ಚಿಕ್ಕಮಗಳೂರು:- ನಾನು ಕೊಟ್ಟ ದೂರಿನ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ? ಎಂದು ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.
Hubballi: ಗಾಯಗೊಂಡ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ವೈದ್ಯಕೀಯ ನೆರವು!
ಈ ಸಂಬಂಧ ಮಾತನಾಡಿದ ಅವರು, ಅವಾಚ್ಯ ಪದ ಬಳಕೆ ಕೇಸ್ ಗೆ ಸಂಬಂಧಿಸಿದಂತೆ ರಾತ್ರಿಯಿಡೀ 4 ಜಿಲ್ಲೆಗಳಲ್ಲಿ ವ್ಯಾನ್ನಲ್ಲಿ ನನ್ನನ್ನು ಸುತ್ತಾಡಿಸಿದ್ದಾರೆ. ಗೂಂಡಾಗಳು ನನ್ನ ಮೇಲೆ ಹಲ್ಲೆಗೈದ ಆಡಿಯೋ, ವಿಡಿಯೋ ಇದೆ. ಈ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಎಂಎಲ್ಸಿ ಸಿ.ಟಿ. ರವಿ ಹೇಳಿದ್ದಾರೆ. ಈಗಾಗಲೇ ವಿಧಾನ ಪರಿಷತ್ ಸಭಾಪತಿಗೆ ದೂರು ಕೊಟ್ಟಿದ್ದೇವೆ. ಈ ಬಗ್ಗೆ ಸಭಾಪತಿ ಏನು ಕ್ರಮ ಕೈಗೊಳ್ಳುತ್ತಾರೆ ಅಂತಾ ನೋಡಬೇಕು. ಖಾನಾಪುರದಲ್ಲಿ ನನ್ನ ಕೊಲೆ ಯತ್ನದ ಬಗ್ಗೆ ದೂರು ಕೊಟ್ಟಿದ್ದೇನೆ. ಆದರೆ ಪೊಲೀಸರು ಎಫ್ಐಆರ್ ದಾಖಲಿಸಿಲ್ಲ ಎಂದು ಸಿ.ಟಿ. ರವಿ ಆರೋಪಿಸಿದ್ದಾರೆ.
ಹೆದರಿಸಿ ಗೂಂಡಾಗಿರಿ ಮಾಡಲು ಪ್ರಜಾಪ್ರಭುತ್ವ ಅವಕಾಶ ನೀಡುವುದಿಲ್ಲ. ಸುವರ್ಣಸೌಧದಲ್ಲಿ ನನಗೆ ಬೆದರಿಕೆ ಸಂಬಂಧ ದೂರು ನೀಡುತ್ತೇನೆ. ಪೊಲೀಸರು ಅಮಾನವೀಯವಾಗಿ ನಡೆಸಿಕೊಂಡ ಬಗ್ಗೆಯೂ ದೂರು ನೀಡುತ್ತೇನೆ. ಒಬ್ಬ ಕೊಲೆ ಆರೋಪಿ, ರೌಡಿಶೀಟರ್ಗೂ ಹೀಗೆ ನಡೆಸಿಕೊಳ್ಳುವಂತಿಲ್ಲ. ನಾನೊಬ್ಬ ಎಂಎಲ್ಸಿ ಆಗಿದ್ದರೂ ಅಮಾನವೀಯವಾಗಿ ನಡೆಸಿಕೊಂಡರು. ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡುವೆ. ಹಕ್ಕುಚ್ಯುತಿ ಮಂಡನೆ ಬಗ್ಗೆಯೂ ಸಭಾಪತಿ ಜೊತೆ ಚರ್ಚಿಸಿದ್ದೇನೆ. ನಮ್ಮ ವಕೀಲರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಆರೋಗ್ಯ ಸುಧಾರಿಸಿಕೊಂಡ ನಂತರ ದೂರು ನೀಡುತ್ತೇನೆ ಎಂದು ಚಿಕ್ಕಮಗಳೂರಿನಲ್ಲಿ ಪರಿಷತ್ನ ಬಿಜೆಪಿ ಸದಸ್ಯ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.
ರಾತ್ರಿಯಿಡೀ ಊರೂರು, ಕಾಡುಮೇಡು ಸುತ್ತಿಸುವಂತೆ ಆದೇಶವಿತ್ತಾ? ಬೆಳಗಾವಿ, ರಾಯಬಾಗ, ಲೋಕಾಪುರಕ್ಕೆ ಕರೆದೊಯ್ದಿದ್ದು ಯಾಕೆ? ಖಾನಾಪುರದಲ್ಲಿ ತಲೆಗೆ ಪೆಟ್ಟು ಬಿದ್ದಿತ್ತು, ರಾಯಬಾಗದಲ್ಲಿ ಚಿಕಿತ್ಸೆ ಕೊಡಿಸಿದರು. ನನಗೆ ಗಂಭೀರ ಗಾಯವಾಗಿಲ್ಲ, ಸಣ್ಣ ಪ್ರಮಾಣದ ಗಾಯವಾಗಿದೆ. ತಲೆಯಿಂದ ಸಾಕಷ್ಟು ಹೊತ್ತು ರಕ್ತ ಸೋರುತ್ತಿದ್ದರೂ ಚಿಕಿತ್ಸೆ ಕೊಡಿಸಲಿಲ್ಲ. ನಾನು ಈ ಮೊದಲೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಕಬ್ಬಿನಗದ್ದೆ, ಜಲ್ಲಿ ಕ್ರಷರ್ನಲ್ಲಿ ರಕ್ಷಣೆ ಕೊಡಲು ಯಾರು ಹೇಳಿದ್ದು? ಎಂದು ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.