ಕಲಬುರಗಿ: ಎರಡನೇ ತಿರುಪತಿ ಅಂತಾನೇ ಪ್ರಸಿದ್ಧಿ ಪಡೆದಿರುವ ಕಲಬುರಗಿಯ ಸೂಗೂರುK ವೆಂಕಟೇಶ್ವರನ ಸನ್ನಿಧಿಯಲ್ಲಿ ಇವತ್ತು ವೈಕುಂಠ ಏಕಾದಶಿ ಸಂಭ್ರಮ ಕಳೆಗಟ್ಟಿದೆ.. ಹೀಗಾಗಿ ಇಂದು ಮತ್ತು ನಾಳೆ ದ್ವಾದಶಿಗೆ ವಿಶೇಷ ದರ್ಶನ ಪಡೆಯಲು ಭಕ್ತರ ದಂಡೇ ಆಗಮಿಸುತ್ತಿದೆ. ಸನ್ನತದಾಸ ಮಹಾರಾಜರ ನೇತ್ರತ್ವದಲ್ಲಿ ವಿಶೇಷ ಪೂಜೆ ನಡೆಯಲಿದ್ದು ಲಕ್ಷ್ಮಿ ಪದ್ಮಾವತಿ ದೇವಿಗೆ ಸಹಸ್ರ ಅರ್ಚನ ನೆರವೇರಲಿದೆ.
ಈ ಉತ್ಸವ ಕಣ್ತುಂಬಿಕೊಳ್ಳಲು ಆಗಮಿಸೋ ಭಕ್ತರಿಗೆ ಲಡ್ಡು ಪ್ರಸಾದ ನೀಡಲು ದೇಗುಲ ಸಮಿತಿ ತಯಾರಾಗಿದೆ.. ಕ್ಷೀರ ಸಾಗರ ಯೋಗ ಮುದ್ರೆಯ ಶೇಷಸಾಯಿ ಮೇಲೆ ಶಯನಿಸಿದ ಶ್ರೀಹರಿಯು ಎದ್ದೇಳಿದ ದಿನವೇ ಏಕಾದಶಿ ಅನ್ನೋದು ವಿಶೇಷ..