ಬೆಂಗಳೂರು: ನೋಂದಣಿಯಾಗದ ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೂ ಕಡಿವಾಣ ಹಾಕಬೇಕು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಜನರಿಗೆ ಕಿರುಕುಳ ಮಾಡ್ತಿರುವ ಘಟನೆಗಳು ನಡೆಯುತ್ತಿವೆ. ಆತ್ಮಹತ್ಯೆ, ಊರು ಬಿಡುವ ಘಟನೆಗಳು ವರದಿಯಾಗಿದೆ. ಇದು ನಿಲ್ಲಬೇಕು, ನೋಂದಣಿಯಾಗದ ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೂ ಕಡಿವಾಣ ಹಾಕಬೇಕು’ ಎಂದರು.
ನಮ್ಮ ಊರಿನಲ್ಲಿ ಎರಡೂವರೆ ಲಕ್ಷ ಕೊಟ್ಟು ನಾಲ್ಕೂವರೆ ಲಕ್ಷ ವಸೂಲು ಮಾಡಿದ್ದಾರೆ. ಆ ಮನೆಯವರು ಮನೆ ಬಿಟ್ಟು ಹೋಗಿದ್ದಾರೆ. ಇದು ನನ್ನ ಗಮನಕ್ಕೆ ಬಂದು ಸ್ಥಳಕ್ಕೆ ಅಧಿಕಾರಿಗಳನ್ನು ಕಳಿಸಿದ್ದೆ. ಈಗ ಆ ಮನೆಯವರು ಬಂದಿದ್ದಾರೆ, ನಾನೀಗ ಅಲ್ಲಿಗೇ ಹೋಗ್ತಿದ್ದೇನೆ ಎಂದು ಮಾಹಿತಿಯನ್ನು ನೀಡಿದರು.
ಈ ರಾಜ್ಯದಲ್ಲಿ ಅಣ್ಣನನ್ನೇ ತಂಗಿ ಮದ್ವೆ ಆಗ್ತಾಳೆ..! ಉಲ್ಲಂಘಿಸಿದ್ರೆ ಕಠಿಣ ಶಿಕ್ಷೆ – ಎಲ್ಲಿ ವಿಚಿತ್ರ ಸಂಪ್ರದಾಯ?
ಕಾನೂನು ಮೂಲಕ ಕಿರುಕುಳ ನಿಯಂತ್ರಣ ಮಾಡೋದು ನಮ್ಮ ಉದ್ದೇಶ. ನಾವು ತರುವ ಕಾನೂನನ್ನು ಕೋರ್ಟಿನಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳು ಪ್ರಶ್ನೆ ಮಾಡದಂತೆ ರೂಪಿಸ್ತೇವೆ. ಬೇರೆ ರಾಜ್ಯಗಳ ಕಾನೂನು ಅಧ್ಯಯನ ಮಾಡಿ ಹೊಸ ಕಾನೂನು ತರುತ್ತೇವೆ ಎಂದು ಮಾಹಿತಿ ನೀಡಿದರು.