ನವದೆಹಲಿ:- ಇಸ್ರೊ ನೂತನ ಅಧ್ಯಕ್ಷರಾಗಿ ವಿ. ನಾರಾಯಣನ್ ನೇಮಕವಾಗಿದ್ದಾರೆ. ಇಸ್ರೊ ಹಾಲಿ ಅಧ್ಯಕ್ಷ ವಿ. ಸೋಮನಾಥ್ ಅವರಿಂದ ಅಧಿ ಕಾರವನ್ನು ನಾರಾಯಣನ್ ಅವರು ಜ. 14ರಂದು ವಹಿಸಿಕೊಳ್ಳಲಿದ್ದಾರೆ .
ಬಿಗ್ ಬಾಸ್ ಮನೆಯಿಂದ ಈ ವಾರ ಔಟ್ ಆಗೋದು ಇವರೇ: ಯಾರಿಗೆ ಬೀಳುತ್ತೆ ವೀಕ್ಷಕರ ವೋಟ್!?
ಕೇಂದ್ರ ಸಂಪುಟದ ನೇಮಕಾತಿಗಳ ಸಮಿತಿಯು ನಾರಾಯಣನ್ ಅವರನ್ನು ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇಸ್ರೊ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ .
ಜನವರಿ 14 ರಿಂದ ಭಾರತೀಯ ಬಾಹ್ಯಾಕಾಶ ಸಂಸ್ಥೆಯು ನೂತನ ಮುಖ್ಯಸ್ಥರನ್ನು ಪಡೆಯಲಿದೆ. ಎಲ್ಪಿಎಸ್ಸಿ ಮುಖ್ಯಸ್ಥರಾಗಿರುವ ನಾರಾಯಣನ್ ಅಧಿಕಾರವಧಿ ಎರಡು ವರ್ಷಗಳಾಗಿರುತ್ತದೆ. ಸ್ಪೇಸ್ ಕಮಿಷನ್ ಅಧ್ಯಕ್ಷರೂ ಆಗಿರಲಿರುವ ನಾರಾಯಣನ್, ಕ್ರಯೋಜೆನಿಕ್ ಎಂಜಿನ್ಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಪ್ರಸ್ತುತ ನಾರಾಯಣನ್ ಉನ್ನತ ಶ್ರೇಣಿಯ ಹಿರಿಯ ವಿಜ್ಞಾನಿ ಆಗಿರುವ ಅವರು, ಇಸ್ರೋದ ನಿರ್ದೇಶಕರಲ್ಲಿ ಒಬ್ಬರು. ಇಸ್ರೋದಲ್ಲಿ ಅವರು LPSC ನ ಮುಖ್ಯಸ್ಥರಾಗಿ ಮುನ್ನಡೆಸುತ್ತಿದ್ದಾರೆ. ಅಂದ್ಹಾಗೆ ಇವರ ಊರು ತಮಿಳುನಾಡಿನ ಕನ್ಯಾಕುಮಾರಿ. ತಮಿಳು ಮಾಧ್ಯಮದಲ್ಲಿ ಬಾಲ್ಯದ ಶಿಕ್ಷಣವನ್ನು ಪಡೆದುಕೊಂಡರು. ನಂತರ Cryogenic Engineering ವಿಭಾಗದಲ್ಲಿ M Tech ಪದವಿ ಪಡೆದುಕೊಂಡರು. ಐಐಟಿ ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ಪಿಹೆಚ್ಡಿ ಪಡೆದುಕೊಂಡಿದ್ದಾರೆ.