ಬಿಗ್ ಬಾಸ್ ಸೀಸನ್ 10ರಲ್ಲಿ ತಮ್ಮ ಸ್ನೇಹದ ಮೂಲಕವೇ ಸಖತ್ ಫೇಮಸ್ ಆಗಿ ಸಂತು ಪಂತು ಎಂದೇ ಕರೆಸಿಕೊಂಡಿದ್ದ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕವೂ ತಮ್ಮ ಸ್ನೇಹ ಮುಂದುವರೆಸಿದ್ದಾರೆ. ಇತ್ತೀಚೆಗೆ ವರ್ತೂರು ಸಂತೋಷ್ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೂಕಲಿ ಸಂತೋಷ್ ಆಗಮಿಸಿದ್ದು ಈ ವೇಳೆ ವರ್ತೂರು ತುಕಾಲಿಗೆ ಚಿನ್ನದ ಉಡುಗೊರೆಯನ್ನು ನೀಡಿದ್ದಾರೆ.
ವರ್ತೂರು ಸಂತೋಷ್ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸಿದ್ದ ಸಾಕಷ್ಟು ಮಂದಿ ಕಂಟೆಸ್ಟೆಂಟ್ ಗಳು ಹಾಜರಿದ್ದರು. ಈ ವೇಳೆ ವರ್ತೂರು ಎಲ್ಲರನ್ನು ಸತ್ಕರಿಸಿ ಸನ್ಮಾನಿಸಿದ್ದರು.
ಈ ವೇಳೆ ತಮ್ಮ ಆತ್ಮೀಯ ಸ್ನೇಹಿತ ತುಕಾಲಿ ಸಂತೋಷ್ ಗೆ ಚಿನ್ನದಲ್ಲಿ ಮಾಡಿಸಿರುವ ಸಂತು-ಪಂತು ಹೆಸರಿನ ಲಾಕೆಟ್ ನೀಡಿದ್ದಾರೆ. ಇದೇ ರೀತಿಯ ಲಾಕೆಟ್ ಅನ್ನು ವರ್ತೂರು ಸಂತೋಷ್ ಕೂಡ ಧರಿಸಿದ್ದರು. ತಮ್ಮಿಬ್ಬರ ಸ್ನೇಹ ಶಾಶ್ವತವಾಗಿರಲಿ ಎನ್ನುವ ಕಾರಣಕ್ಕಾಗಿ ಈ ಪದಕವನ್ನು ನೀಡಿರುವುದಾಗಿ ವರ್ತೂರು ಸಂತೋಷ್ ಹೇಳಿಕೊಂಡಿದ್ದಾರೆ.
ನನ್ನ ನೆಚ್ಚಿನ ಅಣ್ಣ ಕೊಟ್ಟಿರುವ ಈ ಗಿಫ್ಟ್ ಅನ್ನು ಯಾವಾಗಲೂ ಧರಿಸಿಕೊಂಡು ಇರುತ್ತೇನೆ. ಇದು ಅವರು ನನಗೆ ನೀಡಿರುವ ಮರೆಯಲಾರದಂತಹ ವಸ್ತು ಎಂದು ಹೇಳಿ ಭಾವುಕರಾದ ತುಕಾಲಿ ಸಂತೋಷ್ ಈ ವೇಳೆ ವರ್ತೂರು ಸಂತೋಷ್ ನೆಡೆಸಿಕೊಡುವ ಹಳ್ಳಿಕಾರ್ ರೇಸ್ ಗೆ ತಾವೇ ನಿರೂಪಣೆ ಮಾಡುವುದಾಗಿಯೂ ಹೇಳಿದರು.