ನವದೆಹಲಿ:– ದೆಹಲಿಯಲ್ಲಿ ಯುಪಿಎಸ್ಸಿ ಅಭ್ಯರ್ಥಿಯೊಬ್ಬಳು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಜೆಡಿಎಸ್-ಬಿಜೆಪಿ ಮೈಸೂರು ಚಲೋಗೆ ಯತ್ನಾಳ್ ವ್ಯಂಗ್ಯ: ಪಾದಯಾತ್ರೆ ಬಗ್ಗೆ ಬಿಜೆಪಿ ಶಾಸಕ ಹೇಳಿದ್ದೇನು!?
ದೆಹಲಿಯ ಓಲ್ಡ್ ರಾಜೇಂದ್ರ ನಗರದಲ್ಲಿ ವಿದ್ಯಾರ್ಥಿನಿಯೊಬ್ಬಳು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಹಾರಾಷ್ಟ್ರ ಮೂಲದ 26 ವರ್ಷದ ಅಂಜಲಿ ಜುಲೈ 21ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಡೆತ್ನೋಟ್ ಬಹಿರಂಗವಾಗಿದೆ. “ಮಮ್ಮಿ, ಪಪ್ಪಾ, ನನ್ನನ್ನು ಕ್ಷಮಿಸಿ ಬಿಡಿ. ನನಗೆ ನಿಜವಾಗಿಯೂ ಆಗುತ್ತಿಲ್ಲ. ಇಲ್ಲಿ ಬರೀ ಸಮಸ್ಯೆಗಳೇ ಇವೆ, ತೊಂದರೆಗಳೇ ಕಾಡುತ್ತಿವೆ. ಮನಸ್ಸಿಗೆ ಶಾಂತಿ ಎಂಬುದೇ ಇಲ್ಲ. ಖಿನ್ನತೆಯಿಂದ ಹೊರಬರಲು ನಾನು ಎಲ್ಲವನ್ನೂ ಮಾಡಿದೆ. ಆದರೆ ಆಗುತ್ತಿಲ್ಲ, ನನಗೆ ಶಾಂತಿ ಬೇಕು” ಎಂಬುದಾಗಿ ಅಂಜಲಿ ಡೆತ್ನೋಟ್ನಲ್ಲಿ ಬರೆದಿದ್ದಾಳೆ.
ದೆಹಲಿಯಲ್ಲಿ ಬಾಡಿಗೆ ಜಾಸ್ತಿ ಇದೆ. ನಾನು ಹಲವು ಬಾರಿ ಯುಪಿಎಸ್ಸಿ ಬರೆದರೂ ತೇರ್ಗಡೆ ಹೊಂದಲು ಆಗುತ್ತಿಲ್ಲ. ಇದರಿಂದಾಗಿ ನನ್ನ ಮಾನಸಿಕ ನೆಮ್ಮದಿಯು ಹಾಳಾಗಿ ಹೋಗಿದೆ. ನೀವು ನನಗೆ ಪ್ರತಿಯೊಂದು ಹೆಜ್ಜೆಯಲ್ಲೂ ಬೆಂಬಲವಾಗಿ ನಿಂತಿರಿ. ಆದರೆ, ನನ್ನನ್ನು ನಾನು ನಿಯಂತ್ರಿಸಿಕೊಳ್ಳಲು ಆಗುತ್ತಿಲ್ಲ. ನಾನು ಮೃತಪಟ್ಟರೆ ಬ್ರೇಕಿಂಗ್ ನ್ಯೂಸ್ ಆಗುತ್ತದೆ ಎಂಬುದು ಗೊತ್ತು. ಆದರೂ, ನಾನು ನನ್ನ ಶಾಂತಿಗಾಗಿ ಇಂತಹ ತೀರ್ಮಾನ ತೆಗೆದುಕೊಂಡಿದ್ದೇನೆ” ಎಂಬುದಾಗಿ ಅಂಜಲಿ ತಿಳಿಸಿದ್ದಾಳೆ