ರೋಹಿತ್ ಶರ್ಮ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಅಕಾಲಿಕವಾಗಿ ಕೆಳಗಿಳಿಸಿರುವುದಕ್ಕೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಲಾಂತರ ಸಂಖ್ಯೆಯಲ್ಲಿ ಅನ್ಫಾಲೋ ಮಾಡುವ ಮೂಲಕವೂ ಅಭಿಮಾನಿಗಳು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಮುಂಬೈ ತಂಡದ ಕೆಲ ಸಹ ಆಟಗಾರರೂ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ.
ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ನಿಂದ ಮುಂಬೈ ತಂಡಕ್ಕೆ ಮರಳಿದಾಗ ಸಂಭ್ರಮಿಸಿದ್ದ ಅಭಿಮಾನಿಗಳಿಗೆ, ರೋಹಿತ್ರನ್ನು ದಿಢೀರನೆ ನಾಯಕತ್ವದಿಂದ ಕೆಳಗಿಳಿಸಿರುವುದು ತೀವ್ರ ಆಘಾತ ನೀಡಿದೆ. 2011ರಿಂದ ಮುಂಬೈ ತಂಡದ ಭಾಗವಾಗಿರುವ ರೋಹಿತ್, 2013ರಲ್ಲಿ ಮೊದಲ ಬಾರಿ ನಾಯಕತ್ವ ವಹಿಸಿಕೊಂಡಾಗಲೇ ತಂಡ ಮೊದಲ ಬಾರಿ ಐಪಿಎಲ್ ಟ್ರೋಫಿ ಗೆದ್ದಿತ್ತು. ನಂತರದಲ್ಲಿ 6 ವರ್ಷಗಳ ಅಂತರದಲ್ಲಿ ಮತ್ತೆ 4 ಟ್ರೋಫಿ ಗೆದ್ದುಕೊಟ್ಟಿದ್ದರು.
ಆದರೆ ಇದೀಗ ತಂಡದ ನಾಯಕತ್ವದಿಂದ ಕಸಿದಿರುವ ರೋಹಿತ್ ಶರ್ಮಾ ಫ್ಯಾನ್ಸ್ ನಿಂದ ಅನ್ ಫಾಲೋ ಪ್ರತಿಭಟನೆ ಜರುಗಿದೆ.