ಜೋಳಿಗೆ ಇಲ್ಲದ ಜಂಗಮ ಎಂದೇ ಖ್ಯಾತರಾಗಿರುವ ಗಾಣಿಗ ಗುರುಪೀಠದ ಪ್ರಥಮ ಜಗದ್ಗುರು ಪೂಜ್ಯ ಶ್ರೀ ಜಯದೇವ ಜಗದ್ಗುರುಗಳ 8 ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಜನೇವರಿ 12 ರವಿವಾರದಂದು ನಗರದ ಜಿ.ಪಂ. ರಸ್ತೆಯಲ್ಲಿರುವ ವನಶ್ರೀ ಸಂಸ್ಥಾನ ಮಠದಲ್ಲಿ ಜಯದೇವ ಜಗದ್ಗುರುಗಳ ಪ್ರಣವ ಮಂಟಪ ಲೋಕಾರ್ಪಣೆ, ವೃತ್ತ ಉದ್ಘಾಟನೆ, ಗುರುಭವನ ಭೂಮಿಪೂಜೆ ಹಾಗೂ ಧಾರ್ಮಿಕ ಸಭೆ ವಿಜೃಂಬಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಗಾಣಿಗ ಸಮಾಜ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.
ವಿಜಯಪುರ ನಗರದ ವನಶ್ರೀ ಸಂಸ್ಥಾನಮಠದಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ, ಜ. 12 ರಂದು ಬೆಳಿಗ್ಗೆ 9 ಕ್ಕೆ ನಗರದ ಸಿದ್ದೇಶ್ವರ ದೇವಸ್ಥಾನದಿಂದ ವನಶ್ರೀ ಮಠದವರೆಗೂ ಜಯದೇವ ಜಗದ್ಗುರುಗಳ ಭಾವಚಿತ್ರದೊಂದಿಗೆ, 1111 ಮಹಿಳೆಯರಿಂದ ಕುಂಭಮೇಳ ಮೆರವಣಿಗೆ ನಡೆಯಲಿದೆ. ನಂತರ ಶ್ರೀಮಠದ ಆವರಣದಲ್ಲಿ ನೂತನ ಗುರುಭವನ ಕಟ್ಟಡ ನಿರ್ಮಾಣಕ್ಕೆ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಮತ್ತು ಸಕ್ಕರೆ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಭೂಮಿಪೂಜೆ ನೆರವೇರಿಸುವರು.
Sour Curd: ಹುಳಿ ಬಂದ ಮೊಸರಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ.? ಇಲ್ಲಿದೆ ಮಾಹಿತಿ
ಜಿ.ಪಂ ಮುಖ್ಯ ರಸ್ತೆಯಲ್ಲಿ ನಿರ್ಮಿಸಿರುವ ಜಯದೇವ ಜಗದ್ಗುರುಗಳ ವೃತ್ತವನ್ನು ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಎಸ್. ಸವದಿ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೂತನ ವೃತ್ತ ಅನಾವರಣಗೊಳಿಸುವರು. ಪೂಜ್ಯ ಜಯದೇವ ಜಗದ್ಗುರುಗಳ ಪ್ರಣವ ಮಂಟಪವನ್ನು ಬಾಗಲಕೋಟೆ ಸಂಸದರಾದ ಪಿ.ಸಿ.ಗದ್ದಿಗೌಡರ ಲೋಕಾರ್ಪಣೆಗೊಳಿಸುವರು.
ನಂತರ ಧಾರ್ಮಿಕ ಸಮಾವೇಶ ನಡೆಯಲಿದೆ, ಈ ಕಾರ್ಯಕ್ರಮ ದಲ್ಲಿ ಅವಳಿ ಜಿಲ್ಲೆಯ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಹಾಲಿ ಮಾಜಿ ಜನಪ್ರತಿನಿಧಿಗಳು, ಸಮಾಜದ ಪ್ರಮುಖರು, ಸಮಾಜದ ಜಗದ್ಗುರು ಜಯದೇವ ಶಿವಯೋಗೇಶ್ವರ ಟ್ರಸ್ಟ್, ಜಿಲ್ಲಾ ಗಾಣಿಗ ಸಮಾಜ ಸಂಘ, ಅಖಿಲ ಭಾರತ ಗಾಣಿಗ ಸಂಘ, ಜಿಲ್ಲಾ ಗಾಣಿಗ ನೌಕರರ ಸಂಘ, ಯುವ ಗಾಣಿಗ ಸಂಘ, ಅಕ್ಕನ ಬಳಗದ ಜಿಲ್ಲೆಯ ಹಾಗೂ ತಾಲ್ಲೂಕು ಪದಾಧಿಕಾರಿಗಳು ಉಪಸ್ಥಿತರಿರುವರು ಎಂದರು…