ಇಂದಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗೆ ಗುರಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನೂ ಬಾಳಿ ಬದುಕಬೇಕಾದ ಯುವಜನತೆಯರು, ಸಣ್ಣ ವಯಸ್ಸಿನಲ್ಲಿಯೇ ಈ ಕಾಯಿಲೆಗೆ ಬಲಿಯಾಗುತ್ತಿರುವುದು, ನಿಜಕ್ಕೂ ನೋವುಂಟು ಮಾಡುತ್ತಿದೆ. ಸ್ಟೇಜ್ ಮೇಲೆ ಮಾತನಾಡುತ್ತಿರುವಾಗ, ಮದುವೆ ಫಂಕ್ಷನ್ ನಲ್ಲಿ ಡಾನ್ಸ್ ಮಾಡುತ್ತಾ, ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಾ ಅಥವಾ ಕ್ರಿಕೆಟ್ ಆಡುವಾಗಲೇ ಹೃದಯಘಾತವಾಗಿರುವ ಅನೇಕ ಪ್ರಕರಣಗಳು ನಮ್ಮ ಕಣ್ಣಮುಂದಿವೆ. ಹಾಗಿದ್ರೆ ಬನ್ನಿ ಹೃದಯಾಘಾತಕ್ಕೆ ಕಾರಣಗಳೇನು!? ,, ಇತ್ತೀಚಿನ ದಿನಗಳಲ್ಲಿ ಈ ಹೃದಯಾಘಾತ ಕಾಯಿಲೆ ಹೆಚ್ಚಾಗಲು ಕಾರಣ ಏನು ಎಂಬುವುದನ್ನು ತಿಳಿಯೋಣ.
Mens Behavior: ಜೀವನದಲ್ಲಿ ತೃಪ್ತಿಯೇ ಇಲ್ಲದ ಪುರುಷರ ನಡವಳಿಕೆ ಹೇಗಿರುತ್ತೆ ಗೊತ್ತಾ!?
ಹೌದು ಇಂದಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗೆ ಗುರಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಯಾಕೆ ಈ ಕಾಯಿಲೆಯಿಂದಾಗಿ ಹೆಚ್ಚಿನವರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ನೋಡುವುದಾದರೆ, ಕೆಲವರು ತಮ್ಮ ದೈಹಿಕ ಫಿಟ್ನೆಸ್ ಕಾಯ್ದುಕೊಳ್ಳುವ ಸಲುವಾಗಿ ಜಿಮ್ನಲ್ಲಿ ಮಾಡುವ ಅತಿಯಾದ ವರ್ಕೌಟ್ನಿಂದಾಗಿ, ಹೃದಯಕ್ಕೆ ಅತಿಯಾದ ಒತ್ತಡ ಬೀಳುವುದರಿಂದ, ಇಂದಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚಾಗುತ್ತಿವೆ, ಎನ್ನುವ ಕೂಗು ಒಂದು ಕಡೆ ಯಾದರೆ, ಜಡಜೀವನ ಶೈಲಿ, ಅನಾರೋಗ್ಯಕಾರಿ ಆಹಾರಪದ್ಧತಿಯಿಂದಾಗಿಯೂ ಕೂಡ ಸಣ್ಣ ವಯಸ್ಸಿನ ಲ್ಲಿಯೇ ಹೃದಯದ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತಿದೆ ಎನ್ನುವ ಮಾತು ಇನ್ನೊಂದು ಕಡೆ.
ಹೃದಯಾಘಾತ ಕಾಣಿಸಿಕೊಳ್ಳುವ ಮೊದಲು, ಕೆಲವೊಂದು ಸೂಕ್ಷ್ಮ ಲಕ್ಷಣಗಳು ನಮ್ಮ ಆರೋಗ್ಯದಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ಹೇಳುತ್ತಾರೆ. ಒಂದು ವೇಳೆ ಇಂತಹ ಲಕ್ಷಣಗಳನ್ನು ಕಡೆಗಣಿಸಿದರೆ ಪ್ರಾಣಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಹಾರ್ಟ್ ಅಟ್ಯಾಕ್ ಕಾಣಿಸಿಕೊಳ್ಳುವ ಮುನ್ನ ಬರುವ ಲಕ್ಷಣಗಳನ್ನು ನೋಡುವುದಾದರೆ.
ಇದ್ದಕ್ಕಿದಂತೆ ಎದೆಯಲ್ಲಿ ನೋವು, ಒತ್ತಡ ಕಾಣಿಸಿಕೊಳ್ಳಲು ಶುರುವಾಗುತ್ತದೆ.
ಕಣ್ಣಿನಲ್ಲಿ ಉರಿ ಕಾಣಿಸಿಕೊಳ್ಳುತ್ತದೆ, ಕೈಗಳ ತೋಳುಗಳಲ್ಲಿ ಕುತ್ತಿಗೆ ಭುಜಗಳ ಭಾಗದಲ್ಲಿ ಕೂಡ ನೋವು ಕಂಡು ಬರುತ್ತದೆ.
ಇದ್ದಕ್ಕಿದಂತೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ತುಂಬಾ ಸುಸ್ತು ಮತ್ತು ಆಯಾಸ ಕಂಡುಬರುವುದು.
ಹೃದಯದ ಬಡಿತದಲ್ಲಿ ಏರುಪೇರು ಆಗುವುದು.
ದೈನಂದಿನ ಒತ್ತಡದ ಜೀವನಶೈಲಿ ಅತಿಯಾದ ಮಾನಸಿಕ ಒತ್ತಡ ಹಾಗೂ ಆಹಾರಕ್ರಮದಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಇಂದಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚಾಗುತ್ತಿದೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದರ ಹೊರತಾಗಿ ನೋಡುವುದಾದರೆ, ಮಧು ಮೇಹ ಕಾಯಿಲೆ ಇದ್ದವರು, ಹೈ ಕೊಲೆಸ್ಟ್ರಾಲ್ ಹಾಗೂ ಅಧಿಕ ರಕ್ತದೊತ್ತಡದ ಕಾಯಿಲೆಯಿಂದ ಬಳಲುತ್ತಿರು ವವರಲ್ಲಿಯೂ ಕೂಡ ಹೃದಯಕ್ಕೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ಬಹಳ ಬೇಗನೇ ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ.
ಹೃದಯದ ಆರೋಗ್ಯ ಚೆನ್ನಾಗಿರಬೇಕು ಎಂದರೆ ಆರೋಗ್ಯಕರ ಆಹಾರ ಪದ್ಧತಿಯನ್ನು ಸೇವನೆ ಮಾಡುವುದು, ನಿಯಮಿತವಾಗಿ ವ್ಯಾಯಾಮ, ಯೋಗಾಭ್ಯಾಸ ಮಾಡುವುದು, ವರ್ಷಕ್ಕೆ ಒಮ್ಮೆಯಾ ದರೂ ಹೃದಯದ ಪರೀಕ್ಷೆ ಮಾಡಿಸಿ ಕೊಳ್ಳುವುದು, ದೇಹದ ತೂಕ ಹಾಗೂ ಬೊಜ್ಜನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು. ಹೃದಯಕ್ಕೆ ಮಾರಕವಾಗಿರುವ ಅಭ್ಯಾಸಗಳಿಂದ ದೂರವಿರುವುದು…ಉದಾಹರಣೆಗೆ ಧೂಮಪಾನ ಮತ್ತು ಮಧ್ಯಪಾನವನ್ನು ಬಿಟ್ಟುಬಿಡುವುದು ಇವೆಲ್ಲವೂ ಕೂಡ ಹೃದಯದ ಆರೋಗ್ಯ ವನ್ನು ಅಚ್ಚುಕಟ್ಟಾಗಿ ಕಾಪಾಡುತ್ತವೆ
ಜಗತ್ತಿನಲ್ಲಿ ಇಂದು ಅತಿ ಹೆಚ್ಚು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಅಗ್ರಸ್ಥಾನದಲ್ಲಿದೆ. ಹೃದಯದ ಆರೋಗ್ಯದ ಬಗೆಗಿನ ಸಿಮೀತ ಜ್ಞಾನವು ಹೃದಯ ಸಂಬಂಧಿ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಿರಬಹುದು ಎಂಬುದು ತಜ್ಞರ ಅಭಿಪ್ರಾಯ. ಇತ್ತೀಚಿನ ವರ್ಷಗಳಲ್ಲಿ ಯುವಜನತೆ ಮತ್ತು ಮಧ್ಯವಯಸ್ಸಿನವರು ಹೆಚ್ಚಾಗಿ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ.
ಆಧುನಿಕ ಜೀವನಶೈಲಿಯ ಅಂಶಗಳು ಯುವಜನರಲ್ಲಿ ಹೃದಯಾಘಾತದ ಹೆಚ್ಚಳದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಸಂಸ್ಕರಿಸಿದ ಆಹಾರಗಳಲ್ಲಿ ಹೆಚ್ಚು ಅನಾರೋಗ್ಯಕರ ಆಹಾರಗಳು, ಸಕ್ಕರೆ ಮತ್ತು ಕೊಬ್ಬಿನ ಆಹಾರಗಳ ಅತಿಯಾದ ಸೇವನೆ, ಕಡಿಮೆ ದೈಹಿಕ ಚಟುವಟಿಕೆಯೊಂದಿಗೆ ಜಡ ಜೀವನಶೈಲಿ, ಒತ್ತಡ, ನಿದ್ರೆಯ ಕೊರತೆ, ಧೂಮಪಾನ ಮತ್ತು ಮದ್ಯಪಾನವು ಹೃದ್ರೋಗಕ್ಕೆ ಪ್ರಮುಖ ಕಾರಣವಾಗುತ್ತದೆ.
ಅನುವಂಶೀಯತೆ ಸಹ ಒಂದು ಪಾತ್ರವನ್ನು ವಹಿಸುತ್ತದೆ, ಏಕೆಂದರೆ ಕೆಲವು ವ್ಯಕ್ತಿಗಳು ಹೃದಯ ಸಮಸ್ಯೆಗಳಿಗೆ ಪ್ರವೃತ್ತಿಯನ್ನು ಹೊಂದಿರಬಹುದು. ಈ ಅಪಾಯಗಳನ್ನು ತಗ್ಗಿಸಲು ಆರಂಭಿಕ ಪತ್ತೆ, ಆರೋಗ್ಯಕರ ಅಭ್ಯಾಸಗಳ ಶಿಕ್ಷಣ ಮತ್ತು ನಿಯಮಿತ ತಪಾಸಣೆ ಅತ್ಯಗತ್ಯ.
ನಮ್ಮ ದೈನಂದಿನ ಕೆಲಸಗಳ ಒತ್ತಡದಿಂದಾಗಿ ಹೃದಯದ ಮೇಲೆ ಅತಿಯಾದ ಒತ್ತಡ ಹಾಕುತ್ತೇವೆ. ಇದರಿಂದ ಹೃದಯದ ಸಮಸ್ಯೆಗಳು ಆಗಾಗ ಕಾಡುತ್ತಲೇ ಇರುತ್ತೆ. ಅದರಲ್ಲೂ ನಮ್ಮ ದಿನನಿತ್ಯದ ಜೀವನಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಸಣ್ಣ ವಯಸ್ಸಿನವರಿಂದ ಹಿಡಿದು ವಯಸ್ಸಾದವರ ತನಕ ಪ್ರತಿಯೊಬ್ಬರನ್ನೂ ಕಾಡುತ್ತೆ
ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಇದು ಇನ್ನೂ ಹೆಚ್ಚಾಗಿದೆ. ಅದರಲ್ಲೂ ಸಣ್ಣ ವಯಸ್ಸಿನಲ್ಲಿ ಹೃದಯಾಘಾತ ಆಗುವ ಸಾಧ್ಯತೆ ಕೂಡ ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಹಾಗೆ ಪ್ರತೀ ವರ್ಷ ವಿಶ್ವದಾದ್ಯಂತ ಶೇಕಡ 30ರಷ್ಟು ಜನ ಹೃದಯಾಘಾತ ಸಂಬಂದಿ ಕಾಯಿಲೆಯಿಂದ ಸಾಯುತ್ತಿದ್ದಾರೆ. ಹಾಗಾದರೆ ಈ
ಹೃದಯಾಘಾತ ಎಂದರೆ ಏನು ? . ಇದು ಯಾವ ಕಾರಣದಿಂದ ಉಂಟಾಗುತ್ತದೆ ? ಇದರ ಲಕ್ಷಣಗಳೇನು ? ಇದನ್ನು ನಿರ್ಯಣಿಸುವ ಪರೀಕ್ಷೆಗಳು ಯಾವುವು? . ಇದರ ಬಗ್ಗೆ ಹೃದ್ರೋಗ ತಜ್ಞರು ತಿಳಿಸಿಕೊಟ್ಟಿರುವ ಮಾಹಿತಿಯನ್ನು ನೋಡೋಣ ಬನ್ನಿ
ಮನುಷ್ಯನ ದೇಹದ ಹೃದಯದಲ್ಲಿ ರಕ್ತನಾಳಗಳು ಅಥವಾ ಕೊರೊನರಿ ಅರ್ಟರೀಸ್ ಇರುತ್ತವೆ. ದೇಹದಲ್ಲಿ ಒಟ್ಟು 3 ಕೊರೊನರಿ ಅರ್ಟರೀಸ್ ಇರುತ್ತವೆ. ಇದು ಯಾವುದೆಂದರೆ ಲೆಫ್ಟ್ ಕೊರೋನರಿ ಆರ್ಟರಿ, ಸರ್ಕಮ್ ಫ್ಲೆಕ್ಸ್ ಆರ್ಟರಿ ಹಾಗು ರೈಟ್ ಕೊರೋನರಿ ಆರ್ಟರಿ. ಈ ಮೂರು ರಕ್ತನಾಳಗಳಿಂದ ಹೃದಯಕ್ಕೆ ರಕ್ತದ ಚಲನೆ ನಡೆಯುತ್ತಿರುತ್ತದೆ. ದೇಹದ ಇತರೆ ಸಮಸ್ಯೆಗಳಿಂದ ಕೂಡ ಹೃದಯಾಘಾತ ಆಗಬಹುದು. ಬೇರೆಬೇರೆ ಸಮಸ್ಯೆಗಳಾದ ಸಕ್ಕರೆ ಕಾಯಿಲೆ, ಹೈ ಕೊಲೆಸ್ಟ್ರಾಲ್ ಅಥವಾ ಹೆಚ್ಚು ರಕ್ತದೊತ್ತಡ ಇನ್ನಿತರ ಕಾರಣಗಳಿಂದ ರಕ್ತನಾಳಗಳ ಒಳಗೆ ಬೊಜ್ಜು ಹಾಗೂ ಕ್ಯಾಲ್ಸಿಯಂ ಸೇರಿಕೊಂಡು ಕಾಲ ಕಳೆದಂತೆ ರಕ್ತನಾಳ ಕುಗ್ಗುತ್ತಾ ಹೋಗುತ್ತದೆ. ಇದರಿಂದ ರಕ್ತ ಚಲನೆಗೆ ಅಡ್ಡಿ ಉಂಟಾಗುತ್ತದೆ . ಈ ಅಡಚಣೆಯಾದ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿ ಹೃದಯಕ್ಕೆ ರಕ್ತ ಚಲನೆ ನಿಂತುಹೋಗುತ್ತದೆ. ಈ ಸಮಸ್ಯೆಯನ್ನು ಹೃದಯಘಾತ ಅಥವಾ ಹಾರ್ಟ್ ಅಟ್ಯಾಕ್ ಎಂದು ಕರೆಯುತ್ತೇವೆ. ಹೃದಯಾಘಾತ ಪ್ರಮಾಣವು ತೀವ್ರ ಪರಿಶ್ರಮದೊಂದಿಗೆ ಸಂಬಂಧಿಸಿರುತ್ತದೆ, ಅದು ಮಾನಸಿಕ ಒತ್ತಡ ಅಥವಾ ದೈಹಿಕ ಪರಿಶ್ರಮ ಯಾವುದೇ ಆಗಿರಲಿ, ವಿಶೇಷವಾಗಿ ವ್ಯಕ್ತಿಯು ಸಾಮಾನ್ಯವಾಗಿ ಪರಿಶ್ರಮ ನಿರ್ವಹಿಸುವುದಕ್ಕಿಂತ ಹೆಚ್ಚು ತೀವ್ರವಾಗಿದ್ದರೆ ಸಂಭವಿಸುವುದು ಹೆಚ್ಚು .
ಹಾರ್ಟ್ ಒಂದು ಪಂಪ್ ಇದ್ದಹಾಗೆ. ಇದು ರಕ್ತವನ್ನು ದೇಹದ ಇತರ ಭಾಗಗಳಿಗೆ ಸರಬರಾಜು ಮಾಡುತ್ತದೆ. ಇದು ಶ್ವಾಸಕೋಶಕ್ಕೆ ತೆರಳಿ ಆಮ್ಲಜನಕ ಪಡೆದು ನಂತರ ಹೃದಯದಿಂದ ಒಳ್ಳೆ ರಕ್ತವು ಪಂಪ್ ಆಗಲ್ಪಡುತ್ತೆ . ಹೃದಯಾಘಾತ ಆದ ಸಂದರ್ಭಗಳಲ್ಲಿ ಹೃದಯಕ್ಕೆ ತೊಂದರೆಯಾಗಿ ಹೃದಯದ ಕೆಲಸ ನಿಂತುಹೋಗಿ ರಕ್ತ ಪೂರೈಕೆ ನಿಲ್ಲುತ್ತಾ ಹೋಗುತ್ತದೆ . ಹೃದಯದ ಬಡಿತ ನಿಯಂತ್ರಣದಲ್ಲಿ ಇರದೆ ಕೂಡಲೇ ಹೃದಯ ಕೆಲಸವನ್ನು ನಿಲ್ಲಿಸುತ್ತದೆ. ಇದೇ ಕಾರಣಕ್ಕಾಗಿಯೇ ಕೆಲವರು ಹಠಾತ್ ಆಗಿ ಸಾಯುವುದನ್ನು ನೀವು ನೋಡಿರುತ್ತೀರಿ ಅಥವಾ ಇನ್ನು ಕೆಲವರಿಗೆ ಎದೆ ನೋವು ಕಾಣಿಸಿಕೊಂಡು ನಂತರ ಆಸ್ಪತ್ರೆಯಲ್ಲಿ ದಾಖಲಾಗಿ ಟ್ರೀಟ್ಮೆಂಟ್ ಫಲಕಾರಿ ಆಗದೆ ಕೊನೆಯುಸಿರು ಎಳೆದಿರುವುದನ್ನು ಕೇಳಿರುತ್ತೀರಿ
ಈ ಹೃದಯಾಘಾತದಿಂದ ಉಸಿರಾಡುವ ಸಮಸ್ಯೆ ಎದುರಾಗಬಹುದು. ಏಕೆಂದರೆ ಹೃದಯವು ಸರಿಯಾಗಿ ಕೆಲಸ ನಿರ್ವಹಿಸದೇ ಪಂಪ್ ಮಾಡದೆ ಇರುವ ಕಾರಣ ರಕ್ತವು ಶ್ವಾಸಕೋಶದಲ್ಲಿ ತುಂಬಿಕೊಂಡು ಉಸಿರಾಡಲು ಸಮಸ್ಯೆಯಾಗುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಪಲ್ಮನರಿ ಎಡಿಮಾ ಎಂದು ಕರೆಯುತ್ತಾರೆ. ಇದರಿಂದ ಉಸಿರಾಡಲು ಸಮಸ್ಯೆ ಉಂಟಾಗುತ್ತೆ .
ಸಾಮಾನ್ಯವಾಗಿ ಹೃದಯಾಘಾತವಾದಾಗ ಎದೆನೋವು ಕಾಣಿಸುತ್ತದೆ. ಮುಖ್ಯವಾಗಿ ಎದೆಯು ಬಿಗಿಯಾಗಿರುವಂತೆ, ಒತ್ತಿದಂತೆ ಅಥವಾ ಹಿಸುಕಿದಂತೆ ಅನುಭವವಾಗುತ್ತದೆ. ಇನ್ನೂ ಹೇಳಬೇಕೆಂದರೆ ಆನೆ ಎದೆ ಮೇಲೆ ಕೂತ ಹಾಗೆ ಅಥವಾ ಅತಿ ಭಾರದ ವಸ್ತು ಎದೆ ಮೇಲೆ ಆವರಿಸಿರುವ ಹಾಗೆ ಆಗುತ್ತದೆ. ಇನ್ನು ಕೆಲವರಿಗೆ ಕೈಯಲ್ಲಿ ಬೆನ್ನಿನಲ್ಲಿ ಅಥವಾ ಹೊಟ್ಟೆಯಲ್ಲಿ ಸಹ ಇದರಿಂದ ನೋವು ಕಾಣಿಸಿಕೊಳ್ಳುತ್ತದೆ . ಹಾಗು ಅದು ಭಾಳ ಅವಧಿಯವರೆಗೆ ಇರುತ್ತೆ ಹೃದಯಾಘಾತದಿಂದ ಸಂಭವಿಸುವ ಈ ನೋವು 15 ನಿಮಿಷದಿಂದ ಒಂದು ಗಂಟೆಗಳ ಕಾಲ ಇರುವ ಸಂಭವ ಉಂಟು . ಇವೆಲ್ಲವೂ ಹೃದಯಾಘಾತದ ಚಿಹ್ನೆಗಳಾಗಿವೆ.
ECG ಪರೀಕ್ಷೆಯ ಮೂಲಕ ಹೃದಯಾಘಾತ ಆಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಬಹುದು. ECG ಹೃದಯ ಸ್ನಾಯುವಿನ ಹಾನಿಗೊಳಗಾದ ಭಾಗವನ್ನು ಗುರುತಿಸಲು ಪ್ರಮುಖ ಸುಳಿವುಗಳನ್ನು ನೀಡುತ್ತದೆ. ಹೃದಯಾಘಾತವನ್ನು ಖಚಿತಪಡಿಸಲು ರಕ್ತ ಪರೀಕ್ಷೆಯನ್ನು ಸಹ ಮಾಡುವುದುಂಟು. ಈ ಪರೀಕ್ಷೆಯ ಮೂಲಕ ಎಂಜೈಮ್ಸ್ ಅಥವಾ ಕಿಣ್ವಗಳು ಜಾಸ್ತಿ ಇರುವುದು ತಿಳಿದು ಬಂದರೆ ಹೃದಯಾಘಾತವಾಗಿದೆ ಎಂದು ಖಚಿತ ಪಡಿಸುತ್ತಾರೆ.ಕೆಲವೊಮ್ಮೆ ಹಿಂದೆ ಯಾವಾಗಲೋ ಕೂಡ ಹೃದಯಾಘಾತ ಆಗಿರುವುದನ್ನು ಸಹ ಇದರ ಮೂಲಕ ತಿಳಿಯಬಹುದು. ಹೃದಯಾಘಾತಕ್ಕೆ ಮುಖ್ಯ ಕಾರಣ ರಕ್ತನಾಳದಲ್ಲಿ ಹೆಪ್ಪುಗಟ್ಟುವಿಕೆ ಆಗಿರುತ್ತೆ . ಆದ್ದರಿಂದ ಆದಷ್ಟು ಬೇಗ ರಕ್ತ ಹೆಪ್ಪುಗಟ್ಟುವುದನ್ನು ತಡೆದರೆ ಹೃದಯಾಘಾತದಿಂದ ಆಗುವ ದೊಡ್ಡ ಸಮಸ್ಯೆಯಿಂದ ಪಾರಾಗಬಹುದು. ಹಾಗಾಗಿ ಆದಷ್ಟು ಈ ಚಿಹ್ನೆಗಳು ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲಿಸವುದು ಉತ್ತಮ ಎನ್ನುತ್ತಾರೆ ಹೃದಯ ತಜ್ಞರು. ಈ ರಕ್ತನಾಳಗಳ ಹೆಪ್ಪುಗಟ್ಟುವಿಕೆ ಆಗಿ ಹೆಚ್ಚು ಸಮಯ ಕಳೆದಂತೆ ಹೆಚ್ಚು ತೊಂದರೆ ಹಾಗು ಹಾನಿ ಉಂಟಾಗುತ್ತೆ . ಹಾಗಾಗಿ ಈ ಯಾವುದೇ ಹೃದಯಾಘಾತದ ಚಿಹ್ನೆಗಳು ತಿಳಿದಾಗ ಎಷ್ಟು ಬೇಗ ಸಾಧ್ಯವಾಗುವುದೋ ಅಷ್ಟು ಬೇಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವುದರಿಂದ ಹೃದಯಾಘಾತದಿಂದ ಪಾರಾಗಲು ಸಾಧ್ಯವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿರುವ ಅತಿದೊಡ್ಡ ಭಯವೆಂದರೆ ಹೃದಯಾಘಾತ. ಇಳಿವಯಸ್ಸಿನಲ್ಲಿ ಕಾಣಿಸುತ್ತಿದ್ದ ಹೃದಯಾಘಾತ ಈಗ ಯುವಜನತೆಯಲ್ಲಿ ಸಾಮಾನ್ಯ ಕಾಯಿಲೆ ಎಂಬಂತಾಗಿದೆ. ಅಷ್ಟಕ್ಕೂ ಈ ಯುವಜನತೆಯನ್ನು ಕಾಡುತ್ತಿರುವ ಹೃದಯಾಘಾತಕ್ಕೆ ಕಾರಣವೇನು? ಯಾರಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಾಡುತ್ತಿದೆ? ಇದಕ್ಕೆ ಪರಿಹಾರವೇನು? ಎಂಬುದಕ್ಕೆ ಒಂದಷ್ಟು ಮಾಹಿತಿ ಇಲ್ಲಿದೆ.
25ರಿಂದ 45 ವರ್ಷ ಒಳಗಿನವರಲ್ಲಿ ಕಳೆದ 5 ವರ್ಷದಿಂದ ಹೃದಯಾಘಾತ ಪ್ರಮಾಣ ಹೆಚ್ಚಳವಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ…
ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್. ಜತೆಗೆ ಬದಲಾದ ಜೀವನಶೈಲಿ ಹಾಗೂ ಧೂಮಪಾನ, ತಂಬಾಕು ಸೇವನೆ, ಮಾದಕ ವ್ಯಸನದಂತ ದುಶ್ಚಟಗಳಿಂದಲೂ ಈ ಸಮಸ್ಯೆ ಹೆಚ್ಚುತ್ತಿದೆ.
ಇಂದಿನ ಯುವಜನತೆ ಕೆಟ್ಟ ಅಭ್ಯಾಸಗಳಿಗೆ ಬೇಗನೆ ಆಕರ್ಷಿತರಾಗುತ್ತಾ ಅದರ ದಾಸರಾಗುತ್ತಿದ್ದಾರೆ
ಮಲಗುವ ಹಾಗೂ ಏಳುವ ಸಮಯದಲ್ಲಿ ಸಮಯ ಪಾಲನೆ ಇಲ್ಲದಿರುವುದು
ವ್ಯಾಯಾಮ ಸೇರಿದಂತೆ ದೈಹಿಕ ಚಟುವಟಿಕೆಗಳೇ ಇಲ್ಲದಿರುವುದು
ಜಂಕ್ ಫುಡ್ ಸೇವನೆಯಿಂದಾಗಿ ಹಠಾತ್ ಹೃದಯಾಘಾತ ಒಳಗಾಗುವ ಸಾಧ್ಯತೆ ಹೆಚ್ಚು.
ಸುಂದರ ದೇಹ ಹೊಂದಲು ಹಾಗೂ ಮಾಂಸಖಂಡಗಳನ್ನು ಹುರಿಗೊಳಿಸಲು ಜಿಮ್ ಅಥವಾ ಕೆಲವು ಸಂಸ್ಥೆಗಳು ನೀಡುವ ಅವೈಜ್ಞಾನಿಕ ಪ್ರೊಟೀನ್ ಸಪ್ಲಿಮೆಂಟ್ಗಳೂ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.
ಹೀಗಾಗಿ ದೇಹದಾರ್ಢ್ಯ ಅಥವಾ ವ್ಯಾಯಾಮಕ್ಕಾಗಿ ಯಾವುದೇ ಪ್ರೋಟಿನ್ ತೆಗೆದುಕೊಳ್ಳುವವರು ವೈದ್ಯರ ಅಥವಾ ಆಹಾರ ತಜ್ಞರನ್ನು ಭೇಟಿ ಮಾಡಿ, ಅವರ ಸಲಹೆ ಮೇರೆಗೆ ತೆಗೆದುಕೊಳ್ಳುವುದು ಒಳ್ಳೆಯದು.
ಇನ್ನೂ ಬಹುತೇಕ ಪ್ರಕರಣಗಳಲ್ಲಿ ಅನುವಂಶಿಕವಾಗಿಯೂ ಹೃದಯ ಸಂಬಂಧಿ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಕುಟುಂಬದಲ್ಲಿ ಯಾರಿಗೇ ಹೃದಯಾಘಾತದ ಇತಿಹಾಸವಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. 25 ವರ್ಷ ಮೇಲಿನವರು ಪ್ರತಿ ವರ್ಷ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಹೃದಯಾಘಾತ ಆಗುವ ಸಾಧ್ಯತೆಯನ್ನು ಕಡಿಮೆ ಮಾಡಲಿದೆ.
ಕೈಗಳ ತೋಳುಗಳಲ್ಲಿ, ಭುಜದ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಹೃದಯಾಘಾತದ ಪ್ರಮುಖ ಲಕ್ಷಣಗಳು. ಅದರಲ್ಲೂ ಕೈಗಳ ತೋಳುಗಳಲ್ಲಿ ಕಂಡು ಬರುವ ನೋವು ನಿಧಾನಕ್ಕೆ ದೇಹದ ಇತರ ಕಡೆಗೆ ವ್ಯಾಪಿಸಿದರೆ, ಎಚ್ಚರ ವಹಿಸಬೇಕು. ಇಂಥ ಸಂದರ್ಭದಲ್ಲಿ ಕೂಡಲೇ ವೈದ್ಯರ ಬಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡರೆ ಉತ್ತಮ. ಸಾಮಾನ್ಯವಾಗಿ ಯುವಕರು ತಮ್ಮ ಜೀವನ ಶೈಲಿ ಹಾಗೂ ಆಹಾರ ಸೇವನೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು.
ದೇಹದಲ್ಲಿ ಹೆಚ್ಚಿನ ಕೊಬ್ಬಿನಂಶ ಹೃದಯಕ್ಕೆ ಅಪಾಯ. ಸ್ಥೂಲಕಾಯ, ಮಧುಮೇಹ ಹಾಗೂ ರಕ್ತದೊತ್ತಡ ಹೆಚ್ಚಿಸುವ ಆಹಾರದ ಮೇಲೆ ನಿಯಂತ್ರಣವಿರಲಿ.
ದೈಹಿಕ ಚಟುವಟಿಕೆಯೂ ಅತಿ ಮುಖ್ಯ.
ಅವರವರ ಆರೋಗ್ಯಕ್ಕೆ ಅನುಗುಣವಾಗಿ ವ್ಯಾಯಾಮ ಮಾಡುವುದು ಸೂಕ್ತ.
ವೈದ್ಯರ ಸಲಹೆ ಮೇರೆಗೆ ವ್ಯಾಯಾಮ ಆಯ್ದುಕೊಳ್ಳಿ. ಇಲ್ಲವೇ ಕೆಲವು ಅತಿರೇಕದ ವ್ಯಾಯಾಮ ಹೃದಯದ ಮೇಲೂ ಕೆಟ್ಟ ಪರಿಣಾಮ ಬೀರಬಹುದು.
ಧೂಮಪಾನ ಹಾಗೂ ಮದ್ಯ ಸೇವನೆ ಮೇಲೆ ಸಂಪೂರ್ಣ ನಿಯಂತ್ರಣವಿರಲಿ.
ಹೊಗೆ ತುಂಬಿರುವ ಜಾಗದಲ್ಲಿ ಓಡಾಟ ಕಡಿಮೆ ಮಾಡುವುದು ಉತ್ತಮ.
ಆರೋಗ್ಯಕರ ಜೀವನ ಶೈಲಿಯಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಾಗೂ ವರ್ಷಕ್ಕೊಮ್ಮೆ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಸಾಮಾನ್ಯವಾಗಿ ಯುವಕರು ತಮ್ಮ ಜೀವನ ಶೈಲಿ ಹಾಗೂ ಆಹಾರ ಸೇವನೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು.
ದೇಹದಲ್ಲಿ ಹೆಚ್ಚಿನ ಕೊಬ್ಬಿನಂಶ ಹೃದಯಕ್ಕೆ ಅಪಾಯ. ಸ್ಥೂಲಕಾಯ, ಮಧುಮೇಹ ಹಾಗೂ ರಕ್ತದೊತ್ತಡ ಹೆಚ್ಚಿಸುವ ಆಹಾರದ ಮೇಲೆ ನಿಯಂತ್ರಣವಿರಲಿ.
ದೈಹಿಕ ಚಟುವಟಿಕೆಯೂ ಅತಿ ಮುಖ್ಯ.
ಅವರವರ ಆರೋಗ್ಯಕ್ಕೆ ಅನುಗುಣವಾಗಿ ವ್ಯಾಯಾಮ ಮಾಡುವುದು ಸೂಕ್ತ.
ವೈದ್ಯರ ಸಲಹೆ ಮೇರೆಗೆ ವ್ಯಾಯಾಮ ಆಯ್ದುಕೊಳ್ಳಿ. ಇಲ್ಲವೇ ಕೆಲವು ಅತಿರೇಕದ ವ್ಯಾಯಾಮ ಹೃದಯದ ಮೇಲೂ ಕೆಟ್ಟ ಪರಿಣಾಮ ಬೀರಬಹುದು.
ಧೂಮಪಾನ ಹಾಗೂ ಮದ್ಯ ಸೇವನೆ ಮೇಲೆ ಸಂಪೂರ್ಣ ನಿಯಂತ್ರಣವಿರಲಿ.
ಹೊಗೆ ತುಂಬಿರುವ ಜಾಗದಲ್ಲಿ ಓಡಾಟ ಕಡಿಮೆ ಮಾಡುವುದು ಉತ್ತಮ.
ಆರೋಗ್ಯಕರ ಜೀವನ ಶೈಲಿಯಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹಾಗೂ ವರ್ಷಕ್ಕೊಮ್ಮೆ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ.
ಇತ್ತೀಚಿನ ದಿನಗಳಲ್ಲಿ ಜಿಮ್ ಹೋಗುವುದೇ ಒಂದು ಫ್ಯಾಷನ್ ಆಗಿದೆ. ದೈಹಿಕ ವ್ಯಾಯಾಮ ಹೆಚ್ಚು ಮುಖ್ಯ, ಆದರೆ, ಅದು ನಮಗೆ ಮುಳುವಾಗದಂತಿದ್ದರೆ ಕ್ಷೇಮ. ನೀವು ಯಾವ ರೀತಿಯ ವರ್ಕ್ಔಟ್ ಮಾಡುತ್ತೀರಿ, ಅದು ನಿಮ್ಮ ದೇಹಕ್ಕೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ ಎಂಬುದರ ಜ್ಞಾನ ಬಹಳಾ ಮುಖ್ಯ.
ಎಲ್ಲಾ ವ್ಯಾಯಾಮಗಳೂ ಎಲ್ಲರಿಗೂ ಹೊಂದುವುದಿಲ್ಲ. ಹಾಗೆಯೇ ಕೆಲವರು ವೇಗವಾಗಿ ಸಣ್ಣ ಅಥವಾ ದಪ್ಪವಾಗಲು ಗೂಗಲ್, ಯೂಟ್ಯೂಬ್ ಮೊರೆ ಹೋಗುತ್ತಾರೆ. ಅವೈಜ್ಞಾನಿಕ ಡಯಟ್ ಪ್ರಾರಂಭಿಸಿ ದೇಹದ ಮಾಂಸಖಂಡಗಳನ್ನು ಕಳೆದುಕೊಳ್ಳುತ್ತಾರೆ. ಡಯಟ್ ಹಾಗೂ ವ್ಯಾಯಾಮದಿಂದ ದೇಹದ ಕೊಬ್ಬು ಕರಗಬಹುದೇ ವಿನಃ ಮಾಂಸಖಂಡಗಳಲ್ಲ. ಈ ವ್ಯತ್ಯಾಸ ತಿಳಿಯದೇ ಸಾಕಷ್ಟು ಜನ ಡಯಟ್ ಹೆಸರಿನಲ್ಲಿ ರಕ್ತದೊತ್ತಡವನ್ನೇ ಕಡಿಮೆಗೊಳಿಸಿ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಇನ್ನೂ ಕೆಲವರು, ಅವೈಜ್ಞಾನಿಕ ಪೇಯಗಳ ಸೇವೆಯಿಂದಲೂ ಈ ಕಾಯಿಲೆಯನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ. ಸಂಪೂರ್ಣವಾಗಿ ಊಟ ತ್ಯಜಿಸಿ ದೇಹದ ತೂಕ ಕಳೆದುಕೊಳ್ಳಲು ಮುಂದಾದರೂ ದೈಹಿಕ ಸಮಸ್ಯೆ ತಪ್ಪಿದ್ದಲ್ಲ. ಈ ಅಭ್ಯಾಸಗಳಿಂದ ಫಲಿತಾಂಶ ತ್ವರಿತವಾಗಿ ಲಭ್ಯವಾದರೂ, ಹೃದಯದ ಅರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
ಯಾರೇ ಆಗಲಿ, ತಮ್ಮ ದೇಹಕ್ಕೆ ಹೊಂದುವ ಡಯಟ್ಗಳನ್ನು ಮಾತ್ರ ಪಾಲಿಸಬೇಕು. ಸಣ್ಣ ಅಥವಾ ದಪ್ಪ ಆಗಲು ಇಚ್ಚಿಸುವವರು ಮೊದಲು ವೈದ್ಯರು ಅಥವಾ ಆಹಾರ ತಜ್ಞರನ್ನು ಭೇಟಿ ಮಾಡಿ ಅವರ ಸಲಹೆಯಂತೆ ದೇಹದ ತೂಕ ಕಳೆದುಕೊಳ್ಳುವುದು ಸೂಕ್ತ.
ಜಿಮ್ಗಳಲ್ಲಿ ನೀಡುವ ಎಲ್ಲಾ ರೀತಿಯ ಪ್ರೋಟಿನ್ ಸೇವನೆಯೂ ಒಳ್ಳೆಯದಲ್ಲ. ಹೀಗಾಗಿ ಡಯಟ್ ಹಾಗೂ ಜಿಮ್ ವಿಷಯದಲ್ಲಿ ಇಂದಿನ ಯುವಕರು ಅತಿಯಾದ ಕಾಳಜಿ ವಹಿಸುವುದು ಸೂಕ್ತ. ಇನ್ನೂ ಕಳೆದ ಎರಡು ವರ್ಷಗಳಲ್ಲಿ ಕೋವಿಡ್ನಿಂದ ದೇಹದಲ್ಲಾಗುವ ಬದಲಾವಣೆಯಿಂದಲೂ ಹೃದಯಾಘಾತ ಸಂಭವಿಸುವ ಸಾಧ್ಯತೆ ಇತ್ತು, ಅದೂ ಕೋವಿಡ್ ಬಂದ ಆರು ವಾರಗಳ ಅವಧಿಯಲ್ಲಿ ಈ ಸಾಧ್ಯತೆ ಕಂಡು ಬರುತ್ತಿತ್ತು.
ಆದರೆ ಈಗ ಕೋವಿಡ್ ಸಂಪೂರ್ಣ ಕಡಿಮೆಯಾಗಿದೆ. ಹೀಗಾಗಿ ಕೋವಿಡ್ ಪರಿಣಾಮದಿಂದ ಈಗಲೂ ಹೃದಯಾಘಾತ ಸಂಭವಿಸುತ್ತಿದೆ ಎಂಬುದು ಅವೈಜ್ಞಾನಿಕ. ಈ ವಾದಕ್ಕೆ ವೈದ್ಯಕೀಯವಾಗಿಯೂ ಯಾವುದೇ ಪುರಾವೆಗಳಿಲ್ಲ. ಆದರೆ, ಹೃದಯಾಘಾತಕ್ಕೆ ಇತರೆ ಕಾರಣಗಳು ಹೆಚ್ಚಾಗುತ್ತಿರುವುದು ಗಮನಾರ್ಹ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಹೃದಯಾಘಾತದ ಪ್ರಮಾಣ ತೀರ ಕಡಿಮೆ ಇತ್ತು. ಮಹಿಳೆಯರಲ್ಲಿ ಈಸ್ಟ್ರೋಜನ್ ಎಂಬುವ ಹಾರ್ಮೋನ್ನಿಂದ ಹೃದಯಾಘಾತ ಸಂಭವ ಇರಲಿಲ್ಲ. ಆದರೆ ಇಂದು ಮಹಿಳೆಯರೂ ಪುರುಷರಂತೆ ಧೂಮಪಾನ, ಮದ್ಯ ಸೇವನೆಯಂತ ಅನಾರೋಗ್ಯಕರ ಅಭ್ಯಾಸದಲ್ಲಿ ತೊಡಗಿಸಿಕೊಂಡಿರುವುದರಿಂದ ಈಸ್ಟ್ರೋಜನ್ನಿಂದ ದೊರೆಯುತ್ತಿದ್ದ ರಕ್ಷಣೆಯೂ ಕ್ಷೀಣಿಸುತ್ತಿದೆ. ಇದರಿಂದ ಅವರೂ ಅತಿ ಕಡಿಮೆ ವಯಸ್ಸಿಗೆ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ.
ಇನ್ನೂ ಹೃದಯಾಘಾತವು ಇದ್ದಕ್ಕಿದ್ದಂತೆ ಸಂಭವಿಸುವುದಿಲ್ಲ, ಅದು ನಮ್ಮ ಜೀವನಶೈಲಿಯ ಅಧಾರದ ಮೇಲೆ ಅವಲಂಬಿತವಾಗಿರುತ್ತದೆ. ಜೀವನಶೈಲಿ ಎಷ್ಟು ಉತ್ತಮವಾಗಿರುತ್ತದೆಯೋ ನಮ್ಮ ಆರೋಗ್ಯ ಅಷ್ಟೇ ಉತ್ತಮವಾಗಿರುತ್ತದೆ. ಇಲ್ಲಿ ಸ್ವಲ್ಪ ಏರುಪೇರಾದರೂ ಇನ್ನಿಲ್ಲದ ಆರೋಗ್ಯ ಸಮಸ್ಯೆಗಳು ಆಹ್ವಾನ ನೀಡದೇ ಬಂದು ಬಿಡುತ್ತವೆ. ಒಬ್ಬರು ನಾವು ಹೇಳುತ್ತಿರುವ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅವರು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚು ಎಂದಿದ್ದಾರೆ. ಹಾಗಾದರೆ ತಜ್ಞರು ವಿವರಿಸಿರುವ ಆ ಐದು ಸಾಮಾನ್ಯ ಚಿಹ್ನೆಗಳನ್ನು ನೋಡೋಣ ಬನ್ನಿ.
ಮೊದಲನೆಯದಾಗಿ.. ಆತಂಕ:-
ನಮ್ಮ ಕೆಲಸ, ವೇಳಾಪಟ್ಟಿ, ಜೀವನಶೈಲಿ ಎಲ್ಲವೂ ನೇರವಾಗಿ ನಮ್ಮ ಆತಂಕಕ್ಕೆ ಕಾರಣವಾಗಿದ್ದು, ಈ ಆತಂಕ ನಮ್ಮ ಹೃದಯದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆತಂಕ ಮತ್ತು ಹೃದಯರೋಗ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು 2015 ರಲ್ಲಿ ನಡೆಸಿದ ಅಧ್ಯಯನವು ಆತಂಕವು ಪರಿಧಮನಿಯ ಕಾಯಿಲೆಯ ಅಪಾಯವನ್ನು 21 ಪ್ರತಿಶತದಷ್ಟು ಮಾರಕವಾಗಿ ಪರಿವರ್ತಿಸುತ್ತದೆ ಎಂದು ಕಂಡುಹಿಡಿದಿದೆ. ಅಂದರೆ ಹೆಚ್ಚಾಗಿ ಯಾರು ಒತ್ತಡ, ಆತಂಕ, ಖಿನ್ನತೆಯಿಂದಾಲೇ ಜೀವನ ನಡೆಸುತ್ತಾರೋ ಅಂಥವರಲ್ಲಿ ಈ ಹೃದ್ರೋಗದ ಅಪಾಯ ಹೆಚ್ಚು.
ಎರಡನೇಯದಾಗಿ:-
* ಬೆವರುವುದು
ಯಾವುದಾದರೂ ದೈಹಿಕ ಕೆಲಸ ಮಾಡಿದರೆ ಸಹಜವಾಗಿ ಕೆಲವರು ಬೆವರುತ್ತಾರೆ. ಆದರೆ ಏನೂ ಮಾಡದೇ ಸುಖಾಸುಮ್ಮನೆ ಬೆವರಿದರೆ ಅದು ಸಾಮಾನ್ಯವಲ್ಲ. ಇದು ಭವಿಷ್ಯದ ಹಾರ್ಟ್ ಅಟ್ಯಾಕ್ ಸಂಕೇತ ಎನ್ನುತ್ತಾರೆ ದೀಪಕ್ ಭಟ್. ಬೇಗ ಬೆವರುವುದು, ವ್ಯಕ್ತಿಯು ಯಾವುದೇ ದೈಹಿಕ ಚಟುವಟಿಕೆಯಲ್ಲಿ ಭಾಗವಹಿಸದಿದ್ದಾಗಲೂ ಬೆವರುವುದು ಹೃದಯಾಘಾತದ ಮೊದಲ ಚಿಹ್ನೆಗಳಲ್ಲಿ ಒಂದು ಎಂದು ಅವರು ಎಚ್ಚರಿಸುತ್ತಾರೆ.
*ಕಾಲು ನೋವು:-
ಕಾಲು ನೋವು ಅಂದರೆ ವಯಸ್ಸಾಗ್ತಿದೆ ಹೀಗಾಗಿ ಇದೆಲ್ಲಾ ಸಹಜ ಎಂದು ಭಾವಿಸಿ ಸುಮ್ಮನಾಗಿಬಿಡುತ್ತಾರೆ. ಆದರೆ ಡಾ. ದೀಪಕ್ ಈ ಲಕ್ಷಣವನ್ನು ಹೃದ್ರೋಗದ ಅನಿರೀಕ್ಷಿತ ಸಿಗ್ನಲ್ ಎಂದಿದ್ದಾರೆ. ಕಾಲುಗಳಲ್ಲಿ ಜುಮ್ಮೆನಿಸುವಿಕೆ ಮತ್ತು ನೋವು ವಾಸ್ತವವಾಗಿ ಭವಿಷ್ಯದ ಹೃದಯಘಾತದ ಪ್ರಮುಖ ಲಕ್ಷಣಗಳಾಗಿವೆ ಎಂದಿದ್ದಾರೆ.
ಆಯಾಸ:-
ಕೆಲಸ ಮಾಡಿ ದಿನದ ಕೊನೆಯಲ್ಲಿ ದಣಿವಾಗುವುದು ಸಹಜ, ಆದರೆ ದಿನಂಪ್ರತಿ ಇದೇ ಆಯಾಸ, ಸುಸ್ತು ಇದ್ದರೆ ಇದಕ್ಕೆ ಬೇರೆಯದ್ದೇ ಕಾರಣವಿರುತ್ತದೆ. ಹೀಗೆ ಹೃದಯಘಾತದ ಅಪಾಯದ ಲಕ್ಷಣಗಳಲ್ಲಿ ಈ ಆಯಾಸ ಕೂಡ ಒಂದು ಎನ್ನುತ್ತಾರೆ ವೈದ್ಯರು.
ಹೊಟ್ಟೆ ನೋವು:-
ಹೊಟ್ಟೆಯ ತೊಂದರೆಗಳು
ಹೃದ್ರೋಗದಿಂದ ಬಳಲುತ್ತಿರುವವರಲ್ಲಿ ಸಾಮಾನ್ಯವಾಗಿ ಹೊಟ್ಟೆ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳು ಕಂಡು ಬರುತ್ತವೆ. ಹೃದಯರಕ್ತನಾಳದ ಸ್ಥಿತಿಯು ಹದಗೆಟ್ಟಾಗ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಸಂಭವಿಸುತ್ತವೆ. ಇದು ಮೊದಲಿಗೆ ಸಾಮಾನು ಹೊಟ್ಟೆ ನೋವು ಎಂದೆನಿಸಿದರೂ ಈ ಲಕ್ಷಣ ಹಾರ್ಟ್ ಅಟ್ಯಾಕ್ಗೆ ನೇರವಾಗಿ ಸಂಬಂಧಿಸಿದೆ.
ಹೀಗೆ ಹೃದಯಾಘಾತದ ಮುನ್ಸೂಚನೆ ಬಗ್ಗೆ ನಾವು ತಿಳಿದುಕೊಂಡು ವೈದ್ಯರನ್ನು ಸಂಪರ್ಕಿಸಬಹುದಾಗಿದೆ.