ಶವರ್ನಲ್ಲಿ ಅಥವಾ ಸ್ನಾನ ಮಾಡುತ್ತಿರುವಾಗಲೇ ಮೂತ್ರ ವಿಸರ್ಜಿಸುವುದು ಅನೇಕ ಜನರ ಅಭ್ಯಾಸ; ಆದರೆ ಯಾರೂ ಈ ಬಗ್ಗೆ ಮುಕ್ತವಾಗಿ ಮಾತನಾಡೋಲ್ಲ. ಆದರೆ ನಿಮಗೆ ಗೊತ್ತಿರಲಿ, ಇದು ಅತ್ಯಂತ ಸಾಮಾನ್ಯ. ಕೆಲವರು ಇದು ನಿರುಪದ್ರವ ಅಭ್ಯಾಸವೆಂದು ವಾದಿಸುತ್ತಾರೆ. ಇದು ನೀರನ್ನು ಉಳಿಸಲು ಸಹ ಪ್ರಯೋಜನಕಾರಿ ಎಂದು ಮೊಂಡು ವಾದ ಹೂಡಬಹುದು! ಸ್ನಾನದ ಬೆಚ್ಚಗಿನ ನೀರು ಮತ್ತು ಶಾಂತ ವಾತಾವರಣ ನಿಮ್ಮ ಮೂತ್ರವನ್ನು ನಿಮಗರಿವಿಲ್ಲದೇ ಹೊಮ್ಮಿಸಬಹುದು.
ಚಾಂಪಿಯನ್ ಟ್ರೋಫಿ: ಬಾಂಗ್ಲಾ ಆಲೌಟ್ – ಟೀಂ ಇಂಡಿಯಾಗೆ 229 ರನ್ಗಳ ಗುರಿ!
ನಮ್ಮಲ್ಲಿ ಶೇ. 58 ರಷ್ಟು ಜನರು ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡುತ್ತಾರೆ. ಸಮೀಕ್ಷೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪುರುಷರು ತಾವು ಸ್ನಾನ ಮಾಡುವಾಗ ಮೂತ್ರ ವಿಸರ್ಜಿಸುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ. ಇಂತಹ ಆರೋಗ್ಯ ಸಂಬಂಧಿ ವಿಚಾರಗಳ ಕುರಿತು ಮಾತನಾಡಲು ಸಂಕೋಚಪಡುತ್ತಾರೆ. ಹೀಗೆ ಮಾಡಿದರೆ ಆರೋಗ್ಯ ಸಮಸ್ಯೆಗಳು ಬರುತ್ತವೆಯೇ ಎಂದು ಹಲವರು ಪ್ರಶ್ನಿಸುತ್ತಾರೆ. ಸ್ನಾನ ಮಾಡುವಾಗ ಮೂತ್ರ ವಿಸರ್ಜಿಸುವುದು ಆರೋಗ್ಯಕ್ಕೆ ಒಳ್ಳೆಯದು ಅಥವಾ ಕೆಟ್ಟದ್ದಾ ಎಂಬುದರ ಬಗ್ಗೆ ತಿಳಿಯೋಣ
ನೀರಿನ ಉಳಿತಾಯ:ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡುವುದರಿಂದ ನೀರು ಉಳಿತಾಯವಾಗುತ್ತದೆ. ಪ್ರಸ್ತುತ ಶೌಚಾಲಯಗಳಿಗೆ ಪ್ರತಿ ಫ್ಲಶ್ಗೆ 3 ಲೀಟರ್ಗಿಂತ ಕಡಿಮೆ ನೀರು ಬೇಕಾಗುತ್ತದೆ ಎಂದು ಅಮೆರಿಕದ ಸಂಸ್ಥೆಯೊಂದು ತಿಳಿಸುತ್ತದೆ. ಅದೇ ಹಳೆಯ ತಲೆಮಾರಿನ ಶೌಚಾಲಯಗಳು ಪ್ರತಿ ಫ್ಲಶ್ಗೆ ಕನಿಷ್ಠ 10 ಲೀಟರ್ ನೀರನ್ನು ಬಳಸುತ್ತಿದ್ದವು. ಇದರಿಂದ ಪ್ರತಿದಿನ 350 ಲೀಟರ್ಗೂ ಹೆಚ್ಚು ನೀರು ಬಳಕೆಯಾಗುತ್ತಿದೆ. ಸ್ನಾನ ಮಾಡುವಾಗ ಮೂತ್ರ ವಿಸರ್ಜಿಸುವುದರಿಂದ ನೀರು ಉಳಿಯುತ್ತದೆ ಹಾಗೂ ಪರಿಸರಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು.
ವೈಯಕ್ತಿಕ ನೈರ್ಮಲ್ಯ:ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡುವುದರಿಂದ ಯಾವುದೇ ಆರೋಗ್ಯದ ಸಮಸ್ಯೆ ಉಂಟಾಗುವುದಿಲ್ಲ. ಇದು ಹಾನಿಕಾರಕವಲ್ಲದಿದ್ದರೂ ವೈಯಕ್ತಿಕ ನೈರ್ಮಲ್ಯ ಅನುಸರಿಸಬೇಕು. ಮೂತ್ರನಾಳದ ಸೋಂಕಿನಿಂದ ಬಳಲುತ್ತಿರುವವರು ಹೀಗೆ ಮಾಡುವುದರಿಂದ ಇತರರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚು ಇರುತ್ತದೆ. ಅದರಲ್ಲೂ ಕಾಲಿಗೆ ಗಾಯವಾದರೆ ಇದು ಹೆಚ್ಚು ಅಪಾಯಕಾರಿಯಾಗಿದೆ ಎಂದು ಡಾ.ನಿಕೇತ್ ಸೋನ್ಪಾಲ್ ತಿಳಿಸುತ್ತಾರೆ.
ಖಾಸಗಿ ಸ್ನಾನಗೃಹ ಬಳಸೋದು ಸುರಕ್ಷಿತ:ಅದಕ್ಕಾಗಿಯೇ ಸಾರ್ವಜನಿಕ ಸ್ನಾನಗೃಹಗಳ ಬದಲಿಗೆ ಖಾಸಗಿ ಸ್ನಾನಗೃಹ ಬಳಸುವುದು ಸುರಕ್ಷಿತವಾಗಿದೆ. ಇದು ಖಾಸಗಿ ಸ್ನಾನಗೃಹವಾಗಿದ್ದರೆ, ಮೂತ್ರ ವಿಸರ್ಜನೆ ಮಾಡಿರುವ ಸ್ಥಳದಲ್ಲಿ ಸಾಬೂನು ನೀರಿನಿಂದ ಸ್ವಚ್ಛಗೊಳಿಸಲು ತಜ್ಞರು ಸೂಚಿಸುತ್ತಾರೆ. ಇದು 2018ರಲ್ಲಿ ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ಹೆಲ್ತ್ನಲ್ಲಿ ಪ್ರಕಟವಾದ ‘ಮೂತ್ರ ವಿಸರ್ಜನೆಯ ನೈರ್ಮಲ್ಯ’ ಎಂಬ ಅಧ್ಯಯನದಲ್ಲಿ ತಿಳಿದಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಡಾ.ಜೇನ್ ಸ್ಮಿತ್ ಈ ಅಧ್ಯಯನದಲ್ಲಿ ಭಾಗವಹಿಸಿದ್ದರು,
ಜಗತ್ತಿನ ಹಲವು ದೇಶಗಳಲ್ಲಿ ಕಾಲಿಗೆ ಮೂತ್ರ ಹತ್ತಿದರೆ ಸೋಂಕು, ತ್ವಚೆಯ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಮೂತ್ರದಲ್ಲಿ ಯೂರಿಯಾ ಇದೆ ಎಂದೂ ಹೇಳಲಾಗುತ್ತದೆ. ಇದು ಅನೇಕ ಸಮಸ್ಯೆಗಳನ್ನು ಪರಿಹರಿಸಲು ಉಪಯುಕ್ತವಾಗಿದೆ. ಆದರೆ, ಈ ಕುರಿತು ಯಾವುದೇ ಸಂಶೋಧನಾ ಪುರಾವೆಗಳಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಮೂತ್ರದಲ್ಲಿ ಹಲವು ರೀತಿಯ ಬ್ಯಾಕ್ಟೀರಿಯಾಗಳಿವೆ. ಇದು ಸುರಕ್ಷಿತವಲ್ಲ ಎಂದು ಸಂಶೋಧಕರು ವಿವರಿಸುತ್ತಾರೆ