ಭಾರತದಲ್ಲಿ ವಿಶೇಷವಾಗಿ ಸಿಗುವಂತಹ ಒಂದೆಲಗ ಎನ್ನುವ ತುಂಬಾ ಸಣ್ಣ ಗಿಡಮೂಲಿಕೆಯು ಜೌಗು ಪ್ರದೇಶ ಮತ್ತು ನೈಸರ್ಗಿಕವಾಗಿ ಹರಿಯುವ ನೀರಿನ ಪ್ರದೇಶಗಳಲ್ಲಿ ಬೆಳೆಯುವುದು. ಇದನ್ನು ತರಕಾರಿಯಾಗಿಯೂ ಪ್ರತಿನಿತ್ಯ ಸೇವಿಸಬಹುದು ಮತ್ತು ಔಷಧಿಗೆ ಗಿಡಮೂಲಿಕೆಯಾಗಿಯೂ ಬಳಸಬಹುದು. ಒಂದೆಲಗದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ.
ಬ್ರಾಹ್ಮಿ ತುಂಬಾ ಪರಿಣಾಮಕಾರಿ ಔಷಧಿಯಾಗಿದ್ದು, ಇದು ಚಿಕಿತ್ಸಕ ಗುಣ ಹೊಂದಿದೆ ಹಾಗೂ ಮನಸ್ಸಿಗೆ ಕೂಡ ಶಮನ ನೀಡುವುದು. ಇದು ನರವ್ಯವಸ್ಥೆಯನ್ನು ಸುಧಾರಣೆ ಮಾಡಿಕೊಂಡು ಮೆದುಳಿನ ಕಾರ್ಯವನ್ನು ಉತ್ತಮಪಡಿಸುವುದು. ಬ್ರಾಹ್ಮಿ ತಿಂದರೆ ಅದರಿಂದ ಸಿಗುವ ಐದು ಮಾನಸಿಕ ಲಾಭಗಳ ಬಗ್ಗೆ ತಿಳಿಯಿರಿ.
ಒತ್ತಡ ಹಾಗೂ ಆತಂಕ
- ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯೆಂದರೆ ಒತ್ತಡ ಹಾಗೂ ಆತಂಕ. ಕೊರೊನಾ ಸಾಂಕ್ರಾಮಿಕ ಅಥವಾ ಲಾಕ್ ಡೌನ್ ನಿಂದಾಗಿ ಇದು ಹೆಚ್ಚಾಗಿದೆ.
- ಅಧ್ಯಯನಗಳು ಕೂಡ ಹೇಳಿರುವ ಪ್ರಕಾರ ಜನರಲ್ಲಿ ಒತ್ತಡ ಹಾಗೂ ಆತಂಕವು ತೀವ್ರವಾಗಿದೆ.
- ಬ್ರಾಹ್ಮಿ ತಿಂದರೆ ಅದರಿಂದ ಪರಿಹಾರ ಪಡೆಯಬಹುದು. ಇದರಲ್ಲಿ ಒತ್ತಡ ನಿವಾರಕ ಹಾಗೂ ಖಿನ್ನತೆ ದೂರ ಮಾಡುವ ಲಕ್ಷಣಗಳು ಇವೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವುದು.
ಅಲ್ಜೈಮರ್ ಸಮಸ್ಯೆ ದೂರವಿಡುವುದು
- ವಯಸ್ಸಾದವರಲ್ಲಿ ಅಲ್ಝೈಮರ್ ಸಮಸ್ಯೆಯ ಅಪಾಯವು ಹೆಚ್ಚಾಗಿರುವುದು. ಇದೊಂದು ಗಂಭೀರ ಸಮಸ್ಯೆ ಮತ್ತು ಇದನ್ನು ನಿವಾರಣೆ ಮಾಡುವುದು ಅಸಾಧ್ಯ ಹಾಗೂ ವಯೋವೃದ್ಧರು ಇದರ ಅಪಾಯಕ್ಕೆ ಸಿಲುಕುವುದು ಹೆಚ್ಚು.
- ಇವರು ಕೇವಲ ನೆನಪು ಶಕ್ತಿ ಕಳೆದುಕೊಳ್ಳುವುದು ಮಾತ್ರವಲ್ಲದೆ, ಖಿನ್ನತೆ ಹಾಗೂ ಭ್ರಮೆಯಂತಹ ಸಮಸ್ಯೆಗೆ ಒಳಗಾಗುವರು. ಇದನ್ನು ನಿಭಾಯಿಸುವುದು ತುಂಬಾ ಕಷ್ಟ.
- ನಿಮ್ಮೊಂದಿಗೆ ವಯೋವೃದ್ಧರು ವಾಸಿಸುತ್ತಿದ್ದರೆ ಆಗ ಅವರಿಗೆ ಇಂತಹ ಸಮಸ್ಯೆಗಳ ಅಪಾಯ ಕಡಿಮೆ ಮಾಡಲು ಬಾಹ್ಮಿಯನ್ನು ಪ್ರತಿನಿತ್ಯವೂ ನೀಡಿ. ಮಾನಸಿಕವಾಗಿ ಕುಗ್ಗುವುದು ಮತ್ತು ನೆನಪಿನ ಶಕ್ತಿ ಕುಂದುವುದನ್ನು ಬ್ರಾಹ್ಮಿ ನಿವಾರಿಸುವುದು ಎಂದು ಅಧ್ಯಯನಗಳು ಹೇಳಿವೆ.
ನೆನಪು, ಏಕಾಗ್ರತೆ ವೃದ್ಧಿ
- ಮನೆಯಿಂದಲೇ ಕೆಲಸ ಮಾಡುತ್ತಿರುವಂತಹ ಲಕ್ಷಾಂತರ ಮಂದಿ ಏಕಾಗ್ರತೆ ಕೊರತೆ ಬಗ್ಗೆ ದೂರುತ್ತಿರುವರು. ಕೆಲವೊಂದು ವಿಚಾರಗಳನ್ನು ನೆನಪು ಮಾಡಿಕೊಳ್ಳಲು ಕಷ್ಟವಾಗಬಹುದು ಮತ್ತು ಇದರಿಂದ ಜೀವನದಲ್ಲಿ ಮುಂದೆ ದೊಡ್ಡ ಸಮಸ್ಯೆಯು ಬರುವುದು.
- ಬ್ರಾಹ್ಮಿಯನ್ನು ನಿತ್ಯವೂ ಸೇವನೆ ಮಾಡಿದರೆ ಅದರಿಂದ ಮೆದುಳಿನ ಅಂಗಾಂಶಗಳಿಗೆ ಶಕ್ತಿ ಸಿಗುವುದು. ಬ್ರಾಹ್ಮಿ ಗಿಡಮೂಲಿಕೆಯ ಕ್ಯಾಪ್ಸೂಲ್ ನ್ನು ನೀವು ಸೇವನೆ ಮಾಡಬಹುದು.
ಅಪಸ್ಮಾರ ಸ್ಥಿತಿ ನಿವಾರಿಸುವುದು
- ಆಘಾತ ಚಿಕಿತ್ಸೆಗೆ ಬ್ರಾಹ್ಮಿ ತುಂಬಾ ಸಹಕಾರಿ ಎಂದು ಹೇಳಲಾಗಿದೆ. ಅಧ್ಯಯನಗಳು ಹೇಳುವ ಪ್ರಕಾರ ಅಪಸ್ಮಾರದಂತಹ ಸಮಸ್ಯೆಗಳು ಇರುವವರಲ್ಲಿ ಬ್ರಾಹ್ಮಿಯು ಉರಿಯೂತ ನಿಯಂತ್ರಿಸುವುದು, ನರವ್ಯವಸ್ಥೆ ಸರಿಪಡಿಸಿ ಆಘಾತವನ್ನು ತಡೆಯುವುದು.
- ಅಪಸ್ಮಾರವು ಯಾವಾಗ ಬೇಕಾದರೂ ಬರಬಹುದಾಗಿರುವ ಕಾರಣದಿಂದಾಗಿ ಅದು ಪ್ರಾಣಹಾನಿ ಉಂಟು ಮಾಡುವ ಬದಲು ಅದಕ್ಕೆ ನೈಸರ್ಗಿಕದತ್ತವಾದ ಆಯುರ್ವೇದಿಕ್ ಗಿಡಮೂಲಿಕೆಯನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದು.
ಮನಸ್ಸಿಗೆ ಶಾಂತಿ ಹಾಗೂ ಆರಾಮ ನೀಡುವುದು
- ಯಾವುದೇ ಒತ್ತಡ ಹಾಗೂ ಚಿಂತೆಯು ಇಲ್ಲದೆ ಇರುವಂತಹ ಶಾಂತ ಹಾಗೂ ಆರಾಮ ಮನಸ್ಥಿತಿಯು ಸಿಗಬೇಕು ಎಂದು ನಾವೆಲ್ಲರೂ ಬಯಸುತ್ತೇವೆ.
- ಬ್ರಾಹ್ಮಿಯು ನರ ವ್ಯವಸ್ಥೆಯನ್ನು ಶಾಂತವಾಗಿಟ್ಟು, ಆರಾಮ ನೀಡುವುದು ಹಾಗೂ ಆಮ್ಲಜನಕವನ್ನು ಉತ್ತಮಪಡಿಸುವುದು.
- ದಿನಿವಿಡ ದಣಿದಿದ್ದರೂ ಅದರ ಪ್ರಭಾವವು ತಿಳಿದುಬರದು. ಹೃದಯದ ಮತ್ತು ಶ್ವಾಸಕೋಶದ ಆರೋಗ್ಯವನ್ನು ಇದು ಕಾಪಾಡುವುದು.