ಧಾರವಾಡ : ಪ್ರಾಯೋಗಿಕವಾಗಿ ಉರ್ದು ಭಾಷೆಯನ್ನು ಅಧ್ಯಯನ ಮಾಡುವ ಮೂಲಕ, ಪ್ರತಿಯೊಬ್ಬರೂ ಉರ್ದು ಭಾಷೆಯ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ ರಫೀಕ್ ಅಹ್ಮದ್ ಎಂ ಭಂಡಾರಿ ತಿಳಿಸಿದರು.
ಧಾರವಾಡ ನಗರದ ಅಂಜುಮನ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕವಿ ಅಲ್ಲಾಮ ಇಕ್ಬಾಲ್ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಚಾರಕ್ಕಾಗಿ ಪೊಳ್ಳು ಹಕ್ಕುಗಳ ಬದಲಿಗೆ, ಪ್ರಾಯೋಗಿಕ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿ. ಉರ್ದುವಿನಿಂದ ಸಾಕಷ್ಟು ಜನ ಸಂಪಾದಿಸುತ್ತಿದ್ದಾರೆ. ಅವರು ಉರ್ದು ಭಾಷೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಉರ್ದು ಭಾಷೆಯ ವಿದ್ಯಾರ್ಥಿಗಳು ಪತ್ರಿಕೋದ್ಯಮ ವಿಷಯವನ್ನು ಅತಿಹೆಚ್ಚು ತೆಗೆದುಕೊಂಡು ಅಧ್ಯಯನ ಮಾಡಬೇಕು ಎಂದರು. ಅಲ್ಲಮ ಇಕ್ಬಾಲ್ ಒಬ್ಬ ಶ್ರೇಷ್ಠ ಉರ್ದು ಕವಿ ಮತ್ತು ಚಿಂತಕ. ಅವರು ತಮ್ಮ ಸ್ವಯಂ ಪರಿಕಲ್ಪನೆಯ ಮೂಲಕ ಯುವಜನತೆಗೆ ಹೊಸ ಜೀವನವನ್ನು ನೀಡಿದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ, ನಿವೃತ್ತ ಉರ್ದು ವಿಭಾಗದ ಮುಖ್ಯಸ್ಥ ಡಾ.ಖಾದೀರ್ ಸರಗಿರೋ ಮಾತನಾಡಿ, ಈ ಭಾಷೆ ಅತ್ಯಂತ ಸುಂದರ ಭಾಷೆ ಎನ್ನುವುದಕ್ಕೆ ಉರ್ದು ಭಾಷೆಯ ಮಾಧುರ್ಯವೇ ಪ್ರಬಲ ಸಾಕ್ಷಿ. “ನೀವು ಎಂದಾದರೂ ಕೇಳುವ ಕೆಲವು ಅತ್ಯಂತ ಭಾವಪೂರ್ಣ ಪದಗಳನ್ನು ಉರ್ದು ಹೊಂದಿದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಡಾ. ಎನ್ ಎಮ್ ಮಕಾಂದಾರ, ಈ ವಿಶ್ವ ಉರ್ದು ದಿನವನ್ನು ಆಚರಿಸುವ ಉದ್ದೇಶವು ಉರ್ದು ಭಾಷೆಯ ಜನಪ್ರಿಯತೆಯನ್ನು ಎತ್ತಿ ತೋರಿಸುವುದು ಮತ್ತು ಅದರ ಪ್ರಾಮುಖ್ಯತೆಯನ್ನು ಶ್ಲಾಘಿಸುವುದು ಎಂದರು.
ಕಾರ್ಯಕ್ರಮದ ವೇದಿಕೆ ಮೇಲೆ ಐಕ್ಯೂಎಸ್ಸಿ ಕೋ ಆರ್ಡಿನೆಟರ್ ಎಂ.ಬಿ ನಲ್ವತ್ವಾಡ್, ಪತ್ರಿಕೋದ್ಯಮ ಮುಖ್ಯಸ್ಥ ಡಾ. ಎಸ್.ಎಸ್ ಅಧೋನಿ, ಡಾ. ಕಲಿಮಷಫ್ ಹಾಗೂ ಉರ್ದು ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.