ಚಿಕ್ಕೋಡಿ: ತಂದೆ ಎಂಬ ಪದವು ಗಂಡು ಮಗುವಿಗೆ ಸ್ನೇಹದ ಸಂಕೇತವಾಗಿದೆ. ಆದರೆ ಹುಡುಗಿಯರಿಗೆ ಇದು ಮಂತ್ರ ಎನ್ನಬಹುದು. ಯಾಕೆಂದರೆ ಹೆಣ್ಣು ಮಗುವಿಗೆ ಅವಳ ತಂದೆಯೇ ಜಗತ್ತಿನ ಮೊದಲ ಸೂಪರ್ ಹೀರೋ ಆಗಿರ್ತಾನೆ. ಆದ್ರೆ ಇಲ್ಲೊಬ್ಬ ಕಾಮುಕ ತಂದೆ ಹೆಂಡತಿ ಸರಸಕ್ಕೆ ಬರಲಿಲ್ಲವೆಂದು ಮಗಳ ಮೇಲೆ ಎರಗಲೇತ್ನಿಸಿದ ಪಾಪಿ ಹತ್ಯೆ ಮಾಡಿದ ಘಟನೆ ಬೆಳಗಾವಿಯ ಜಿಲ್ಲೆಯ ಚಿಕ್ಕೋಡಿ ಗ್ರಾಮದ ಉಮರಾಣಿ ಗ್ರಾಮದಲ್ಲಿ ನಡೆದಿದೆ. ಪತ್ನಿ ಸಾವಿತ್ರಿ ಇಟ್ನಾಳೆ (30) ಯಿಂದ ಗಂಡ ಶ್ರೀಮಂತ ಇಟ್ನಾಳೆ ಹತ್ಯೆಯಾಗಿದೆ. ಮಕ್ಕಳು ಮಲಗಿದ ಮೇಲೆ ಕಲ್ಲು ಎತ್ತಿ ಹಾಕಿ ಗಂಡನನ್ನು ಕೊಂದಿದ್ದಾಳೆ.
Chanakya Niti: ನಿಮಗಿರುವ ಕಷ್ಟಗಳನ್ನು ಎದುರಿಸಲು ಚಾಣಕ್ಯ ಹೇಳಿದ ಈ 10 ವಿಷಯಗಳನ್ನು ನೆನಪಿಡಿ ಸಾಕು.!
ಗಂಡನ ಕೊಂದ ಬಳಿಕ ಮಕ್ಕಳು ಅನಾಥರಾಗ್ತಾರೆ ಅದಲ್ಲದೆ ಮನೆಯಲ್ಲಿ ಶವ ಇದ್ರೇ ಅರೆಸ್ಟ್ ಮಾಡ್ತಾರೆ ಅಂತಾ ಸಿನಿಮೀಯ ರೀತಿಯಲ್ಲಿ ಪ್ಲ್ಯಾನ್ ಮಾಡಿ ಒಬ್ಬಳಿಗೆ ಶವ ಸಾಗಿಸಲು ಆಗಲ್ಲ ಅಂತಾ ಗಂಡನ ದೇಹವನ್ನ ಎರಡು ಭಾಗ ತುಂಡರಿಸಿ ಚಿಕ್ಕ ಬ್ಯಾರೆಲ್ ನಲ್ಲಿ ಹಾಕಿ ಸಾಗಾಟ ಮಾಡಿ ಮಾಡಿ ಪಕ್ಕದ ಗದ್ದೆಯಲ್ಲಿ ಎಸೆದು ಬಂದಿದ್ದಾಳೆ.
ರಕ್ತ ಬಿದ್ದ ಜಾಗವನ್ನು ಸ್ವಚ್ಛಗೊಳಿಸಿ, ಸ್ನಾನ ಮಾಡಿ ಮೈ ಮೇಲಿನ ಬಟ್ಟೆಯನ್ನೆಲ್ಲ ಸುಟ್ಟು ಹಾಕಿ ಬೂದಿಯನ್ನು ತಿಪ್ಪೆಗೆ ಎಸೆದಿದ್ದಾಳೆ. ಕೊಲೆ ಮಾಡಲು ಬಳಸಿದ್ದ ಕಲ್ಲನ್ನು ತೊಳೆದು ತಗಡಿನ ಶೆಡ್ಡಿನಲ್ಲಿ ಬಚ್ಚಿಟ್ಟಿದ್ದಾಳೆ. ಗಂಡನ ಮೊಬೈಲ್ ಫೋನನ್ನು ಕೂಡ ಸ್ವಿಚ್ ಆಫ್ ಮಾಡಿ ಇಟ್ಟಿದ್ದಾಳೆ. ಕೃತ್ಯದ ವೇಳೆ ಎಚ್ಚರಗೊಂಡಿದ್ದ ಮೊದಲ ಮಗಳಿಗೆ, ನಡೆದ ವಿಚಾರವನ್ನು ಯಾರ ಬಳಿಯೂ ಹೇಳದಂತೆ ತಾಕೀತು ಮಾಡಿದ್ದಾಳೆ. ರಾತ್ರಿ ಬೆಳಗಾಗುವಷ್ಟರಲ್ಲಿ ಕೊಲೆಯ ಸುಳಿವೇ ಸಿಗದಂತೆ ಮಾಡಿದ್ದಾಳೆ.
ಜಮೀನಿನಲ್ಲಿ ಶವ ಕಂಡ ಸ್ಥಳೀಯರು ಚಿಕ್ಕೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ, ಅವರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ನಡೆದಿರುವ ಘಟನೆ ಒಂದೊಂದಾಗಿ ಬೆಳಕಿಗೆ ಬಂದಿದೆ. ಚಿಕ್ಕೋಡಿ ಪೊಲೀಸರಿಗೆ ಇಟ್ನಾಳೆ ಪತ್ನಿಯ ಮೇಲೆ ಅನುಮಾನ ಬಂದಿದ್ದು ವಿಚಾರಣೆಗೆ ಒಳಪಡಿಸಿದ್ದಾರೆ.