ಹುಬ್ಬಳ್ಳಿ:- ಶ್ರಾವಣ ಮಾಸದ ಎರಡನೇ ಸೋಮವಾರದಂದು ಕರ್ತೃ ಜಗದ್ಗುರು ಶ್ರೀ ಗುರುಸಿದ್ದೇಶ್ವರ ಮಹಾಶಿವಯೋಗಿಗಳವರ ಗದ್ದುಗೆಯನ್ನು ಇದೆ ಮೊದಲ ಬಾರಿಗೆ ವಿವಿಧ ಬಗೆಯ ತರಕಾರಿ (ಕಾಯಿಪಲ್ಲೆ) ಗಳಿಂದ ಅಲಂಕಾರ ಮಾಡಲಾಗಿದೆ.
Festival Offer: ಸಾಯಿ ಗೋಲ್ಡ್ ಪ್ಯಾಲೇಸ್ʼನಿಂದ ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷ ಕೊಡುಗೆ!
ಈ ತರಕಾರಿ ಅಲಂಕಾರ ಸೇವೆ ಸಲ್ಲಿಸಿದವರು ಶ್ರೀ ಮಠದ ಪರಮ ಭಕ್ತರಾದ ರಾಚಯ್ಯ ಆರ್ ವಾರಿಕಲ್ಮಠಶ್ರುಪ್ರಕಾಶ ವಿ ಕೊಚಲಾಪುರಮಠ ಹಾಗೂ ಅಶೋಕ ಹೊಸಮಠ ಇವರುಗಳು ಸೇವೆಯನ್ನು ಸಲ್ಲಿಸಿರುತ್ತಾರೆ.
ಪ್ರತಿ ಸೋಮವಾರದಂದು ಸಂಜೆ 6.30ಕ್ಕೆ ಪಲ್ಲಕ್ಕಿ ಉತ್ಸವ ಜರುಗುತ್ತದೆ ಆದ ಕಾರಣ ಸಮಸ್ತ ಶ್ರೀಮಠದ ಭಕ್ತರು ಪಲ್ಲಕ್ಕಿ ಸೇವೆಯಲ್ಲಿ ಭಾಗವಹಿಸಿ ಶ್ರೀ ಗುರುಸಿದ್ಧೇಶ್ವರರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ವಿನಂತಿ ಮಾಡಲಾಗಿದೆ.