ಬೆಂಗಳೂರು:- ರಾಜ್ಯ ರಾಜಕೀಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಅದರಂತೆ ಮೂವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ತೆಂಗು ಉತ್ಪಾದನೆ; ಕೇರಳ ಹಿಂದಿಕ್ಕಿದ ಕರ್ನಾಟಕ ರಾಜ್ಯಕ್ಕೆ ದೇಶದಲ್ಲೇ ಅಗ್ರಸ್ಥಾನ!
ಹೀಗಾಗಿ ಮಾಜಿ ಸಚಿವ ನಾಗೇಂದ್ರಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಪ್ರಕರಣದ ಪ್ರಮುಖ ಆರೋಪಿ ಚಂದ್ರಮೋಹನ್ ಮತ್ತು ಕುಟುಂಬಸ್ಥರಿಗೆ ಸಿಬಿಐ ನೋಟಿಸ್ ನೀಡಿದ್ದು, ಈ ಹಿಂದೆ ಚಂದ್ರಮೋಹನ್ ವಾಲ್ಮೀಕಿ ಪ್ರಕರಣದಲ್ಲಿ 89 ಕೋಟಿ ರೂ. ವರ್ಗಾವಣೆ ಮಾಡಿದ್ದ ಆರೋಪ ಹೊಂದಿದ್ದರು.
ಕೋಟಿ ಕೋಟಿ ಹಣವನ್ನು ಶೇಕಡಾವಾರು ಲೆಕ್ಕದಲ್ಲಿ ವಹಿವಾಟು ಮಾಡಿದ್ದ ಚಂದ್ರಮೋಹನ್ 100ಕ್ಕೂ ಹೆಚ್ಚು ನಕಲಿ ಅಕೌಂಟ್ಗಳ ಸೃಷ್ಟಿ ಮಾಡಿ ಚಂದ್ರಮೋಹನ್ ಹಾಗೂ ಕುಟುಂಬಸ್ಥರು ಸೇರಿ ಹಣ ಗಳಿಸಿದ್ದರು. ಈಗಾಗಲೇ ಪರಶುರಾಮ್, ಸತ್ಯನಾರಾಯಣ ಇಟಕಾರಿಗೆ ನೋಟಿಸ್ ನೀಡಿದ್ದ ಸಿಬಿಐ ಇದೀಗ ವಿಚಾರಣೆ ನಡೆಸುತ್ತಿದೆ.