ದೊಡ್ಡಬಳ್ಳಾಪುರ: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎರಡನೆ ಬಾರಿಗೆ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಕೇಂದ್ರ ಸಂಘದ ನಿರ್ದೇಶಕರಾದ ವಿ.ಎಸ್ ರವಿಕುಮಾರ್ ಇಂದು ಅವಿರೋಧವಾಗಿ ಆಯ್ಕೆಯಾದರು. ಇಂದು ನಗರಸಭೆ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರವಿಕುಮಾರ್ ಎರಡನೇ ಬಾರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದರು.
ನೂತನ ಸ್ಥಾಯಿ ಸಮಿತಿಯ ಅಧ್ಯಕ್ಷರನ್ನು ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕರಾದ ಹೆಚ್.ನಂಜೇಗೌಡ,ಮುಖಂಡರಾದ ಕೋಳೂರು ವಸಂತ್ ಕುಮಾರ್, ಸುರೇಶ್ ಕುಮಾರ್ ಎಲ್,ಅನೀಲ್ ಕುಮಾರ್ ಎಲ್, ನಾಗೇಶ್ ಆರ್,ಮೂರ್ತಿ, ಸುರೇಶ್, ಅಭಿನಂದನೆ ಸಲ್ಲಿಸಿದರು..