ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ದೊಡ್ಮನೆಗೆ ಹೋಗಿ ಬಂದ ಬಳಿಕ ಸಾಕಷ್ಟು ಖ್ಯಾತಿ ಘಳಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ನಟಿ ತನಿಷಾ ಜೊತೆ ಆತ್ಮೀಯವಾಗಿದ್ದು ವರ್ತೂರು ಸಂತೋಷ್ ದೊಡ್ಮನೆಯಿಂದ ಹೊರ ಬಂದ ಬಳಿಕವೂ ಆ ಸ್ನೇಹ ಮುಂದುವರೆಸಿದ್ದಾರೆ. ಇವರಿಬ್ಬರನ್ನು ನೋಡಿದ ಹಲವರು ಸೂಪರ್ ಜೋಡಿ ಎಂದಿದ್ದರು. ಇದೀಗ ವರ್ತೂರು ಸಂತೋಷ್ ಮದುವೆಗೆ ಸಜ್ಜಾಗಿದ್ದಾರೆ. ಅಂದ ಹಾಗೆ ವರ್ತೂರು ಸಂತೋಷ್ ಮದುವೆಯಾಗುತ್ತಿರುವುದು ತನಿಷಾ ಅವರನ್ನಲ್ಲ.
ಹಳ್ಳಿಕಾರ ಒಡೆಯ ಎಂದೇ ಫೇಮಸ್ ಆಗಿರುವ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಲ್ಲಿದ್ದ ವೇಳೆ ಸಂತೋಷ್ಗೆ ಮದುವೆಯಾಗಿದೆ ಎನ್ನುವ ವಿಚಾರ ಬಯಲಾಯ್ತು. ಮೊದಲ ಪತ್ನಿಯ ತಂದೆ ಮಾಧ್ಯಮಗಳ ಮುಂದೆ ಬಂದು ವರ್ತೂರು ಸಂತೋಷ್ ವಿರುದ್ಧ ಆರೋಪಗಳನ್ನು ಮಾಡಿದ್ದರು. ಕೆಲ ದಿನಗಳ ಕಾಲ ವರ್ತೂರು ಸಂತೋಷ ಮದುವೆ ಬಗ್ಗೆ ಮಾತಾಡಿರಲಿಲ್ಲ. ಬಳಿಕ ಸ್ಪರ್ಧಿಗಳ ಜೊತೆ ಮದುವೆ ಆಗಿರುವ ಬಗ್ಗೆ ಹೇಳಿಕೊಂಡಿದ್ದರು.
ಸಂದರ್ಶನವೊಂದರಲ್ಲಿ ಮಾತಾಡಿದ ವರ್ತೂರು ಸಂತೋಷ್, ನನ್ನ ಜೀವನದಲ್ಲೇ ಏನೇನೋ ನಡೆದು ಹೋಗಿದೆ ಅದು ನಿಮಗೂ ಗೊತ್ತು ಎಂದಿದ್ದಾರೆ. ಹಾರಿ ಹೋದ ಬಳ್ಳಿಯಿಂದ ಹೂವು ಅರಳೋದಿಲ್ಲ. ಹಿಂದಿನ ಕಥೆ ಮುಗಿದಿದೆ ಎಂದ ಸಂತೋಷ್, ನನ್ನ ಜೀವನದಲ್ಲಿ ಹೊಸ ಪ್ರೀತಿಕಥೆ ಶುರುವಾಗಿದೆ ಎಂದಿದ್ದಾರೆ.
ನನ್ನ ಜೀವನಕ್ಕೆ ಒಂದು ಹುಡುಗಿಯ ಪ್ರವೇಶವಾಗಿದೆ. ನಾವಿಬ್ಬರೂ ತುಂಬಾ ಚೆನ್ನಾಗಿದ್ದೇವೆ. ಫೋನ್, ಮೆಸೇಜ್ ಹಾಗೂ ಮೀಟ್ ಮಾಡ್ತಾ ಖುಷಿಯಾಗಿದ್ದೇವೆ. ಆದ್ರೆ ಆ ಹುಡುಗಿ ತನಿಷಾ ಅಲ್ಲ ನಮ್ಮ ಸಂಬಂಧಿಕರ ಹುಡುಗಿಯನ್ನ ನಾನು ಮದುವೆ ಆಗೋದಾಗಿ ವರ್ತೂರು ಸಂತೋಷ್ ಹೇಳಿಕೊಂಡಿದ್ದಾರೆ.