ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಗುರುದೇವ ಬ್ರಹ್ಮಾನಂದರ ೧೫೯ನೇ ಮತ್ತು ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ೮೧ನೇ ಜಯಂತಿ ಮಹೋತ್ಸವ, ಮೂರನೇ ಪೀಠಾಧ್ಯಕ್ಷರಾದ ಶ್ರೀಗುರುಸಿದ್ದೇಶ್ವರ ಮಹಾಸ್ವಾಮಿಗಳ ದ್ವಾದಶ ಪೀಠಾರೋಹಣ ಮಹೋತ್ಸವ, ಗುರುದೇವ ಮಂದಿರದ ಕಳಸಾರೋಹಣ, ಗುರುಭವನ ಮತ್ತು ಗ್ರಂಥಗಳ ಲೋಕಾರ್ಪಣೆ ಹಾಗೂ ಮಕರ ಸಂಕ್ರಮಣ ಮಹೋತ್ಸವ ಕಾರ್ಯಕ್ರಮಗಳು ಡಿ.೨೯ರಿಂದ ಜ.೧೪ರ ವರೆಗೆ ಶ್ರೀಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಜರುಗಲಿವೆ.
ಚಳಿಗಾಲದಲ್ಲಿ ಸೆಕ್ಸ್ ಮಾಡೋದು ಒಳ್ಳೆಯದಾ? ತಜ್ಞರು ಹೇಳಿದ್ದೇನು ಗೊತ್ತಾ?
ಡಿ.೨೯ರಂದು ಮುಂಜ.೯ಕ್ಕೆ ಪ್ರಣವ ಧ್ವಜಾರೋಹಣ ನಡೆಯಲಿದ್ದು, ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಚಿಮ್ಮಡದ ರಘುನಾಥಪ್ರೀಯ ಶ್ರೀಜನಾರ್ಧನ ಮಹಾರಾಜರ ಸಮ್ಮುಖದಲ್ಲಿ ನಡೆಯಲಿದೆ. ಅದೇ ದಿನ ಸಂಜೆ ೪ಕ್ಕೆ ಗುರುದೇವರ ಉತ್ಸವಕ್ಕೆ ಶಾಸಕ ಸಿದ್ದು ಸವದಿ ಚಾಲನೆ ನೀಡಲಿದ್ದು, ಶ್ರೀಗುರುದೇವ ಬ್ರಹ್ಮಾನಂದ ಶಿವಯೋಗಿಗಳ ಬೆಳ್ಳಿ ಮೂರ್ತಿ, ಗುರುದೇವ ಮಂದಿರದ ೩೪ ಕಳಶಗಳು, ದ್ವಾದಶ ಪೀಠಾರೋಹಣ ನಿಮಿತ್ಯ ಶ್ರೀಗುರುಸಿದ್ದೇಶ್ವ ಮಹಾಸ್ವಾಮಿಗಳ ಕಿರೀಟಗಳ ಭವ್ಯ ಮೆರವಣಿಗೆ ರಾಮಪೂರದ ಶ್ರೀನೀಲಕಂಠೇಶ್ವರ ಮಠದಿಂದ ರಬಕವಿಯ ಬ್ರಹ್ಮಾನಂದ ಆಶ್ರಮದವರೆಗೆ ಪೂರ್ಣ ಕುಂಭ, ಕಳಶ, ಆರತಿ, ನಂದಿಕೋಲು, ಕಹಳೆ, ಡೊಳ್ಳು ಮೇಳ, ಬ್ಯಾಂಡ್ಮೇಳ, ದಾನೇಶ್ವರಿ ಮಹಿಳಾ ಮಂಡಳದ ವಾರ್ಕರಿ ನೃತ್ಯ, ಭಜನೆ, ಸಮ್ಮಾಳ, ಕರಡಿ ಮಜಲು, ಸಕಲ ವಾದ್ಯಗಳೊಡನೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಆಶ್ರಮಕ್ಕೆ ಆಗಮಿಸಲಿದೆ.
ಡಿ.೩೦ರಂದು ಗುರುದೇವರ ಕಾರ್ತಿಕೋತ್ಸವ, ಅನುಭಾವದಂಗಳ-೧೪೫, ಮಹಾತ್ಮರ ಚರಿತಾಮೃತ ಪ್ರವಚನ ಆರಂಭಗೊಳ್ಳಲಿದೆ. ಗುಳೇದಗುಡ್ಡದ ಬಸವರಾಜ ಪಟ್ಟದಾರ್ಯಶ್ರೀ, ಘೋಡಗೇರಿಯ ಮಲ್ಲಯ್ಯಶ್ರೀ, ದಾವಣಗೆರೆಯ ಡಾ.ಬಸವಪ್ರಭು ಶ್ರೀ, ರಬಕವಿಯ ಗುರುಮಹಾಂತ ಶ್ರೀ, ರನ್ನಬೆಳಗಲಿಯ ಸಿದ್ಧರಾಮಶ್ರೀ ಪಾಲ್ಗೊಳ್ಳಲಿದ್ದಾರೆ. ಡಿ.೩೧ರಂದು ಶಿವಸ್ರಣೆಯಲ್ಲಿ ಚಿಮ್ಮಡದ ಪ್ರಭುಶ್ರೀ, ಬನಹಟ್ಟಿಯ ಶರಣಬಸವ ಶಿವಾಚಾರ್ಯರು, ಹಳಿಂಗಳಿಯ ಶರಣಬಸವದೇವರು, ಮಲ್ಲಿಕಾರ್ಜುನ ನಾವಿ, ಡಾ.ಬಸವರಾಜ ಗೌಡರ ಪಾಲ್ಗೊಳ್ಳುವರು. ಆ.೧ರಂದು ಕಳಸಾರೋಹಣ ಹಾಗೂ ಧರ್ಮಸಭೆ ಜರುಗಲಿದ್ದು, ಗದಗನ ಅಭಿನವ ಶಿವಾನಂದಶ್ರೀ, ಕೂಡಲ ಸಂಗಮದ ಜಯಮೃತ್ಯುಂಜಯ ಶ್ರೀ, ಕರಿಕಟ್ಟಿಯ ಬಸವರಾಜಶ್ರೀ, ಹಳಿಂಗಳಿಯ ಶಿವಾನಂದಶ್ರೀ, ಹಳೆಹುಬ್ಬಳ್ಳಿಯ ಶಿವಶಂಕರ ಶುವಾಚಾರ್ಯರು, ಇಬ್ರಾಹಿಂಪುರದ ದಯಾನಂದಶ್ರೀ, ಆನಂದ ನ್ಯಾಮಗೌಡ, ಸಿದ್ದು ಕೊಣ್ಣೂರ, ಡಾ.ಪದ್ಮಜೀತ್ ನಾಡಗೌಡ, ಸಂಜೀವ ಬಳಿಗಾರ, ಅಪ್ಪು ಐಗಳಿ, ಪ್ರಕಾಶ ದೇಸಾಯಿ ಪಾಲ್ಗೊಳ್ಳಲಿದ್ದಾರೆ. ಜ.೧ರಂದು ಸಂಜೆ ಬಸವಾದಿ ಶರಂರ ಸ್ಮರಣೆಯಲ್ಲಿ ಡಂಬಳದ ಡಾ.ತೋಟಂದ ಸಿದ್ಧರಾಮಶ್ರೀ, ಬೆಳಗಾವಿಯ ಡಾ.ಅಲ್ಲಮಪ್ರಭುಶ್ರೀ, ಹಾರೂಗೇರಿಯ ಐ.ಆರ್.ಮಠಪತಿ, ಡಾ.ಎಫ್.ವ್ಹಿ.ಮಾನ್ವಿ, ಶಿವಾನಂದ ಶೆಲ್ಲಿಕೇರಿ ಪಾಲ್ಗೊಳ್ಳಲಿದ್ದು, ನಮ್ಮ ರಬಕವಿ ಕೃತಿ ಲೋಕಾರ್ಪಣೆಯಾಗಲಿದೆ.
ಡಿ.೨ರಂದು ಗುರುಭವನ ಲೋಕಾರ್ಪಣೆ ಹಾಗೂ ಧರ್ಮಸಭೆ ಜರುಗಲಿದ್ದು, ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯಶ್ರೀ, ನಿಡಸೋಸಿಯ ಶಿವಲಿಂಗೇಶ್ವರಶ್ರೀ, ಘಟಪ್ರಭಾದ ಡಾ.ಮಲ್ಲಿಕಾರ್ಜುನಶ್ರೀ, ನರಸೀಪುರದ ಶಾಂತಭೀಷ್ಮ ಚೌಡಯ್ಯಶ್ರೀ, ಶಾಸಕ ಸಿದ್ದು ಸವದಿ, ಪಿ.ಸಿ.ಗದ್ದಿಗೌಡರ, ಆರ್ಬಿ.ತಿಮ್ಮಾಪೂರ, ಹನುಮಂತ ನಿರಾಣಿ, ಉಮಾಶ್ರೀ, ಜಗದೀಶ ಗುಡಗುಂಟಿ ಪಾಲ್ಗೊಳ್ಳಲಿದ್ದಾರೆ. ತೇರದಾಳದ ಮಲ್ಲಿಕಾರ್ಜುನ ಹಲಗಲಿ ಚಿತ್ರಿಸಿದ ಶ್ರೀಗುರುದೇವರ ಹಾಗೂ ಶ್ರೀಸಿದ್ದೇಶ್ವರ ಶ್ರೀಗಳ ತೈಲ ವರ್ಣಚಿತ್ರಗಳು ಅನಾವರಣಗೊಳ್ಳಲಿವೆ. ಸಂಜೆ ಜ್ಞಾನನಿಧಿ ಚನ್ನಬಸವೇಶ್ವರ ಸ್ಮರಣೆ, ದಿ.೩ರಂದು ಅಂಕಲಗಿ ಅಡವಿಸಿದ್ದೇಶ್ವರ ಸ್ಮರಣೆ, ದಿ.೪ರಂದು ತಲೆಕಟ್ಟಿ ನಿರುಪಾಧೀಶರ ಸ್ಮರಣೆ, ದಿ.೫ರಂದು ಬನಹಟ್ಟಿ ರುದ್ರಮುನಿಶ್ರೀಗಳ ಸ್ಮರಣೆ, ದಿ.೬ರಂದು ಸಿದ್ಧಾರೂಢರ ಸ್ಮರಣೆ, ದಿ.೭ ರಂದು ಅಥಣಿ ಮುರುಘೇಂದ್ರ ಸ್ಮರಣೆ, ದಿ.೮ರಂದು ಗದಗನ ಶಿವಾನಂದಶ್ರೀ ಸ್ಮರಣೆ, ದಿ.೯ರಂದು ಗುರುದೇವ ಬ್ರಹ್ಮಾನಂದಶ್ರೀ ಸ್ಮರಣೆ, ದಿ.೧೦ರಂದು ಸಿದ್ದೇಶ್ವರಶ್ರೀ ಸ್ಮರಣೆ, ದಿ.೧೧ರಂದು ನಿಜಗುಣ ಶಿವಯೋಗಿಗಳ ಸ್ಮರಣೆ, ದಿ.೧೨ರಂದು ಸ್ವಾಮಿ ವಿವೇಕಾನಂದ ಸ್ಮರಣೆ, ದಿ.೧೩ರಂದು ಗುರು ಪರಂಪರೆ ಸ್ಮರಣೆ, ದಿ.೧೪ರಂದು ಪೀಠಾರೋಹಣ ಹಾಗೂ ಮಕರ ಸಂಕ್ರಮಣ ಮಹೋತ್ಸವ ನಡೆಯುತ್ತದೆಂದು ಗುರುಸಿದ್ದೇಶ್ವರ ಶ್ರೀಗಳು ಹೇಳಿದರು.
ಇದೇ ಸಂದರ್ಭದಲ್ಲಿ ಗಿರೀಶ ಮುತ್ತೂರ, ಬಾಲಚಂದ್ರ ಹೊಸಕೋಟಿ, ಶ್ರೀಕಾಂತ ಮೇಲಿನಮನಿ, ಸುರೇಶ ಗೊಲಭಾಂವಿ, ಮಹಾದೇವ ಕವಿಶೆಟ್ಟಿ, ಶಿವಾನಂದ ದಾಶಾಳ, ಬುದ್ದಪ್ಪ ಕುಂದಗೋಳ ಸೇರಿದಂತೆ ಪ್ರಮುಖರಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ