ಉಪೇಂದ್ರ (Upendra) ನಿರ್ದೇಶಿಸಿ, ನಟಿಸುತ್ತಿರುವ ಯುಐ (UI) ಸಿನಿಮಾದ ಟೀಸರ್ (Teaser) ರಿಲೀಸ್ ಆಗಿದೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಬಿಡುಗಡೆ ಸಮಾರಂಭಕ್ಕೆ ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಆಗಮಿಸಿದ್ದಾರೆ. ಶಿವರಾಜ್ ಕುಮಾರ್ (Shivaraj Kumar) ಸೇರಿದಂತೆ ಹಲವರು ಕಾರ್ಯಕ್ರಮಲ್ಲಿ ಭಾಗಿಯಾಗಿದ್ದಾರೆ.ನಟ
ಶಿವರಾಜ್ ಕುಮಾರ್ ಟೀಸರ್ ರಿಲೀಸ್ ಮಾಡಿದರೆ, ಟಾಲಿವುಡ್ ನಿರ್ಮಾಪಕ ಅಲ್ಲು ಅರವಿಂದ್ ಸಾಥ್ ನೀಡಿದ್ದಾರೆ. ಡಿಜಿಟಲ್ ಮೂಲಕ ಕಿಚ್ಚ ಸುದೀಪ್ ಕೂಡ ಯುಐ ಸಿನಿಮಾದ ಟೀಸರ್ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಟೀಸರ್ ರಿಲೀಸ್ ಮಾಡಿದ್ದಾರೆ. ಈಗಾಗಲೇ ರಿಲೀಸ್ ಆಗಲಿರೋ ಟೀಸರ್ ನಲ್ಲಿ ಉಪ್ಪಿ ಕಲಿಯುಗದ ಕಥೆ ಹೇಳ್ತಿರೋ ಹಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಉಪ್ಪಿ, ಬರೀ ಸುಳ್ಳಿಗೆ ಮಾತ್ರ ಹೈಪ್ ಮಾಡಬೇಕು ಸಿನಿಮಾಗಲ್ಲ ಎಂದು ಹೇಳುವ ಮೂಲಕ ಚಿತ್ರದಲ್ಲಿ ಸಾಕಷ್ಟು ಸತ್ಯಗಳನ್ನು ಹೇಳಿದ್ದೇನೆ ಎನ್ನುವ ಸೂಚನೆ ನೀಡಿದ್ದಾರೆ. 8 ವರ್ಷಗಳ ಬಳಿಕ ‘ಉಪ್ಪಿ’ ಡೈರೆಕ್ಷನ್ ಮಾಡುತ್ತಿದ್ದು, ಕೆ.ಪಿ. ಶ್ರೀಕಾಂತ್, ನವೀನ್ ಮನೋಹರನ್ ಹಾಗೂ ಲಹರಿ ಫಿಲಂಸ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದೆ.
ರಿಲೀಸ್ ಆಗಿರುವ ಟೀಸರ್ ಹೊಸ ಆಲೋಚನೆಯನ್ನು ಬಿತ್ತಲಿದ್ದು, ಅದ್ಧೂರಿ ಮೇಕಿಂಗ್ ಕಾಣಿಸುತ್ತದೆ. ಉಪೇಂದ್ರ ಎಂಟ್ರಿ ಮತ್ತು ಸಾಮ್ರಾಜ್ಯಕ್ಕೆ ನುಗ್ಗಿದ ದೃಶ್ಯಗಳನ್ನು ನೋಡುತ್ತಿದ್ದರೆ, ಉಪೇಂದ್ರ ಮತ್ತೊಂದು ಮೆದುಳಿಗೆ ಕೈ ಹಾಕುವಂತಹ ಸಿನಿಮಾವನ್ನೇ ಮಾಡಿದ್ದಾರೆ ಎನ್ನುವುದು ಸತ್ಯ.