ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಮತ್ತು ಶುಕ್ರವಾರ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ವಾಗಲಿದೆ. ಕಾವೇರಿ 5ನೇ ಹಂತ ಯೋಜನೆ ಅನುಷ್ಠಾನ ಸಂಬಂಧ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಜೂನ್ 6 ರಂದು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ನೀರು ಪೂರೈಕೆ ಸ್ಥಗಿತವಾಗಲಿದೆ. ಕಾವೇರಿ-1, 2 ಹಾಗೂ 3 ಹಂತಗಳ ಘಟಕಗಳು ಬಂದ್ ಆಗಲಿದೆ.
Cardamom: ಕಡಿಮೆ ಬಂಡವಾಳ, ಅಧಿಕ ಲಾಭ..! ಈ ಏಲಕ್ಕಿ ಬೆಳೆಯಿಂದ ಲಕ್ಷಗಟ್ಟಲೆ ಲಾಭ!
ಕಾವೇರಿ 4ನೇ ಹಂತದ ಒಂದನೇ ಮತ್ತು ಎರಡನೇ ಘಟಕಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ2 ವರೆಗೆ ಬಂದ್ ಆಗಲಿರುವ ಕಾರಣ ಎರಡು ದಿನ ಬೆಂಗಳೂರು ನಗರದಲ್ಲಿ ನೀರು ಪೂರೈಕೆ ಸ್ಥಗಿತವಾಗಲಿದೆ. ಘಟಕಗಳು ಬಂದ್ ಆಗಿರುವ ಕಾರಣ ಜೂನ್ 6 ಮತ್ತು 7 ರಂದು ನೀರು ಶೇಖರಿಸಿಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿ ಮನವಿ ಮಾಡಿದೆ.