ಶ್ವೇತಾ ಗೌಡ ವಂಚನೆ ಪ್ರಕರಣ ಇನ್ನೇನು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದೇಬಿಡ್ತು ಎನ್ನಲಾಗಿತ್ತು.. ಅಷ್ಟರಲ್ಲಾಗಲೇ ಮತ್ತೊಂದು ಸ್ಫೋಟಕ ವಿಚಾರ ಹೊರಬಂದಿದೆ…ಸಂಜಯ್ ಬಾಫ್ನಾ ಮಾದರಿಯಲ್ಲೇ ಮತ್ತೋರ್ವ ಚಿನ್ನದ ವ್ಯಾಪಾರಿಗೆ ವಂಚನೆ ಮಾಡೊರೋದು ಗೊತ್ತಾಗಿದೆ.. ನವರತನ್ ಜ್ಯೂವೆಲ್ಲರ್ಸ್ ಮಾಲೀಕ ಸಂಜಯ್ ಬಾಫ್ನಾಗೆ 2.42 ಕೋಟಿ ಮೊತ್ತದ ಚಿನ್ನ ಪಡೆದು ವಂಚನೆ ಎಸಗಿದ್ದ ಶ್ವೇತಾ ಗೌಡ ಸದ್ಯ ಜೈಲು ಪಾಲಾಗಿದ್ದಾಳೆ..ಪ್ರಕರಣದ ತನಿಖೆ ನಡೆಸ್ತಿರುವ ಪುಲಕೇಶಿನಗರ ಉಪ ವಿಭಾಗ ಪೊಲೀಸರು ಒಂದೊಂದೇ ಸತ್ಯ ಹೊರಗೆಳೆಯುತ್ತಿದ್ದಾರೆ..ಸಂಜಯ್ ಬಾಫ್ನಾ ಬೆನ್ನಲ್ಲೇ ಮತ್ತೋರ್ವ ಚಿನ್ನದ ವ್ಯಾಪಾರಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾನೆ..
Jasmine: ನಿಮ್ಮ ಮಲ್ಲಿಗೆ ಗಿಡದಲ್ಲಿ ಸಿಕ್ಕಾಪಟ್ಟೆ ಹೂವುಗಳು ಬಿಡಬೇಕಾ..? ಹಾಗಾದ್ರೆ ಹೀಗೆ ಮಾಡಿ ಸಾಕು
ಹೌದು..ಶಿವಮೊಗ್ಗದ ಸುಭಾಷ್ ನಗರದಲ್ಲಿರುವ ಪ್ರಗತಿ ಜ್ಯುವೆಲ್ಲರಿ ಶಾಪ್ ಮಾಲೀಕ ಬಾಲರಾಜ್ ಸೇಠ್ ಗೆ ಶ್ವೇತಾ ಗೌಡ ಸುಮಾರು 20 ಲಕ್ಷಕ್ಕು ಅಧಿಕ ಮೌಲ್ಯದ ಚಿನ್ನ ಪಡೆದು ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ..ಕೆಲ ತಿಂಗಳ ಹಿಂದೆ ಸಂಜಯ್ ಬಾಫ್ನ ಮೂಲಕ ಪರಿಚಯವಾದ ಶ್ವೇತಾ ಗೌಡ..ಬೆಂಗಳೂರಿನಲ್ಲಿ ಬಾಲರಾಜ್ ಸೇಠ್ ಭೇಟಿಯಾಗಿದ್ದಾಳೆ..ಈ ವೇಳೆ ಸಂಜಯ್ ಬಾಫ್ನ ಜೊತೆ ನಾನು ಕೋಟಿ ಕೋಟಿ ವ್ಯವಹಾರ ಮಾಡುತ್ತೇನೆ..ಅವರ ಬಳಿಯಿಂದ ಆ್ಯಂಟಿಕ್ ಜ್ಯುವೆಲ್ಲರಿಗಳನ್ನ ಖರೀದಿ ಮಾಡುತ್ತೇನೆ..ಅಷ್ಟೇ ಏಕೆ ಅವರ ಬಳಿ ನಾನು ವಜ್ರದ ವ್ಯಾಪಾರ ಕೂಡ ಮಾಡುತ್ತೇನೆ..ನೀವು ನನಗೆ ಸುಮಾರು 285 ಗ್ರಾಂ ತೂಕದ ಆ್ಯಂಟಿಕ್ ಚಿನ್ನ ಮಾಡಿಕೊಡಿ ಎಂದು ಯುಬಿ ಸಿಟಿ ಬಳಿಯ ಕಾಫಿ ಡೇ ನಲ್ಲಿ ಬಾಲರಾಜ್ ನನ್ನ ಭೇಟಿಯಾಗಿ ಕೇಳಿಕೊಂಡಿದ್ಳು.
ಇದೇ ವೇಳೆ ಬಾಲರಾಜ್ ಬೆಂಗಳೂರಿಗೆ ತನ್ನ ತಮ್ಮನ ಮೂಲಕ ಬೇರೊಬ್ಬರಿಗೆ ನೀಡಲು ಚಿನ್ನಭಾರಣ ಕೊಟ್ಟು ಕಳಿಸಿದ್ದ..ಆದ್ರೆ ಚಿನ್ನಾಭರಣ ತೆಗೆದುಕೊಳ್ಳಬೇಕಾದ ವ್ಯಕ್ತಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ..ಹೀಗಾಗಿ ಬಾಲರಾಜ್ ತಾನಾಗಿಯೇ ಶ್ವೇತಾಗೌಡಗಳಿ ಕರೆ ಮಾಡಿ ಚಿನ್ನಾಭರಣ ತೆಗೆದುಕೊಳ್ಳುವಂತೆ ಹೇಳಿದ್ದ ಸಾಲದಕ್ಕೆ ಚಿನ್ನಾಭರಣದ ಫೋಟೋ ಕೂಡ ಕಳಿಸಿದ್ದ ..ಫೋಟೊ ನೋಡಿದ್ದೇ ತಡ ಈ ಒಡವೆಗಳು ನಮಗೆ ಬೇಕು ಅಂತ ಶ್ವೇತಾ ಹೇಳಿದ್ದಾಳೆ..ಯುಬಿ ಸಿಟಿ ಬಳಿಯ ಕಾಫಿ ಡೇ ನಲ್ಲಿ ಚಿನ್ನಾಭರಣ ಡಿಲವರಿ ಮಾಡಿದ್ದ ಬಾಲರಾಜ್ ತಮ್ಮನಿಗೆ..ಶ್ವೇತಾ ಗೌಡ 5 ಲಕ್ಷದ ಎರಡು ಚೆಕ್ ಹಾಗು 6 ಲಕ್ಷದ ಮತ್ತೊಂದು ಚೆಕ್ ನೀಡಿ ಉಳಿದ 4 ಲಕ್ಷದ 75 ಸಾವಿರ ಹಣ ಆರ್ ಟಿ ಜಿಎಸ್ ಮಾಡುವುದಾಗಿ ಹೇಳಿದ್ಳು..
ಆದ್ರೆ ಅದು ಮಾಡಲೇ ಇಲ್ಲ ಜೊತೆಗೆ ಳ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ಳು.. ಶ್ವೇತಾಗೌಡ ನೀಡಿದ್ದ ಚೆಕ್ಗಳನ್ನು ಪ್ರೊಡ್ಯೂಸ್ ಮಾಡಿದಾಗ ಚೆಕ್ಬೌನ್ಸ್ ಆಗಿದೆ..ಇದಾದ ಬಳಿಕ ಬಾಲರಾಜ್ ಆಕೆಯನ್ನ ಸಂಪರ್ಕ ಮಾಡಲು ಯತ್ನಿಸಿದ್ದು..ಅಷ್ಟರಲ್ಲಾಗಲೇ ಕರ್ಮಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಶ್ವೇತಾಗೌಡ ಬಂಧನವಾಗಿರೋದು ಗೊತ್ತಾಗಿದೆ. ಸದ್ಯ ಮೋಸಹೋಗಿರೊ ಚಿನ್ನದ ವ್ಯಾಪಾರಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ