ಹುಬ್ಬಳ್ಳಿ- ನಮಗೆ ಸ್ವಾತಂತ್ರ್ಯ ಸಿಕ್ಕು 7 ದಶಕ ಕಳೆದಿದೆ..ಆದ್ರೆ ಇನ್ನು ದೇಶದ ಬಹುತೇಕ ಕಡೆ ಅಸ್ಪ್ರಶ್ಯತೆ ಜೀವಂತವಾಗಿದೆ.ಕೆಳಜಾತಿ ಮೇಲ್ಜಾತಿ ಅನ್ನೋ ಪೆಂಡಭೂತ ನಮ್ಮ ಸಮಾಜದಲ್ಲಿದೆ.ದಲಿತರು ಸವರ್ಣೀಯರು ನಡುವಿನ ಕಂದಕ ಆಧುನಿಕ ಸಮಾಜದಲ್ಲಿ ಹೆಚ್ಚುತ್ತಿದೆ.ಇದಕ್ಕೆ ತಾಜಾ ಉದಾಹರಣೆಗೆ ಮತ್ತೊಂದು ಜಿಲ್ಲೆ ಸೇರಿದೆ.ವಿದ್ಯಾಕಾಶಿ ಎಂದು ಕರೆಸಿಕೊಳ್ಳುವ ಧಾರವಾಡ ಜಿಲ್ಲೆಯಲ್ಲೂ ಈ ಸಾಮಾಜಿಕ ಪಿಡುಗು ಜೀವಂತವಾಗಿದೆ.. ಧಾರವಾಡ ಜಿಲ್ಲೆಯ ಗ್ರಾಮವೊಂದರಲ್ಲಿ ದಲಿತರಿಗೆ ಅಘೋಷಿತ ಬಹಿಷ್ಕಾರ ಹಾಕಲಾಗಿದೆ. ಗ್ರಾಮದ ಹೊಟೆಲ್, ಕಟಿಂಗ್,ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ಇಲ್ಲ.ಇದು ಆ ಗ್ರಾಮದ ಯುವಕರನ್ನ ಕೆರಳಿಸಿದೆ.ನಮಗೂ ಸಮಾನತೆ ಬೇಕು ಎನ್ನುತ್ತಿದ್ದಾರೆ.
ಒಂದು ಕಡೆ ಹೊಟೆಲ್ ನಲ್ಲಿ ಪ್ಲಾಸ್ಟಿಕ್ ಪ್ಲೇಟ್ ನಲ್ಲಿ ಉಪಹಾರ. ಇನ್ನೊಂದು ಕಡೆ ಕಟಿಂಗ್ ಶಾಪ್ ನಲ್ಲಿ ಹೋದ್ರೆ ಪಂಚಾಯತ್ ಗೆ ಹೋಗಿ ಎನ್ನುತ್ತಿರೋ ಕಟಿಂಗ್ ಅಂಗಡಿ ಮಾಲೀಕರು..ಮತ್ತೊಂದು ಕಡೆ ತಮಗಾದ ಅನ್ಯಾಯ ತೋಡಿಕೊಳ್ತಿರೋ ದಲಿತ ಸಮುದಾಯದ ಜನ..ಎಸ್ ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಧಾರವಾಡ ಜಿಲ್ಲೆಯಲ್ಲಿ.ಎಸ್ ಧಾರವಾಡ ಜಿಲ್ಲೆಯ ರೊಟ್ಟಿಗವಾಡ ಗ್ರಾಮದಲ್ಲಿ ಅಸ್ಪ್ರಶ್ಯತೆ ಅನ್ನೋ ಪೆಂಡಭೂತ ಇನ್ನು ಜೀವಂತವಾಗಿದೆ.ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ನಾವೆಲ್ಲ ಸಮಾನರು ಅನ್ನೋ ಮಾತು.
ಇಲ್ಲಿ ಅಕ್ಷರಶಃ ತದ್ವಿರುದ್ಧವಾಗಿ ದೆ.ರೊಟ್ಟಿಗವಾಡ ಗ್ರಾಮದಲ್ಲಿ ಕೆಳಜಾತಿ ಮೇಲ್ಜಾತಿ ಅನ್ನೋ ಪಿಡುಗು ಜೀವಂತವಿದೆ.ಹೌದು ರೊಟ್ಟಿಗವಾಡ ಗ್ರಾಮದಲ್ಲಿ ದಲಿತರಿಗೆ ಅಘೋಷಿತ ಬಹಿಷ್ಕಾರ ಹಾಕಲಾಗಿದೆ. ರೊಟ್ಟಿಗವಾಡ ಗ್ರಾಮದ ಹೊಟೆಲ್,ದೇವಸ್ಥಾನ,ಕಟಿಂಗ್ ಶಾಪ್ ಗಳಿಗೆ ಪ್ರವೇಶ ಇಲ್ಲ.ಅದರಲ್ಲೂ ಹೊಟೆಲ್ ನಲ್ಲಿ ದಲಿತರಿಗೆ ಪ್ಲಾಸ್ಟಿಕ್ ಪ್ಲೇಟ್ ನಲ್ಲಿ ಉಪಹಾರ ಕೊಡಲಾಗ್ತಿದೆ.ನೀರು ಎತ್ತಿ ಹಾಕೋ ಪದ್ದತಿ ಇನ್ನು ಇದೆ ಅಂತೆ.ಇನ್ಮು ಕಟಿಂಗ್ ಶಾಪ್ ಗಳಲ್ಲಿ ಹೋದ್ರೆ ಕಟಿಂಗ್ ಮಾಡೋದಿಲ್ಲ.ಪಂಚಾಯತ್ ಗೆ ಹೋಗಿ ಕೇಳಕೊಂಡ ಬನ್ನಿ ಅನ್ನೋದ ಮಾಲೀಕರ ಉತ್ತರ.
ದಲಿತ ಸಮುದಾಯದ ಜನರಿಗೆ ಗ್ರಾಮದ ಯಾವುದೇ ಕಟಿಂಗ್ ಶಾಪ್ ನಲ್ಲಿ ಕಟಿಂಗ್ ಮಾಡೋದಿಲ್ವಂತೆ.ಅಕಸ್ಮಾತ್ ಕಟಿಂಗ್ ಮಾಡಿದ್ದೆ 500 ಸಾವಿರ ರೂಪಾಯಿವರೆಗೂ ಹಣ ಕೇಳ್ತಾರೆ.ಹೀಗಾಗಿ ಇಲ್ಲಿನ ದಲಿತ ಸಮುದಾಯದ ಜನ ಮತ್ತೊಂದು ಹಳ್ಳಿಗೆ ಹೋಗಿ ಕಟಿಂಗ್ ಮಾಡಿಸಿಕೊಂಡು ಬರ್ತಾರಂತೆ.ದಲಿತ ಸಮುದಾದಯ ಜನರನ್ನು ಇನ್ನು ಕೆಳಗಿನವರಾಗಿ ಕಾಣೋ ಪದ್ದತಿ ರೊಟ್ಟಿಗವಾಡ ಗ್ರಾಮದಲ್ಲಿ ಇನ್ನು ಜೀವಂತ ಇದೆ ಅನ್ನೋದು ಗ್ರಾಮದ ದಲಿತರ ಯುವಕರ ಮಾತು..
ರೊಟ್ಟಿಗವಾಡ ಗ್ರಾಮದಲ್ಲಿ ಇದು ಇವತ್ತಿನ ಪದ್ದತಿ ಅಲ್ಲ.ಅನಾದಿಕಾಲದಿಂದಲೂ ಇದೇ ಪದ್ದತಿ ಜಾರಿಯಲ್ಲಿದೆ ಅಂತೆ.ಅಕಸ್ಮಾತ್ ದಲಿತರು ದೇವಸ್ಥಾನಕ್ಕೆ ಹೋದ್ರೆ ಏನಾದರೂ ಅವಘಡ ಸಂಭವಿಸಿದ್ರೆ ದಲಿತರೇ ಕಾರಣ ಎಂದು ಗ್ರಾಮದ ಸವರ್ಣೀಯರು ಹಿಯಾಳಿಸುತ್ತಾರಂತೆ. ರೊಟ್ಟಿಗವಾಡ ಗ್ರಾಮದಲ್ಲಿ ದಲಿತರು ಒಂದು ಕಡೆ,ಉಳಿದ ಎಲ್ಲ ಸುವರ್ಣೀಯರು ಒಂದು ಕಡೆ.ಒಂದು ರೀತಿ ದಲಿತ ಸಮುದಾಯದ ಜನರಿಗೆ ಅಲ್ಲಿ ಅಘೋಷಿತ ಬಹಿಷ್ಕಾರ ಹಾಕಲಾಗಿದೆ.ಗ್ರಾಮದಲ್ಲಿ ಸುಮಾರು 40 ದಲಿತ ಕುಟುಂಬಗಳಿದ್ದು ಯಾರೂ ಕೂಡಾ ಸಾರ್ವಜನಿಕ ಪ್ರದೇಶದಲ್ಲಿ ಬರೋ ಹಾಗಿಲ್ಲ ಅನ್ನೋ ಅಲಿಖಿಯ ನಿಯಮ ಜಾರಿ ಮಾಡಲಾಗಿದೆ.
ಏನೇ ಕೆಲಸ ಇದ್ರು ಎಲ್ಲದರಲ್ಲೂ ಪ್ರತ್ಯೇಕವಾಗಿ ದಲಿತರನ್ನು ಕಾಣಲಾಗ್ತಿದೆಯಂತೆ..ಗ್ರಾಮದಲ್ಲಿ ಸುವರ್ಣೀಯರು,ದಲಿತರ ನಡುವೆ ದೊಡ್ಡ ಕಂದಕವಿದ್ದು,ಮೂಲಭೂತ ಸೌಲಭ್ಯವೂ ದಲಿತರಿಗೆ ಸಿಗ್ತಿಲ್ಲ. ದಲಿತರಿಗೆ ಸಿಗಬೇಕಾಗಿರೋ ಅಂಗನವಾಡಿಯೂ ಸಿಕ್ಕಿಲ್ಲ ಅನ್ನೋ ಆರೋಪ ಇದೆ.ಅಕಸ್ಮಾತ್ ಗ್ರಾಮದಲ್ಲಿ ದಲಿತ ಸಮದಾಯದ ಜನ ತೀರಿ ಹೋದ್ರೆ ಗ್ರಾಮದ ಬಹುತೇಕ ಅಂಗಡಿಗಳು ಅವತ್ತು ಬಂದ್ ಆಗತ್ತೆ.ಇಂತಹ ಅಲಿಖಿತ ನಿಯಮವನ್ನು ಗ್ರಾಮಸ್ಥರು ಜಾರಿ ಮಾಡಿದ್ದಾರೆ.ಕೇವಲ ಹೊಟೆಲ್,ದೇವಸ್ಥಾನ,ಕಟಿಂಗ್ ಶಾಪ್ ಅಲ್ಲ,ಸಾರ್ವಜನಿಕ ಪ್ರದೇಶದಲ್ಲೂ ದಲಿತರು ಬರೋ ಹಾಗಿಲ್ಲವಂತೆ.
ಅಂಬೇಡ್ಕರ್ ಹೇಳಿದಂತೆ ನಮಗೆ ಸಮಾನತೆ ಬೇಕು,ಸ್ವಾತಂತ್ರ್ಯ ಸಿಕ್ಕು 75 ವರ್ಷ ಆದರೂ ನಮಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಅನ್ನೋದು ದಲಿತ ಮುಖಂಡರ ಮಾತು.. ರೊಟ್ಟಿಗವಾಡದ ಅನಿಷ್ಟ ಪದ್ದತಿಯ ವಿರುದ್ದ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವದೂ ಪ್ರಯೋಜನವಾಗಿಲ್ಲವಂತೆ.ಸ್ವತಂತ್ರ ಸಿಕ್ಕು ಏಳು ದಶಕ ಕಳೆದರೂ ಕೆಳಜಾತಿ,ಮೇಲ್ಜಾತಿ ಅನ್ನೋ ಪೆಡಂಭೂತಕ್ಕೆ ಸಿಕ್ಕು ರೊಟ್ಟಿಗವಾಡ ದಲಿತ ಸಮುದಾದಯ ಜನ ನಲಗುತ್ತಿದ್ದಾರೆ.ಸರ್ಕಾರ ಇನ್ನಾದರೂ ಎಚ್ಚೆತ್ತು ಅಘೋಷಿತ ಬಹಿಷ್ಕಾರಕ್ಕೆ ಒಳಗಾದ ದಲಿತ ಸಮುದಾಯಕ್ಕೆ ಸಮಾನತೆ ಸಿಗೋ ಹಾಗೆ ಮಾಡಬೇಕಿದೆ