ಭಾರತದಲ್ಲಿ ಯುಪಿಐ ಪಾವತಿ ವ್ಯವಸ್ಥೆ ಕ್ರಾಂತಿಯನ್ನೇ ಸೃಷ್ಟಿಸಿದೆ. ಸ್ಮಾರ್ಟ್ಫೋನ್ ಮೂಲಕ ಆನ್ಲೈನ್ನಲ್ಲಿ ಹಣವನ್ನು ಕಳುಹಿಸುವವರ ಪ್ರಮಾಣ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವ ಇಂದಿನ ಆನ್ಲೈನ್ ಯುಗದಲ್ಲಿ ದೇಶದ ಬಹುಪಾಲು ಜನರು ಜೇಬಿನಲ್ಲಿ ಹಣವನ್ನ ಇಡುವುದನ್ನೇ ಮರೆಯುತ್ತಿದ್ದಾರೆ ಎಂದು ಹೇಳಬಹುದು. ಆದರೆ, ಇದು ಕೆಲವೊಮ್ಮೆ ಸಮಸ್ಯೆಯನ್ನು ತರಬಹುದು.! UPI ಪಾವತಿ ಸೇವೆಯ ಬಳಕೆಯು ವ್ಯಾಪಕವಾಗಿ ಬಳಕೆಯಾಗುತ್ತಿರುವ ಇಂದಿನ ದಿನಗಳಲ್ಲಿ ಒಮ್ಮೊಮ್ಮೆ ಇಂಟರ್ನೆಟ್ ಸಂಪರ್ಕವು ಕೈಕೊಡಬಹುದು.!
ಆದರೆ, ಚಿಂತಿಸಬೇಡಿ. ಇದೀಗ ನೀವು ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದಾದ ಆಯ್ಕೆಯನ್ನು ಸುಲಭವಾಗಿ ಬಳಸಬಹುದು.! ಇಂಟರ್ನೆಟ್ ಇಲ್ಲದೆಯೂ UPI ಮೂಲಕ ಪಾವತಿ ಮಾಡುವುದು ಹೇಗೆ ಮತ್ತು ಆಫ್ಲೈನ್ UPI ಪಾವತಿಗಳನ್ನು ಮಾಡಲು ತೆಗೆದುಕೊಳ್ಳಬೇಕಿರುವ ಕ್ರಮಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ ಬನ್ನಿ. ಈ ಕುರಿತ ಮಾರ್ಗದರ್ಶಿ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.
ಆಫ್ಲೈನ್ UPI ಪೇಮೆಂಟ್ಸ್ ಅನ್ನು ಸೆಟಪ್ ಮಾಡಿ
- ನಿಮ್ಮ ಬ್ಯಾಂಕ್ ಖಾತೆಗೆ ಲಿಂಕಟ ಆಗಿರುವ ಫೋನ್ ನಂಬರ್ನಿಂದ ನಿಮ್ಮ ಮೊಬೈಲ್ನಲ್ಲಿ *99# ಡಯಲ್ ಮಾಡಿ.
- ಒಂದು ವೇಳೆ ಬೇರೆ ನಂಬರ್ನಿಂದ ಕಾಲ್ ಮಾಡಿದರೆ ಈ ಸೇವೆ ಕಾರ್ಯನಿರ್ವಹಿಸುವುದಿಲ್ಲ.
- ಇದಾದ ಬಳಿಕ ನೀವು ಬಯಸಿದ ಭಾಷೆಯನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಬ್ಯಾಂಕ್ ಖಾತೆಯನ್ನು ನಮೂದಿಸಿ.
- ನಂತರ ನಿಮಗೆ ಬ್ಯಾಂಕ್ ಖಾತೆಗಳ ಪಟ್ಟಿಯನ್ನು ತೋರಿಸಲಾಗುತ್ತದೆ. ಇಲ್ಲಿ ನಿಮ್ಮ ಆಯ್ಕೆಯನ್ನು ಮಾಡಿ ಮುಕ್ತಾಯ ದಿನಾಂಕವನ್ನು ಸೇರಿಸುವ ಜೊತೆಗೆ ಡೆಬಿಟ್ ಕಾರ್ಡ್ನ 6 ಅಂಕಿಗಳನ್ನು ನಮೂದಿಸಿ.
ಇಷ್ಟು ಕೆಲಸಗಳನ್ನು ಮೊದಲು ಸರಿಯಾಗಿ ನಿರ್ವಹಿಸಿದರೆ ಮುಂದಿನ ಹಂತಗಳಲ್ಲಿ ನಿಮಗೆ ಇಂಟರ್ನೆಟ್ ಸಂಪರ್ಕವಿಲ್ಲದೆ ಹಣ ಪಾವತಿ ಮಾಡಬಹುದು.
ಇದು ಆಫ್ಲೈನ್ ಯುಪಿಐ ಪೇಮೆಂಟ್ಸ್ ಮಾಡುವ ರೀತಿ
- ಫೋನ್ನಲ್ಲಿ *99# ಗೆ ಕರೆಮಾಡಿ ಅಲ್ಲಿ ಹಣ ಕಳುಹಿಸಲು 1 ಅನ್ನು ನಮೂದಿಸಿ.
- ನಂತರ ಣಿವು ಕಳುಹಿಸಲು ಬಯಸುವ ವ್ಯಕ್ತಿಯ UPI ID/ ಫೋನ್ ನಂಬರ್/ ಬ್ಯಾಂಕ್ ಅಕೌಂಟ್ ನಂಬರ್ ಅನ್ನು ನಮೂದಿಸಿ.
- ನೀವು ಟ್ರಾನ್ಸ್ಫರ್ ಮಾಡಲು ಬಯಸುವ ಹಣ ಮತ್ತು ಯುಪಿಐ ಪಿನ್ ಅನ್ನು ನಮೂದಿಸಿ.
- ಒಮ್ಮೆ ಈ ಎಲ್ಲಾ ಆಯ್ಕೆಯನ್ನು ಮಾಡಿದ ನಂತರ ನಿಮ್ಮ ಪಾವತಿ ಯಶಸ್ವಿಯಾಗುತ್ತದೆ
- ಇದಲ್ಲದೆ ನಿಮ್ಮ ಈ ಪ್ರತೀ ಪಾವತಿಗೆ *99# ಡಯಲ್ ಮಾಡುವುದರಿಂದ50 ಪೈಸೆಯಷ್ಟು ನಿಮ್ಮ ಖಾತೆಯಿಂದ ಕಟ್ ಅಗುತ್ತದೆ.
- ಈ ಸೇವೆ ಮುಖಾಂತರ ಒಮ್ಮೆ ಟ್ರಾನ್ಸಾಕ್ಷನ್ ಮಾಡುವಾಗ 5000 ರೂಪಾಯಿಯಷ್ಟು ಪಾವತಿ ಮಾಡುವ ಅವಕಾಶವಿದೆ.