ಮೌತ್ ವಾಶ್ ಬಳಸುವ ಸರಿಯಾದ ವಿಧಾನ ಯಾವುದು? ನಿಮ್ಮ ಬಾಯಿಯ ಆರೋಗ್ಯವನ್ನು ನಿಯಂತ್ರಣದಲ್ಲಿಡುವ ಈ ಹಂತಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಾಯಿಯ ಆರೋಗ್ಯದ ವಿಷಯಕ್ಕೆ ಬಂದಾಗ ಮೌತ್ ವಾಶ್ ಬಾಯಿ ಮುಕ್ಕಳಿಸುವುದು ತುಂಬಾ ಮುಖ್ಯವಾಗುತ್ತದೆ. ನಿಮ್ಮ ಹಲ್ಲುಗಳನ್ನು ಉಜ್ಜುವುದು ಅಥವಾ ಫ್ಲೋಸಿಂಗ್ ಮಾಡುವುದು ಅಥವಾ ಬಾಯಿಯ ನೈರ್ಮಲ್ಯಕ್ಕಾಗಿ ಮೌತ್ ವಾಶ್ ಬಳಸುವುದು ಒಳ್ಳೆಯದು. ಅಲ್ಲದೆ ಇದು ಬಾಯಿಯ ದುರ್ವಾಸನೆಯನ್ನು ಶಮನಗೊಳಿಸಲು ಅಥವಾ ನಿಮ್ಮ ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಪರಿಣಾಮಕಾರಿ ಮಾರ್ಗವಾಗಿದೆ. ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ಬಳಸಬೇಕೆಂದು ನಿಮಗೆ ತಿಳಿದಿದ್ದರೆ ಮಾತ್ರ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಮೌತ್ ವಾಶ್ ಬಳಸುವ ಸರಿಯಾದ ವಿಧಾನ ಯಾವುದು? ನಿಮ್ಮ ಬಾಯಿಯ ಆರೋಗ್ಯವನ್ನು ನಿಯಂತ್ರಣದಲ್ಲಿಡುವ ಈ ಹಂತಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ನೀಲಿ, ಹಸಿರು ಮತ್ತು ಗುಲಾಬಿ ಬಣ್ಣಗಳಲ್ಲಿ ಬರುವ ಮೌತ್ ವಾಶ್ ದ್ರವ ರೂಪದಲ್ಲಿರುವ ಉತ್ಪನ್ನವಾಗಿದೆ. ಬಾಯಿಯ ದುರ್ವಾಸನೆ ಹೋಗಲಾಡಿಸುವುದಕ್ಕಾಗಿ ಮತ್ತು ದವಡೆಯ ಆರೋಗ್ಯಕ್ಕಾಗಿ ಇದನ್ನು ಬಳಸಲಾಗುತ್ತದೆ. ಇದು ಸಾಮಾನ್ಯವಾಗಿ ಬ್ಯಾಕ್ಟೀರಿಯಾವನ್ನು ಕೊಲ್ಲಲು, ನಿಮ್ಮ ಉಸಿರಾಟ ತಾಜಾತನದಿಂದಿರಲು ಸಹಾಯ ಮಾಡುವ ನಂಜುನಿರೋಧಕ ಅಥವಾ ಬ್ಯಾಕ್ಟೀರಿಯಾ ವಿರೋಧಿಗಳನ್ನು ಹೊಂದಿರುತ್ತದೆ.
ಇದು ಬಾಯಿಯಲ್ಲಿನ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುವ ಮೂಲಕ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ನಿಮ್ಮ ಟೂತ್ ಬ್ರಷ್ ಗೆ ಸಿಗದ ಜಾಗವನ್ನು ಕೂಡ ತಲುಪುತ್ತದೆ, ಅಲ್ಲದೆ ಇದು ಒಸಡಿನ ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ದಂತ ಶಸ್ತ್ರಚಿಕಿತ್ಸಕ ಮತ್ತು ಪ್ರೊಸ್ತೋಡಾಂಟಿಸ್ಟ್ ಡಾ. ಸಚೇವ್ ನಂದಾ ಹೇಳಿದ್ದಾರೆ ಅಲ್ಲದೆ, ಫ್ಲೋರೈಡ್ ನೊಂದಿಗೆ ಮೌತ್ ವಾಶ್ ಮಾಡುವುದರಿಂದ ನಿಮ್ಮ ದಂತ ಬಲಗೊಳ್ಳುತ್ತದೆ ಮತ್ತು ಕುಳಿಗಳನ್ನು ತಡೆಯುತ್ತದೆ ಎಂದಿದ್ದಾರೆ.
1. ವೈದ್ಯರು ಶಿಫಾರಸು ಮಾಡಿದ ಡೋಸ್ ಬಳಸಿ
ಸಾಮಾನ್ಯವಾಗಿ, ನಿಮ್ಮ ಬಾಯಿಯನ್ನು ಸ್ವಚ್ಛಗೊಳಿಸಲು ಸುಮಾರು 20 ಮಿಲಿ ಡೋಸ್ ಅನ್ನು ಶಿಫಾರಸು ಮಾಡಲಾಗುತ್ತದೆ. ಮೌತ್ ವಾಶ್ ಕ್ಯಾಪ್ ಅಥವಾ ಸಣ್ಣ ಕಪ್ ನೊಂದಿಗೆ ಇದು ಬರುವುದರಿಂದ ಅದನ್ನೇ ನೀವು ಬಳಸಬಹುದು. ಇದಕ್ಕಿಂತ ಹೆಚ್ಚಾಗಿ ಬಳಸಬೇಡಿ.
2. ನಿರ್ದಿಷ್ಟ ಅವಧಿಯಲ್ಲಿಯೇ ಬಾಯಿ ಮುಕ್ಕಳಿಸಿ
ಸಾಮಾನ್ಯವಾಗಿ 30 ಸೆಕೆಂಡುಗಳಿಂದ ಒಂದು ನಿಮಿಷದವರೆಗೆ ನಿರ್ದಿಷ್ಟ ಬಾಯಿ ಮುಕ್ಕಳಿಸಲು ಅವಧಿ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಇದು ನಿಮ್ಮ ಹಲ್ಲುಗಳ ಮುಂಭಾಗ ಮತ್ತು ಹಿಂಭಾಗ, ನಿಮ್ಮ ನಾಲಿಗೆ ಹಾಗೂ ಬಾಯಿಯ ಎಲ್ಲಾ ಕಡೆಗಳಲ್ಲಿಯೂ ತಲುಪುವಂತೆ ನೋಡಿಕೊಳ್ಳಿ.
3. ಮೌತ್ ವಾಶ್ ಬಳಸಿದ ತಕ್ಷಣ ಏನನ್ನೂ ಸೇವನೆ ಮಾಡಬೇಡಿ
ಮೌತ್ ವಾಶ್ ಬಳಸಿದ ಬಳಿಕ, ತಕ್ಷಣಕ್ಕೆ ಏನನ್ನೂ ತಿನ್ನಬೇಡಿ ಅಥವಾ ಕುಡಿಯಬೇಡಿ. ಅದರ ಪರಿಣಾಮವನ್ನು ಹೆಚ್ಚಿಸಲು ಕನಿಷ್ಠ ಅರ್ಧ ಗಂಟೆ ಕಾಯಿರಿ. ನಿಮಗೆ ನೀಡಿರುವ ಬಾಟಲಿಯ ಮೇಲೆ ಅದರ ಅವಧಿಯನ್ನು ನಮೂದಿಸಿರಬಹುದು ಅದನ್ನು ತಪ್ಪದೆ ಮಾಡಿ. ಉತ್ಪನ್ನದ ಸೂಚನೆಗಳನ್ನು ಓದುವುದು ಮತ್ತು ಅನುಸರಿಸುವುದು ಅತ್ಯಗತ್ಯ.
ನೀವು ಮೌತ್ ವಾಶ್ ನುಂಗಿದರೆ ಏನಾಗಬಹುದು?
ಮೌತ್ ವಾಶ್ ನುಂಗುವುದರಿಂದ ಕೆಲವರಿಗೆ ವಾಕರಿಕೆ, ವಾಂತಿ ಮತ್ತು ತಲೆ ತಿರುಗುವಂತೆ ಆಗಬಹುದು ಎಂದು ಡಾ. ನಂದಾ ಹೇಳುತ್ತಾರೆ. ತೀವ್ರವಾದ ಸಂದರ್ಭಗಳಲ್ಲಿ, ಇದು ಉಸಿರಾಟದ ಖಿನ್ನತೆಗೆ ಕಾರಣವಾಗಬಹುದು. ಹಾಗಾಗಿ ಪೋಷಕರು 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಮೌತ್ ವಾಶ್ ನಿಂದ ದೂರವಿಡಬೇಕು ಎನ್ನುತ್ತಾರೆ. ಇನ್ನು ವಯಸ್ಕರು ಸಹ ಅದನ್ನು ನುಂಗಬಾರದು.