ಮಾಜಿ ಬಿಗ್ ಬಾಸ್ ತಾರೆ ಉರ್ಫಿ ಜಾವೇದ್ (Urfi Javed) ತಮ್ಮ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ಸ್ಟಾದಲ್ಲಿ ಹಂಚಿಕೊಂಡ ಫೋಟೋದಲ್ಲಿ ಅವರ ಮೈ ತುಂಬಾ ಮುತ್ತಿನ ಗುರುತುಗಳಿವೆ. ಆ ತುಟಿಗಳ ಮಾರ್ಕ್ ಅನ್ನು ಕೊಟ್ಟಿದ್ದು ತಮ್ಮ ಫ್ರೆಂಡ್ಸ್ ಎಂದು ಹೇಳಿಕೊಂಡಿದ್ದಾರೆ ಉರ್ಫಿ. ಜೊತೆಗೆ ಫ್ರೆಂಡ್ಸ್ ಮೈ ತುಂಬಾ ಕಿಸ್ (Kiss) ಕೊಡುತ್ತಿರುವ ವಿಡಿಯೋವನ್ನೂ ಅವರು ಶೇರ್ ಮಾಡಿದ್ದು, ಸಾಕಷ್ಟು ಕಾಮೆಂಟ್ಸ್ ಹರಿದು ಬಂದಿವೆ.
ಭಿನ್ನ ಭಿನ್ನ ಕಾಸ್ಟ್ಯೂಮ್ ಧರಿಸಿ ಕ್ಯಾಮೆರಾ ಮುಂದೆ ಬರುವುದು ಅವರಿಗೆ ಚಾಲಿ ಆಗಿದೆ. ಅವರ ವಿಚಿತ್ರ ಉಡುಗೆಯೇ ಅನೇಕ ಬಾರಿ ಟ್ರೋಲ್ಗರ ಬಾಯಿಗೆ ಆಹಾರವಾಗಿದ್ದು ಇದೆ. ಈ ಹಿಂದೆ ಬಾಳೆಹಣ್ಣಿನ ಸಿಪ್ಪೆಯಲ್ಲಿ ಉರ್ಫಿ ಮೈ ಮುಚ್ಚಿಕೊಂಡಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಬಟ್ಟೆ ವಿಚಾರದಲ್ಲಿ ಸದಾ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಉರ್ಫಿ, ಇದೀಗ ಬಾಳೆ ಹಣ್ಣಿನ ಸಿಪ್ಪೆಯಿಂದ ಮೈ ಮುಚ್ಚಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದರು. ಬಾಳೆಹಣ್ಣು ತಿನ್ನುತ್ತ ಫೋಟೋಶೂಟ್ ಮಾಡಿಸಿದ್ದರು. ಉರ್ಫಿ ಅವತಾರ ನೋಡಿ ಧರಿಸೋಕೆ ಬೇರೆ ಏನು ಸಿಗಲಿಲ್ವಾ ಎಂದು ಪ್ರಶ್ನೆ ಮಾಡಿದ್ದರು.
ಬಿಗ್ ಬಾಸ್ ಒಟಿಟಿಯಿಂದ ಉರ್ಫಿ ಜಾವೇದ್ ಜನಪ್ರಿಯತೆ ಗಳಿಸಿದರು. ಹೌಸ್ ಅರೆಸ್ಟ್ ಗೇಮ್ ರಿಯಾಲಿಟಿ ಶೋನ ಮೊದಲ ಸೀಸನ್ನಲ್ಲಿಯೂ ಅವರು ಭಾಗವಹಿಸಿದ್ದರು. ಈ ಹಿಂದೆ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ಉರ್ಫಿ, ಬಿಗ್ ಬಾಸ್ ಒಟಿಟಿ ಸೀಸನ್ 1ರಲ್ಲಿ (Bigg Boss) ಟಾಸ್ಕ್ ಗೆಲ್ಲಲು ಕಸದ ಚೀಲಗಳಿಂದ ಮಾಡಿದ ಉಡುಪನ್ನು ಧರಿಸಿ ಖ್ಯಾತಿ ಗಳಿಸಿದರು. ತಮ್ಮ ಸೃಜನಶೀಲತೆಗೆ ಮೆಚ್ಚುಗೆ ಪಡೆದರು. ಅಂದಿನಿಂದ ಉರ್ಫಿ ಸಾಮಾನ್ಯ ಉಡುಗೆಯನ್ನು ಧರಿಸಲೇ ಇಲ್ಲ. ಹಾಗಾಗಿ ನಟಿ ನಿರಂತರವಾಗಿ ಟ್ರೋಲ್ ಆಗಿದ್ದರು.