ಬೆಂಗಳೂರು:- ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ಈಗಾಗಲೇ ಮದುವೆ ಆಗಿದೆ, ಮಗಳು ಕೂಡ ಇದ್ದಾಳೆ ಎಂದು ವರ್ತೂರ್ ಸಂತೋಷ್ ಅವರ ಮಾವ ಸತ್ಯ ಬಿಚ್ಚಿಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ನನ್ನ ಮಗಳಿಗೆ ಮನೆಯಲ್ಲಿ ಹೊಡೆದು ಬಡೆದು ಮಾಡ್ತಿದ್ದ. ದೊಡ್ಡವರಿಗೆ ತಿಳಿಸಿ ನನ್ನ ಮಗಳನ್ನ ತವರುಮನೆಗೆ ಕರೆದುಕೊಂಡು ಬಂದ್ವಿ. ದೊಡ್ಡವರಿಗೆಲ್ಲ ತಿಳಿಸಿದ್ದಕ್ಕೆ ನಿಮ್ಮ ಮನೆಗೆ ಕರೆದುಕೊಂಡು ಹೋಗ್ರಿ ಅಂದ್ರು. ಇವಾಗ ಒಂದು ಹೆಣ್ಣು ಮಗು ಆಗಿದೆ. ಪ್ರೆಗ್ನೆಂಟ್ ಆಗಿದ್ದ ನನ್ನ ಮಗಳನ್ನ ಹೊಡೆಯುತ್ತಿದ್ದ ನಾವಿದನ್ನ ನೋಡಿಕೊಂಡಿರಬೇಕಿತ್ತಾ…!? ಅವರ ಮನೆಯವರು ಕಂಪ್ಲೆಂಟ್ ಕೊಡಬೇಡಿ ಅಂದಿದ್ರು. ಬೇಡ ಅಂತೇಳಿ ನಾವು ಮಗಳನ್ನ ಕರೆದುಕೊಂಡು ಬಂದ್ವಿ ಎಂದರು.
ಇನ್ನೂ ನಮ್ಮ ಮಗಳ ಕುತ್ತಿಗೆಗೆ ಸಂತೋಷ್ ಚಾಕು ಇಟ್ಟಿದ್ದ. ಮಗಳನ್ನ ತವರಿಗೆ ಕರೆದುಕೊಂಡು ಬಂದು ಎರಡು ವರ್ಷ ಆಯ್ತು. ಇದುವರೆಗೂ ಹೆಂಡ್ತಿ ಮಗಳನ್ನ ನೋಡಲಿಕ್ಕೆ ಬಂದಿಲ್ಲ. ಬಿಗ್ ಬಾಸ್ ಹೋದ್ಮೇಲೆ ಗೊತ್ತಾಗ್ತಿದೆ ಬೇರೆ ಮದುವೆ ಆಗ್ತಾನಂತೆ ಅಂತ. ಮಾರ್ಚ್ 05 2020 ರಂದು ನನ್ನ ಮಗಳೊಂದಿಗೆ ಸಂತೋಷ್ ಮದುವೆ ಆಗಿತ್ತು. 12 ಸಾವಿರ ಜನ ಮದುವೆ ರಿಸೆಪ್ಷನ್ ಗೆ ಬಂದಿದ್ರು. ಹೊಸಕೋಟೆ ಬಳಿಯ ಕಾಟಂನಲ್ಲೂರು ಗೇಟ್ ಬಳಿ ಬರುವ ಕೆ.ಎಂ.ಎಂ ರಾಯಲ್ ನಲ್ಲಿ ಅದ್ದೂರಿ ಮದುವೆ ಆಗಿತ್ತು. ಸಿಂಗಲ್ ಪೈಸಾ ಪಡೆಯದೇ ಅದ್ದೂರಿಯಾಗಿ ಮಗಳ ಮದುವೆ ಮಾಡಿದ್ದೀನಿ. ಕರಗ ಹೊರುತ್ತೇನೆಂದು ಹೇಳಿ ನನಗೆ ಮೋಸ ಮಾಡ್ಬಿಟ್ಟ.
ಸುದೀಪ್ ಇವನನ್ನು ಹಳ್ಳಿಕಾರ್ ಎಂದು ನಂಬಿದ್ದಾರೆ ಪಾಪ. ಒಂದೊಂದು ಮಾತು ಒಂದೊಂದು ಅಕ್ಷರದಲ್ಲೂ ಬರೀ ಸುಳ್ಳೇ ಇದೆ. MSC ಮಾಡಿರುವ ನನ್ನ ಮಗಳನ್ನ ಮದುವೆ ಮಾಡಿ ಕೊಟ್ಟಿದ್ದು. ಮಣ್ಣಲ್ಲಿ ಕಾಲು ಪಾದ ಇಟ್ಟಿರಲಿಲ್ಲ ನನ್ನ ಮಗಳನ್ನ ಹಾಗೇ ಸಾಕಿದ್ದೆ.ಅಂತ ನನ್ನ ಮಗಳನ್ನ ಕಾಲಲ್ಲಿ ಒದ್ದಿದ್ದಾನೆ. ಸಂತೋಷ್ ಐಯಾಮ್ ನಾಟ್ ಮ್ಯಾರೀಡ್, ಐಯಾಮ್ ಅನ್ ಮ್ಯಾರೀಡ್ ಅಂತೇಳಿದ್ದಾನೆ. ಡಿ.ಎನ್.ಎ ಮಾಡಬೇಕು ಮಗಳ ಬಗ್ಗೆ ಅಂತೇಳ್ತಾನೆ. ನಮ್ಮ ರಾಜ್ಯದ ರೈತರಲ್ಲಿ ಅವನಷ್ಟು ಸುಳ್ಳು ಹೇಳುವವನು ಯಾರು ಇಲ್ಲ. ನಾನು ಒಬ್ಬ ರೈತ ಪ್ರತಿವರ್ಷ ಏಳು ಲಕ್ಷ ಟ್ಯಾಕ್ಸ್ ಕಡ್ತೀನಿ ಅವನು ಯಾವ ರೈತನೂ ಅಲ್ಲ. ಅವನೊಬ್ಬ ಡ್ರಗ್ ಅಡಿಕ್ಟ್ ಆಗಿದ್ದ ಸ್ಪಂದನಾ ಆಸ್ಪತ್ರೆಗೂ ಸೇರಿಸಿದ್ವಿ ಎಲ್ಲಾ ಡಾಕ್ಯುಮೆಂಟ್ ಇದೆ ಎಂದು ಹೇಳಿದ್ದಾರೆ.