ಬೆಂಗಳೂರು: ಹಳ್ಳಿಕಾರ್ ಒಡೆಯ’ ವರ್ತೂರು ಸಂತೋಷ್ ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಹುಲಿ ಉಗುರು ಪೆಂಡೆಂಟ್ ಬಳಿಕ ಇದೀಗ ಮತ್ತೊಂದು ಕೇಸ್ ದಾಖಲಾಗಿದೆ. ಪ್ರಾಣಿ ಸಾಗಾಟ ನಿಯಮವನ್ನು ಉಲ್ಲಂಘಿಸಿದ್ದಾರೆಂದು ವರ್ತೂರು ಸಂತೋಷ್ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಾಣಿಗಳ ಸಾಗಾಣಿಕೆ ನಿಯಮ ಉಲ್ಲಂಘಿಸಿ ಅಸುರಕ್ಷಿತ ರೀತಿಯಿಂದ ಪ್ರಾಣಿಗಳನ್ನು ಸಾಗಾಟ ಮಾಡಿದ್ದಾರೆಂದು ಆರೋಪಿಸಿ ಪ್ರಾಣಿ ಕಲ್ಯಾಣ ಅಧಿಕಾರಿ ಹರೀಶ್ ಎಂಬುವರು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವರ್ತೂರು ಸಂತೋಷ್ ಅನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಸಹ ಮಾಡಲಾಗಿದೆ ಎನ್ನಲಾಗುತ್ತಿದೆ. ಹಳ್ಳಿಕಾರ್ ರೇಸ್ ನಡೆಸಲು ಸಜ್ಜಾಗುತ್ತಿರುವ ವರ್ತೂರು ಸಂತೋಷ್ಗೆ ಸಂಕಷ್ಟ ಎದುರಾಗಿದೆ. ರೇಸ್ ಮಾಡಲು ಮುಂದಾಗಿದ್ದ ವರ್ತೂರ್ ಒಂದರಲ್ಲಿ ಒಂಬತ್ತು ಹೋರಿಗಳನ್ನು ತುಂಬಿ ಸಾಗಾಟ ಮಾಡಿದ್ದರಂತೆ ಅಲ್ಲದೆ ಅದೇ ಟ್ರಕ್ನಲ್ಲಿ ಕೆಲವು ವಸ್ತುಗಳನ್ನು ಸಹ ತುಂಬಿಸಿದ್ದರಂತೆ. ಇದು ಪ್ರಾಣಿ ಸಾಗಾಟ ನಿಯಮಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿ ಅಧಿಕಾರಿ ಹರೀಶ್ ವರ್ತೂರು ಸಂತೋಷ್ ವಿರುದ್ಧ ದೂರು ನೀಡಿದ್ದಾರೆ. ಈ ಕುರಿತು ನ್ಯಾಯಾಲಯದ ಮೆಟ್ಟಿಲೇರಲು ಸಹ ಹರೀಶ್ ಸಿದ್ಧವಾಗಿದ್ದಾರೆ ಎನ್ನಲಾಗುತ್ತಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)