ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಸಾಧು ಕೋಕಿಲ ನಟನೆಯ ಜೊತೆಗೆ ಗಾಯಕರಾಗಿಯೂ ಖ್ಯಾತಿ ಘಳಿಸಿದ್ದಾರೆ, ಸ್ಟಾರ್ ನಟರಿಗೆ ಇರುವಷ್ಟೇ ಡಿಮ್ಯಾಂಡ್ ಸಾಧು ಕೋಕಿಲ ಅವರಿಗಿದೆ. ಇದೀಗ ಸಾಧು ಕೋಕಿಲ ಅವರು ತಮ್ಮ ಗುರುವನ್ನು ನೆನೆದಿದ್ದಾರೆ. ಇಲ್ಲಿಯವರೆಗೆ ಬಂದು ನಿಲ್ಲಲು ಕಾರಣ ಆದ ಉಪೇಂದ್ರ ಅವರಿಗೆ ಸಾಧು ಕೋಕಿನ ಧನ್ಯವಾದ ಹೇಳಿದ್ದಾರೆ.
ಜೀ ಕನ್ನಡ ವಾಹಿನಿ ‘ಜೀ ಎಂಟರ್ಟೇನರ್ಸ್ ಕಾಮಿಡಿ ಅವಾರ್ಡ್ಸ್ 2025’ ನಡೆಸುತ್ತಿದ್ದು. ಇದರ ಶೂಟಿಂಗ್ ಪೂರ್ಣಗೊಂಡಿದ್ದು, ಈ ವಾರಾಂತ್ಯದಲ್ಲಿ ಪ್ರಸಾರ ಕಾಣಲಿದೆ. ಜೀ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಈ ಪ್ರಶಸ್ತಿ ಕಾರ್ಯಕ್ರಮ ಪ್ರಸಾರ ಕಾಣಲಿದೆ. ಅವಾರ್ಡ್ ಸ್ವೀಕರಿಸಿದ ಸಾಧು ಕೋಕಿಲ ಅವರು ಉಪೇಂದ್ರ ಅವರನ್ನು ಸ್ಮರಿಸಿದ್ದಾರೆ.
‘ಜೀ ಎಂಟರ್ಟೇನರ್ಸ್ ಕಾಮಿಡಿ ಅವಾರ್ಡ್ಸ್ 2025’ನಲ್ಲಿ ‘ಹಾಸ್ಯ ಚಕ್ರವರ್ತಿ ನರಸಿಂಹರಾಜು ಪ್ರಶಸ್ತಿ’ ಸಾಧು ಕೋಕಿಲ ಅವರಿಗೆ ಸಿಕ್ಕಿದೆ. ಇದನ್ನು ಉಮೇಶ್ ಅವರು ಸಾಧು ಕೋಕಿಲಾಗೆ ನೀಡಿದರು. ಈ ಅವಾರ್ಡ್ ಸ್ವೀಕರಿಸಿ ಮಾತನಾಡಿದ ಸಾಧು ಕೋಕಿಲ ಅವರು, ‘ನಾನಾಗಿರಬಹುದು, ಮನೋಹರ್ ಆಗಿರಬಹುದು, ಗುರು ಕಿರಣ್ ಆಗಿರಬಹುದು, ನಮ್ಮಲ್ಲಿದ್ದ ಟ್ಯಾಲೆಂಟ್ ತೆಗೆದಿದ್ದು ಅವರೇ’ ಎಂದು ಸಾಧು ಕೋಕಿಲ ಹೇಳಿದರು.
‘ಮ್ಯೂಸಿಕ್ ಡೈರೆಕ್ಟರ್ ಮಾಡಿದ್ದು ಅವರೇ, ಹಾಸ್ಯ ನಟನಾಗಿ ಮಾಡಿದ್ದೂ ಅವರೇ, ಡೈರೆಕ್ಷನ್ ಮಾಡ್ಸಿದ್ದೂ ಅವರೇ. ಉಪೇಂದ್ರ ಇಲ್ಲ ಅಂದ್ರೆ ನಾನು ಇಲ್ಲ’ ಎಂದು ಹೆಮ್ಮೆಯಿಂದ ಸಾಧು ಕೋಕಿಲ ಅವರು ಹೇಳಿಕೊಂಡಿದ್ದಾರೆ.
ಸಾಧು ಕೋಕಿಲ ಅವರು ‘ಶ್’ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟರು. ಈ ವೇಳೆ ಅಲ್ಲಿ ಅತಿಥಿ ಪಾತ್ರ ಮಾಡಿದ್ದರು. ಅಲ್ಲಿಂದ ಅವರ ನಟನಾ ವೃತ್ತಿ ಆರಂಭ ಆಯಿತು. ಆ ಬಳಿಕ ಅವರು ಹಾಸ್ಯನಟನಾಗಿ ಹೆಚ್ಚು ಗುರುತಿಸಿಕೊಂಡರು.