ಬೆಂಗಳೂರು:- ಕರ್ನಾಟಕದಲ್ಲಿರೋದು ಯೂಟರ್ನ್ ಸರ್ಕಾರ ಎಂದು ಹೇಳುವ ಮೂಲಕ ಛಲವಾದಿ ನಾರಾಯಣಸ್ವಾಮಿ ಸಿಡಿಮಿಡಿಗೊಂಡಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಈ ಸರ್ಕಾರಕ್ಕೆ ಉಳಿಸಿಕೊಳ್ಳಲು ಆಗುತ್ತಿಲ್ಲ. ಈ ಸರ್ಕಾರ ಯೂಟರ್ನ್ ಸರ್ಕಾರ. ನಮ್ಮನ್ನು ಹಿಟ್ ಆ್ಯಂಡ್ ರನ್ ಎನ್ನುತ್ತಾರೆ. ನೀವು ಯೂಟರ್ನ್ ಸರ್ಕಾರ. ಡಿಕೆಶಿ ಇದರ ಬಗ್ಗೆ ಶಕ್ತಿ ಯೋಜನೆ ಪರಿಷ್ಕರಣೆ ಮಾಡೋ ಬಗ್ಗೆ ಹೇಳುತ್ತಾರೆ. ರಾಮಲಿಂಗಾರೆಡ್ಡಿ ಇದರ ಬಗ್ಗೆ ಹೇಳಬೇಕು ಎಂದು ಆಗ್ರಹಿಸಿದರು
ಜನ ಏನು ಹೇಳುತ್ತಾರೋ ನೋಡೋಣ ಎಂದು ಡಿಸಿಎಂ ಪರಿಷ್ಕರಣೆ ಬಗ್ಗೆ ಹೇಳಿದ್ದಾರೆ. ವಿರೋಧ ಬಂದ ಮೇಲೆ ಹಾಗೆಲ್ಲ ಇಲ್ಲ ಅಂತ ಸಿಎಂ ಹೇಳುತ್ತಾರೆ. ಸುಳ್ಳು, ವಂಚನೆ, ಲೂಟಿ ಮಾಡೋದು ಸರ್ಕಾರ ಎಂದು ಜನರಿಗೆ ಗೊತ್ತಿದೆ. ಹಾಗಾಗಿ ಈ ಸರ್ಕಾರ ಯೂಟರ್ನ್ ಸರ್ಕಾರ ಎಂದು ಹರಿಹಾಯ್ದರು