ಬೀದರ್ : ಉತ್ತರಪ್ರದೇಶದಲ್ಲಿ ಬೀದರ್ ಯಾತ್ರಿಕರ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಸಚಿವರಾದ ಈಶ್ವರ್ ಖಂಡ್ರೆ ಭೇಟಿ ನೀಡಿದರು. ನಗರದ ಬ್ರಿಮ್ಸ್ಸ್ ಆಸ್ಪತ್ರೆಗೆ ಭೇಟಿ ನೀಡಿದ ನೀಡಿದ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಗಾಯಾಳುಗಳಿಗೆ ಸಾಂತ್ವನ ಹೇಳಿ, ಘಟನೆಯ ವಿವರವನ್ನು ಪಡೆದರು. ಈ ವೇಳೆ ಗಾಯಾಳುಗಳು ಚಾಲಕ ಲಾರಿಗೆ ಹಿಂಬದಿಯಿಂದ ಗುದ್ದಿದ್ದಾನೆ.. ನಮ್ಮ ಚಾಲಕನದ್ದೆ ತಪ್ಪು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕಳೆದ ಫೆ.21 ರಂದು ಉತ್ತರ ಪ್ರದೇಶದ ವಾರಣಾಸಿ ಬಳಿ ಭೀಕರ ರಸ್ತೆ ಅಪಘಾತವಾಗಿತ್ತು. ಲಾರಿಗೆ ಹಿಂಬದಿಯಿಂದ ಕ್ರೂಸರ್ ಡಿಕ್ಕಿಯಾದ ಪರಿಣಾಮ ಬೀದರ್ ಮೂಲದ ಆರು ಮಂದಿ ಯಾತ್ರಿಕರು ಸಾವನ್ನಪ್ಪಿದ್ದರು. ಇದರಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಬ್ರಿಮ್ಸ್ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೀದರ್ ಯಾತ್ರಿಕರ ವಾಹನ ಅಪಘಾತ ಪ್ರಕರಣ ; ಮೃತರ ಕುಟುಂಬಸ್ಥರ ಭೇಟಿಯಾದ ಸಚಿವ ರಹೀಂಖಾನ್
ಗಾಯಾಳುಗಳ ಭೇಟಿ ಬಳಿಕ ಮಾತನಾಡಿದ ಸಚಿವರು, ಉತ್ತಮ ರೀತಿ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚಿಸಿದ್ದೇನೆ.ಅಪಘಾತ ಹೇಗೆ ಆಗಿದೆ ಎಂದು ಮಾಹಿತಿ ಪಡೆದಿದ್ದೇನೆ. ಗಾಯಾಳುಗಳ ಸ್ಥಿತಿ ಪರಿಶೀಲನೆ ಮಾಡಿ ಸೂಕ್ತ ಚಿಕಿತ್ಸೆ ನೀಡಿ ಎಂದು ವೈದ್ಯರಿಗೆ ಸೂಚನೆ ನೀಡಿದ್ದು, ಮೃತ ಪಟ್ಟಿದ ಐದು ಜನರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ ಸರ್ಕಾರದ ವತಿಯಿಂದ ನೀಡಲಾಗುವುದು ಎಂದರು. ಒಂದು ಕುಟುಂಬದ ಮನೆಯಲ್ಲಿ ಒಂದು ಮಗು ಮಾತ್ರ ಜೀವಂತವಾಗಿದೆ. ಆದರೆ ಅವರ ಪರಿಹಾರದವರು ಎಲ್ಲರೂ ಮೃತಪಟ್ಟಿರುವುದರಿಂದ ಆ ಮಗುವಿಗೆ ಸರ್ಕಾರದಿಂದ ಶಾಶ್ವತ ಪರಿಹಾರ ಕೊಡಲಾಗುವುದು ಎಂದರು.