ಪಿಎಂ ಕುಸುಮ್ ಯೋಜನೆಯಡಿ ಜಾಲಮುಕ್ತ ಸೌರ ಚಾಲಿತ ಕೃಷಿ ಪಂಪ್ಸೆಟ್ಗಳಿಗಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ರೈತರು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಿದೆ. ಕೇಂದ್ರ ಸರ್ಕಾರದ ಪಿಎಂ ಕುಸುಮ್ ಯೋಜನೆಯಡಿ ಜಾಲಮುಕ್ತ ಸೌರ ಶಕ್ತಿ ಚಾಲಿತ ಪಂಪ್ಸೆಟ್ಗಳನ್ನು ಅಳವಡಿಸಿಕೊಳ್ಳಲು ರೈತರು ಅರ್ಜಿ ಹಾಕಬಹುದು. ಅರ್ಜಿಯನ್ನು ಕೆ. ಆರ್. ಇ. ಡಿ. ಎಲ್. ಅಧಿಕೃತ ಜಾಲತಾಣದ ಮೂಲಕ ಹಾಕಬಹುದು.
2023-24ನೇ ಸಾಲಿನ ನೂತನ ಯೋಜನೆಯಡಿ ಸೋಲಾರ್ ಪಂಪ್ಸೆಟ್ ಅಳವಡಿಕೆಗೆ ಹಾಗೂ ಯಂತ್ರೋಪಕರಣಗಳ ಖರೀದಿಗೆ ಉತ್ತಮ ಸಬ್ಸಿಡಿ ದೊರೆಯಲಿದೆ. ಯಂತ್ರೋಪಕರಣಗಳ ಖರೀದಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇಕಡಾ 50 ರಷ್ಟು ಸಹಾಯಧನ ದೊರೆಯಲಿದೆ. ಇತರೆ ವರ್ಗದವರಿಗೆ ಶೇಕಡಾ 40 ರಷ್ಟು ಸಬ್ಸಿಡಿ ದೊರೆಯಲಿದೆ.
ಇನ್ನು ಸೋಲಾರ್ ಆಧರಿತ 3 ಹೆಚ್ಪಿ ಸೋಲಾರ್ ಪಂಪ್ಸೆಟ್ಗಳಿಗೆ 2 ಲಕ್ಷವಾದರೆ ಶೇಕಡಾ 50ರಂತೆ ಒಂದು ಲಕ್ಷ ರೂಪಾಯಿ ಸಹಾಯಧನ ಸಿಗಲಿದೆ. ನ್ನು 3 ಹೆಚ್ಪಿ ಸೋಲಾರ್ ಗಿಂತ ಮೇಲ್ಪಟ್ಟ ಸೋಲಾರ್ ಪಂಪ್ಸೆಟ್ಗಳಿಗೆ 3 ಲಕ್ಷ ಖರ್ಚಿಗೆ 1.5ಲಕ್ಷ ರೂಪಾಯಿ ಸಹಾಯಧನ ದೊರೆಯಲಿದೆ. ರೈತರು ಅಧಿಕೃತ ಸಂಸ್ಥೆಯಿಂದ ಮಾತ್ರ ಸೋಲಾರ್ ಪಂಪ್ಸೆಟ್ ಖರೀದಿಸಿರಬೇಕು.
ರೈತರು ಅಧಿಕೃತ ಸಂಸ್ಥೆಯಿಂದ ಮಾತ್ರ ಸೋಲಾರ್ ಪಂಪ್ಸೆಟ್ ಖರೀದಿಸಿರಬೇಕು. ಅರ್ಜಿ ಸಲ್ಲಿಸಲು ಅರ್ಹ ರೈತರು ಸ್ಥಳೀಯ ತಾಲೂಕಿನ ತೋಟಗಾರಿಕಾ ಇಲಾಖೆ ಕಚೇರಿಯನ್ನು ಸಂಪರ್ಕಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ಬುಕ್ ಪ್ರತಿ, ಎಫ್ಐಡಿ ಸಂಖ್ಯೆ, ಆರ್ಟಿಸಿ, ಫೋಟೋ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅರ್ಜಿ ಸಲ್ಲಿಕೆಗೆ ಕಡ್ಡಾಯವಾಗಿರುತ್ತದೆ.