ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಟ್ಟಿಂಗ್ ಹಾವಳಿ ಜೋರಾಗಿದ್ದು ದಾಖಲೆಯಿಲ್ಲದ ಹಣ ಸೀಜ್ ಮಾಡಿದ ಸಿಸಿಬಿ ಅಧಿಕಾರಿಗಳು ಬರೋಬ್ಬರಿ 85 ಲಕ್ಷ ರೂ. ಕಂತೆ ಕಂತೆ ದುಡ್ಡಿನ ಕಂತು ಪತ್ತೆಯಾಗಿದೆ.
ಜೆಜೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿರ್ಸಿ ಪಾರ್ಕ್ ಅಪಾರ್ಟ್ ಮೆಂಟ್ ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಅಂದರ್ ಬಾಹರ್ ಜೂಜಾಟದ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿದ್ದು ಜೂಜಾಟದ ಸ್ಥಳದಲ್ಲಿದ್ದ ದಾಖಲೆಯಿಲ್ಲದ ಎರಡು ಹಣದ ಬ್ಯಾಗ್ ಗಳು ಪತ್ತೆಯಾಗಿದೆ.
ದಾಖಲೆಯಿಲ್ಲದ 85 ಲಕ್ಷ ಹಣ ಸೀಜ್ ಮಾಡಿದ ಸಿಸಿಬಿ ಅಧಿಕಾರಿಗಳು ಅಲ್ಲದೆ ಜೂಜಾಟದ ಟೇಬಲ್ ಮೇಲಿದ್ದ 1.50 ಲಕ್ಷ ಹಣವನ್ನು ಕೂ ಸೀಜ್ ಮಾಡಿದ್ದಾರೆ.
ಜೆಜೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿರ್ಸಿ ಪಾರ್ಕ್ ಅಪಾರ್ಟ್ ಮೆಂಟ್ ನಲ್ಲಿ ಅಕ್ರಮವಾಗಿ ನಡೀತಿದ್ದ ಜೂಜಾಟ ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳು ಅರೆಸ್ಟ್ ಮಾಡಿದ್ದು ಹಣದ ಬ್ಯಾಗ್ ಗಳಿದ್ದ ಮನೆ ಮಾಲೀಕ ಎಸ್ಕೇಪ್ ಆಗಿದ್ದು ಒಟ್ಟಾರೆಯಾಗಿ 86,87,800 ಹಣ ಸೀಜ್ ಮಾಡಿದ ಸಿಸಿಬಿ ಟೀಂ.