ಬೀದರ್ : ಮಹಾಕುಂಭಮೇಳಕ್ಕೆ ತೆರಳಿದ್ದ ಬೀದರ್ ಯಾತ್ರಾತಿಗಳ ವಾಹನ ಅಪಘಾತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಕಳೆದ ಶುಕ್ರವಾರ ತಡರಾತ್ರಿ ಬೀದರ್ ನಗರದ ಲಾಡಗೇರಿ ನಿವಾಸಿ ಸುಲೋಚನಾ ಚಂದ್ರಕಾಂತ (38)ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಬೀದರ್ ನಿಂದ 14 ಮಂದಿ ಕ್ರೂಸರ್ ವಾಹನದಲ್ಲಿ ಪ್ರಯಾಗ್ ರಾಜ್ನ ಮಹಾಕುಂಭಮೇಳಕ್ಕೆ ತೆರಳಿದ್ದರು. ಪ್ರಯಾಗರಾಜ್ ಪುಣ್ಯ ಸ್ನಾನ ಬಳಿಕ ಆಯೋಧ್ಯ ಕಡೆಗೆ ತೆರಳುತ್ತಿದ್ದಾಗ, ವಾರಣಾಸಿಯ ಮೀರ್ಜಾಮುರದ್ ಬಳಿ ನಿಂತಿದ್ದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನಪ್ಪಿದ್ದರು. ಘಟನೆಯಲ್ಲಿ ಸುಜಾತ, ಕವಿತಾ, ಅನಿತಾ, ಖುಷಿ, ಗಣೇಶ, ಸಾಯಿ, ಭಗವಂತ ಹಾಗೂ ಶಿವಾ ಗಾಯಗೊಂಡಿದ್ದರು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪೈಕಿ ಸುಲೋಚನ ಸಾವನ್ನಪ್ಪಿದ್ದಾರೆ.
ಉತ್ತರಪ್ರದೇಶದಲ್ಲಿ ಬೀದರ್ ಯಾತ್ರಿಕರ ಸಾವು ; ಮೃತರ ಕುಟುಂಬಸ್ಥರ ಭೇಟಿಯಾದ ಸಂಸದ ಸಾಗರ್
ಸದ್ಯ ಗಾಯಾಳುಗಳು ಬಿಎಸ್ ಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತದೇಹ ಬೀದರ್ ಗೆ ತರಲು ಪೊಲೀಸರು ಸೇರಿ ಅಧಿಕಾರಿಗಳ ವಿಶೇಷ ತಂಡ ರಚಿಸಲಾಗಿದ್ದು, ಈಗಾಗಲೇ ಉತ್ತರ ಪ್ರದೇಶಕ್ಕೆ ವಿಶೇಷ ತಂಡ ಪ್ರಯಾಣ ಕೈಗೊಂಡಿದ್ದಾರೆ.