ಹುಬ್ಬಳ್ಳಿ: ‘ಕೆ.ಪಿ. ಶ್ರೀಕಾಂತ ಅವರ ನಿರ್ಮಾಣದ ಹಾಗೂ ನಟ ಉಪೇಂದ್ರ ಅಭಿನಯದ ಯು.ಐ. ಸಿನಿಮಾ ಪ್ರಚಾರ ಹಾಗೂ ಮಾದಕ ವಸ್ತುಗಳ ಕುರಿತು ಜಾಗೃತಿ ಸಮಾರಂಭ ಡಿ. ೪ ರಂದು ನಡೆಯಲಿದ್ದು, ನಟ ಉಪೇಂದ್ರ ಭಾಗವಹಿಸಲಿದ್ದಾರೆ’ ಎಂದು ಡಾ. ರಾಜಕುಮಾರ ಅಭಿಮಾನಿಗಳ ಸಂಘದ ವಿಜಯಕುಮಾರ ಅಪ್ಪಾಜಿ ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳ ಸಂಘದ ಸಹಯೋಗದಲ್ಲಿ ಸಮಾರಂಭ ನಡೆಯಲಿದೆ’ ಎಂದರು.
PM Awas Yojana: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ನೋಡಿ ಮಾಹಿತಿ
‘ಅಂದು ಬೆಳಿಗ್ಗೆ 10 ಗಂಟೆಗೆ ವಿದ್ಯಾನಗರದ ಬಿವಿಬಿ ಕಾಲೇಜಿನಲ್ಲಿ ಮಾದಕ ವಸ್ತುಗಳ ಜಾಗೃತಿ ಸಮಾರಂಭ ನಡೆಯಲಿದೆ. ನಟ ಉಪೇಂದ್ರ, ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಹಾಗೂ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಶಿವಾನಂದ ಮುತ್ತಣ್ಣವರ ಭಾಗವಹಿಸಲಿದ್ದಾರೆ’ ಎಂದರು.
‘ಬಿವಿಬಿ ಕಾಲೇಜಿನಿಂದ ಶಿರೂರ ಪಾಕ್೯ನ ತೋಳನಕೆರೆ ವರೆಗೆ ಯು.ಐ. ಸಿನಿಮಾದ ಪ್ರಚಾರದ ಮೆರವಣಿಗೆ ನಡೆಯಲಿದೆ. ಉತ್ತರ ಕರ್ನಾಟಕ ವಿವಿಧ ಜಾನಪದ ಕಲಾ ತಂಡಗಳು ಸೇರಿ 10 ಸಾವಿರ ಜನರು ಸೇರುವ ನಿರೀಕ್ಷೆ ಇದೆ’ ಎಂದು ತಿಳಿಸಿದರು. ಜಗದೀಶ ರಿತ್ತಿ, ಸುನೀಲ ಮರಾಠೆ, ಧರಮರಾಜ ಕಠಾರೆ, ಬಸವರಾಜ ಗೌರಿ, ವೆಂಕಟ ಸೆಟ್ಟಿ ಇದ್ದರು.