ಮುಟ್ಟಿನ ಸಮಯದಲ್ಲಿ ನೋವನ್ನು ಕಡಿಮೆಮಾಡಲು ದಾಸವಾಳ ಸೇವಿಸಿ; ಪ್ರಯೋಜನ ಸಾಕಷ್ಟಿವೆ
ಮಹಿಳೆಯರಲ್ಲಿ ತಿಂಗಳ ಮುಟ್ಟಿನ ಅವಧಿ ಸರಿಯಾಗಿದ್ರೆ ಒಟ್ಟಾರೆ ಆರೋಗ್ಯ ಕೂಡ ಸರಿಯಾಗಿರುತ್ತದೆ ಎಂಬ ಮಾತಿದೆ. ಆದರೆ ಕೆಲವರು ವಿವಿಧ ರೋಗಗಳು/ಅಂಶಗಳ ಕಾರಣದಿಂದಾಗಿ ಎರಡು ಮೂರು ತಿಂಗಳಿಗೊಮ್ಮೆ ಆಗೋದು, ತಿಂಗಳ ತುಂಬುವುದರಲ್ಲಿ ಮುಟ್ಟಾಗುವಂತಹ ಇರ್ರೆಗ್ಯುಲರ್ ಪೀರಿಯಡ್ಸ್ ಅನ್ನು ಅನುಭವಿಸುತ್ತಾರೆ. ನಿಮ್ಮ ಪೀರಿಯಡ್ಸ್ ಪ್ರತಿ 24 ರಿಂದ 38 ದಿನಗಳಿಗೊಮ್ಮೆ ಬಂದರೆ ಅದನ್ನು ರೆಗ್ಯುಲರ್ ಪೀರಿಯಡ್ಸ್ ಎಂದು ಪರಿಗಣಿಸಲಾಗುತ್ತದೆ, ಅದೇ ಈ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದ್ರೆ ಅದನ್ನು ಅನಿಯಮಿತ ಮುಟ್ಟಿನ ಅವಧಿ ಎನ್ನಲಾಗುತ್ತದೆ.
ಫೆಬ್ರವರಿಯಲ್ಲಿ ಕಂಪ್ಲಿ ಕ್ಷೇತ್ರಕ್ಕೆ 10 ಸಾವಿರ ಮನೆ ವಿತರಣೆ: ಸಚಿವ ಜಮೀರ್ ಅಹ್ಮದ್ ಖಾನ್
ಅಲ್ಲದೇ ಕೆಲವೊಬ್ಬರಿಗೆ ಹೊಟ್ಟೆ ನೋವು ಕಾಡುತ್ತಲೇ ಇರುತ್ತದೆ. ಹೀಗಾಗಿ ನಾವು ಹೇಳುವ ಈ ಟಿಪ್ಸ್ ಫಾಲೋ ಮಾಡಿ. ದೇಹದಲ್ಲಿ ಈಸ್ಟ್ರೊಜೆನ್ ಮಟ್ಟ ಕಡಿಮೆಯಾದಾಗ, ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ. ಋತುಚಕ್ರದಲ್ಲಿ ಏರುಪೇರುಗಳನ್ನು ನೀಡುತ್ತದೆ. ಆದ್ದರಿಂದ, ದಾಸವಾಳವು ಇವುಗಳನ್ನು ಸರಿಪಡಿಸುತ್ತದೆ.
ದೇಹದಲ್ಲಿ ಕಬ್ಬಿಣದ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ. ದಾಸವಾಳ ಹೂವು ಕಬ್ಬಿಣದ ಅಂಶವನ್ನು ಹೊಂದಿದೆ. ಇದು ದೇಹದಲ್ಲಿನ ರಕ್ತಹೀನತೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಕಬ್ಬಿಣದ ಅವಶ್ಯಕತೆ ಇರುವವರು ದಾಸವಾಳದ ಮೊಗ್ಗುಗಳನ್ನು ಪುಡಿಮಾಡಿ ರಸವಾಗಿ ಸೇವಿಸಬಹುದು.
ವಯಸ್ಸಾಗುವುದನ್ನು ತಡೆಯಲು ದಾಸವಾಳ ತುಂಬಾ ಸಹಕಾರಿ. ದಾಸವಾಳ ದೇಹದಿಂದ ಸ್ವತಂತ್ರ ರಾಡಿಕಲ್ಗಳನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಇದರ ಬಳಕೆಯು ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುವುದಲ್ಲದೆ, ಮಹಿಳೆಯರು ಸುಂದರವಾಗಿ ಮತ್ತು ಯೌವನದಿಂದ ಕಾಣುವಂತೆ ಮಾಡಲು ಸಹಾಯ ಮಾಡುತ್ತದೆ.
ಅಂದಹಾಗೆ, ದಾಸವಾಳದ ಎಲೆಗಳಿಂದ ತಯಾರಿಸಿದ ಚಹಾವು ತುಂಬಾ ಪ್ರಬಲವಾಗಿದೆ. ಇದನ್ನು ಸೇವಿಸುವ ವ್ಯಕ್ತಿಗೆ ದೀರ್ಘಕಾಲ ಹಸಿವಾಗುವುದಿಲ್ಲ. ಅಲ್ಲದೆ, ಜೀರ್ಣಕ್ರಿಯೆಯೂ ಸುಧಾರಿಸುತ್ತದೆ. ದಾಸವಾಳವನ್ನು ಅನಗತ್ಯ ಕೊಬ್ಬನ್ನು ತೆಗೆದುಹಾಕಲು ಮತ್ತು ತೂಕವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ.