ಬೆಂಗಳೂರು:- ಬೆಂಗಳೂರಿನ ಶಿವಾಜಿನಗರದ ರಸೆಲ್ ಮಾರ್ಕೆಟ್ ರಸ್ತೆ ಸೇರಿದಂತೆ ಇನ್ನಿತರೆ ರಸ್ತೆಗಳಲ್ಲಿ
ಇಂದು ವಾಹನ ಸಂಚಾರ ನಿರ್ಬಂಧಿಸಿ ಬೆಂಗಳೂರು ಸಂಚಾರ ಪೊಲೀಸರು ಸೂಚನೆ ಹೊರಡಿಸಿದ್ದಾರೆ.
ಬ್ರಾಡ್ವೇ ರಸ್ತೆಯಿಂದ ರಸೆಲ್ ಮಾರ್ಕೆಡ್ವರೆಗೆ, ಧರ್ಮರಾಜ ಕೋಯಿಲ್ ಸ್ಟ್ರೀಟ್ನಿಂದ ರಸೆಲ್ ಮಾರ್ಕೆಟ್ ಕಡೆಗೆ ಮತ್ತು ಬಿಆರ್ವಿ ಜಂಕ್ಷನ್ ಅಥವಾ ಬಾಳೇಕುಂದ್ರಿ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದ ಕಡೆಗೆ ಎಲ್ಲ ರೀತಿಯ ವಾಹನಗಳನ್ನು ಸಹ ನಿಷೇಧಿಸಲಾಗಿದೆ.
ನಿಮ್ಮ ಬೆರಳಿಗೆ ಬೆಳ್ಳಿ ಉಂಗುರ ಹಾಕಿಕೊಳ್ಳೋ ಅಭ್ಯಾಸ ಇದ್ಯಾ!?, ಹಾಗಿದ್ರೆ ಮಿಸ್ ಮಾಡ್ದೆ ಸುದ್ದಿ ನೋಡಿ!
ವಾಹನಗಳು ತಿಮ್ಮಯ್ಯ ರಸ್ತೆ, ಕ್ವೀನ್ಸ್ ರಸ್ತೆ ಮತ್ತು ಇನ್ಫೆಂಟ್ರಿ ರಸ್ತೆಯ ಮೂಲಕ ಸಂಚಾರ ಮಾಡಬಹುದಾಗಿದೆ. ರಸೆಲ್ ಮಾರ್ಕೆಟ್, ಬ್ರಾಡ್ವೆ ರಸ್ತೆ, ಮೀನಾಕ್ಷಿ ಕೊಯಿಲ್ ಸ್ಟ್ರೀಟ್, ಸೆಂಟ್ರಲ್ ಸ್ಟ್ರೀಟ್, ಶಿವಾಜಿ ರಸ್ತೆ, ಕನ್ನಿಂಗ್ಹ್ಯಾಮ್ ರಸ್ತೆ, ಯೂನಿಯನ್ ಸ್ಟ್ರೀಟ್, ಇನ್ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, ಆಸ್ಪತ್ರೆ ರಸ್ತೆ, ಲೇಡಿ ಕರ್ಜನ್ ರಸ್ತೆ, ವಿಎಸ್ಎನ್ ರಸ್ತೆ, ಪ್ಲೇನ್ ಸ್ಟ್ರೀಟ್ ಮತ್ತು ಎಂಜಿ ರಸ್ತೆಯ ಸುತ್ತಮುತ್ತ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಕಾಮರಾಜ್ ರಸ್ತೆ ಪಾರ್ಕಿಂಗ್ ಸ್ಥಳ, ಸಫೀನಾ ಪ್ಲಾಜಾ ಎದುರು ಮುಖ್ಯ ಗಾರ್ಡ್ ಕ್ರಾಸ್ ರಸ್ತೆ, ಜಸ್ಮಾ ಭವನ ರಸ್ತೆ, ಗಂಗಾಧರ ಚೆಟ್ಟಿ ರಸ್ತೆಯ ಆರ್ಬಿಎಎನ್ಎಂಎಸ್ ಮೈದಾನ ಮತ್ತು ಡಿಕನ್ಸನ್ ರಸ್ತೆಯಲ್ಲಿರುವ ಮುಸ್ಲಿಂ ಅನಾಥಾಶ್ರಮದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.