ಬೆಂಗಳೂರು:- ಬೆಂಗಳೂರಿನಲ್ಲಿ ಬೆಸ್ಕಾಂ ಸಂಸ್ಥೆಯು ಮೊಬೈಲ್ ರೀಚಾರ್ಜ್ ಮಾದರಿಯಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆ ಜಾರಿಗೆ ತರುತ್ತಿದೆ. ರೀಚಾರ್ಜ್ ಹಣ ಮುಗಿದ ನಂತರ ವಿದ್ಯುತ್ ಸ್ಥಗಿತಗೊಳ್ಳುತ್ತದೆ. ಹೊಸ ಕಟ್ಟಡಗಳಿಗೆ ಮೊದಲು ಪ್ರೀಪೇಯ್ಡ್ ಮೀಟರ್ ಅಳವಡಿಸಲಾಗುತ್ತದೆ. ನಂತರ ಎಲ್ಲ ಮನೆಗಳಿಗೆ ಅಳವಡಿಸಲಾಗುತ್ತದೆ.
MUDA Case: ಮುಡಾ ಹಗರಣವನ್ನ ಸಿಬಿಐಗೆ ವಹಿಸುವಂತೆ ಅರ್ಜಿ! ಇಂದು ಕೋರ್ಟ್ʼಗೆ ಮಧ್ಯಂತರ ವರದಿ ಸಲ್ಲಿಕೆ!
ಮೊಬೈಲ್ ರೀಚಾರ್ಜ್ ಮಾಡಿದಂತೆ, ಶುಲ್ಕ ಪಾವತಿಸಿದ ಬಳಿಕ ವಿದ್ಯುತ್ ಬಳಕೆ ಸಾಧ್ಯ. ವಿದ್ಯುತ್ ಬಳಸಿ ಬಿಲ್ ಕಟ್ಟೋದ್ರಿಂದ ಭಾರೀ ಸಮಸ್ಯೆ ಉಂಟಾಗುತ್ತಿದೆ. ಇತ್ತೀಚೆಗೆ ಗ್ರಾಹಕರು ಬಿಲ್ ಪಾವತಿಸದೆ ವಿದ್ಯುತ್ ಬಳಕೆ ಮಾಡ್ತಿರೋದ್ರಿಂದ ಇಲಾಖೆಗೆ ಭಾರೀ ನಷ್ಟ ಉಂಟಾಗಿದೆ.
ಈಗಾಗಲೆ ಆಗ್ತಿರುವ ನಷ್ಟ ಭರಿಸಲು ನಾನಾ ರೀತಿಯಲ್ಲಿ ಇಂಧನ ಇಲಾಖೆ ಭಾರೀ ಸರ್ಕಸ್ ಮಾಡ್ತಿದೆ. ಸದ್ಯ ಹೊಸ ಕಟ್ಟಡಕ್ಕೆ ವಿದ್ಯುತ್ ಕನೆಕ್ಷನ್ ಪಡೆಯೋರಿಗೆ ಮಾತ್ರ ಪ್ರೀಪೆಯ್ಡ್ ಮೀಟರ್ ಕಡ್ಡಾಯ ಮಾಡಲಾಗಿದೆ.
ಬಳಿಕ ಹಂತ ಹಂತವಾಗಿ ಹಳೆ ಗ್ರಾಹಕರಿಗೂ ಪ್ರೀಪೇಯ್ಡ್ ಮೀಟರ್ ಅನ್ವಯ ಆಗಲಿದೆ. ಹೆಚ್ಚುವರಿ ವಿದ್ಯುತ್ ಬಳಕೆ ಮಾಡಿದಂತೆ ದುಡ್ಡು ಕೂಡ ಕಟ್ ಆಗಲಿದೆ. ಬ್ಯಾಲೆನ್ಸ್ ಇಲ್ಲದಿದ್ದಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತವಾಗಲಿದೆ.
ಹೀಗಾಗಿ ವಿದ್ಯುತ್ ಬಳಕೆಗೆ ಯುನಿಟ್ ಗೆ ತಕ್ಕಂತೆ ರೀಚಾರ್ಜ್ ಮಾಡಬೇಕಾಗುತ್ತೆ ಎನ್ನಲಾಗಿದೆ.