕಿತ್ತು. ಆದರೆ, ರಜನಿಯ ವೆಟ್ಟೈಯನ್ ಚಿತ್ರ ಅನೌನ್ಸ್ ಆಯಿತು. ಆಗ ಎರಡು ದೊಡ್ಡ ಸಿನಿಮಾಗಳು ಕ್ಲಾಶ್ ಆಗಲೇಬಾರದು ಅಂತಲೇ ಸೂರ್ಯ ತಮ್ಮ ಚಿತ್ರದ ರಿಲೀಸ್ ಅನ್ನ ಮುಂದೆ ಹಾಕಿದರು. ಹಾಗಾಗಿಯೇ ಕಂಗುವಾ ನವೆಂಬರ್-14 ರಂದು ರಿಲೀಸ್ ಆಗುತ್ತಿದೆ ಅಂತಲೇ ಹೇಳಬಹದು.