ಹಾವೇರಿ: ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಟ್ಟಿದ್ದನ್ನು ಸ್ವಾಗತಿಸಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಲ್ಲಿ ವಾಲ್ಮೀಕಿ ಮಂದಿರವನ್ನು ಸಹ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆಯೋಧ್ಯೆ ವಿಮಾನ ನಿಲ್ದಾಣಕ್ಕೆ ಹೆಸರಿಟ್ಟಿದ್ದು ಸಂತಸ ನಾವು ಸ್ವಾಗತ ಮಾಡುತ್ತೇವೆ.
Curry Leaves: ಕರಿಬೇವಿನ ಎಲೆಗಳು ಅಡುಗೆಗೂ ಸೈ, ಆರೋಗ್ಯಕ್ಕೂ ಸೈ..! ಇದರಿಂದಿವೆ ಅನೇಕ ಪ್ರಯೋಜನ
ಈ ಬಗ್ಗೆ ಈ ಹಿಂದೆಯೇ ನಾವು ಒತ್ತಾಯ ಮಾಡಿದ್ದೆವು. ಇದರೊಂದಿಗೆ ಅಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರಕ್ಕಾಗಿಯೂ ನಾವು ಡಿಮ್ಯಾಂಡ್ ಮಾಡಿದ್ದೇವೆ. ರಾಮನ ಪರಿಚಯ ಮಾಡಿಸಿದವರು ವಾಲ್ಮೀಕಿ. ಈಗ ಒಂದು ಹಂತಕ್ಕೆ ಬಂದಿದ್ದು ವಾಲ್ಮೀಕಿ ಮಂದಿರವೂ ಆಗಬೇಕು. ಈ ಕುರಿತಂತೆ ಸಭೆಯಲ್ಲಿ ಕೂಡಾ ಚರ್ಚೆ ಮಾಡಿದ್ದೇವೆ ಎಂದು ಜಾರಕಿಹೊಳಿ ತಿಳಿಸಿದರು.
ಅಯೋಧ್ಯೆಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಮಂದಿರ ಆಗಿದೆ. ಬಹಳ ಜನರ ನಿರೀಕ್ಷೆ ಇತ್ತು. ಒಳ್ಳೆಯ ರೀತಿಯಲ್ಲಿ ತಯಾರಾಗಿದೆ. ಪ್ರತಿಷ್ಠಿತ ಮಂದಿರ ಆಗಿದೆ. ಬಹಳಷ್ಟು ಮಂದಿರದಲ್ಲಿ ಇದೂ ಒಂದಾಗಿದೆ. ಮಾರ್ಡನ್ ಅರ್ಕಿಟೆಕ್ ನಿಂದ ಕೂಡಿದೆ ಎಂದು ಜಾರಕಿಹೊಳಿ ತಿಳಿಸಿದರು.