ಬಳ್ಳಾರಿ:- ತಾಲೂಕಿನ ಕೊಳಗಲ್ ಗ್ರಾಮದಲ್ಲಿ ಗರ್ಭಗುಡಿಯಲ್ಲಿ ಪವಾಡ ಪುರುಷ ಎರ್ರಿತಾತಾ ಸ್ವಾಮಿಯ ಮೂರ್ತಿ ಕುರಿಸುವ ವಿಚಾರವಾಗಿ ಎರಡು ಸಮುದಾಯದ ನಡುವೆ ಕಲ್ಲು ತೂರಾಟ ನಡೆದ ಘಟನೆ ಜರುಗಿದೆ.
15 ದಿನಗಳ ಹಿಂದೆ ಎರ್ರಿಸ್ವಾಮಿ ಮಠದಲ್ಲಿ ರಾತ್ರೋರಾತ್ರಿ ಮೂರ್ತಿ ಕುರಿಸಲಾಗಿತ್ತು. ಈ ಮೂರ್ತಿಯನ್ನು ತೆರವುಗೊಳಿಸುವಂತೆ ಇನ್ನೊಂದು ಸಮುದಾಯದವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಮೂರ್ತಿ ತೆರವುಗೊಳಿಸಲು ಆದೇಶ ನೀಡಿತ್ತು.
ಆದರೆ ಪವಾಡ ಪುರುಷನ ಮೂರ್ತಿಯನ್ನು ತೆರವುಗೊಳಿಸಲ್ಲ ಅಂತ ಮೊತ್ತೊಂದು ಸಮುದಾಯದವರು ಹಠ ಹಿಡಿದ್ದಾರೆ. ಇದರಿಂದ ಎರಡು ಸಮುದಾಯದ ಮಧ್ಯೆ ವಾಗ್ವಾದ ಸಂಭವಿಸಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ಸಂಭವಿಸಿದೆ. ಈ ವಿಚಾರ ತಿಳಿದು ಗ್ರಾಮಕ್ಕೆ ಪಿಎಸ್ಐ ಸಂತೋಷ್ ಡಬ್ಬಿನ್, ಸಿಪಿಐ ಸತೀಶ್ ಸೇರಿದಂತೆ ಇನ್ನಿತರ ಪೊಲೀಸ್ ಸಿಬ್ಬಂದಿ ಬಂದಿದ್ದಾರೆ
ಕಲ್ಲು ತೂರಾಟವನ್ನು ನಿಲ್ಲಿಸಲು ಮುಂದಾದಾಗ ಕಿಡಿಗೇಡಿಗಳು ಪೊಲೀಸರ ಮೇಲೂ ಕಲ್ಲು ಎಸೆದಿದ್ದಾರೆ. ಇದರಿಂದ ಪಿಎಸ್ಐ ಸಂತೋಷ್ ಡಬ್ಬಿನ್ ತಲೆಗೆ, ಸಿಪಿಐ ಸತೀಶ್ ಸೇರಿದಂತೆ ಮೂವರಿಗೆ ಗಾಯವಾಗಿದೆ. ಕೂಡಲೆ ಪಿಎಸ್ಐ ಸಂತೋಷ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.