ಬೆಂಗಳೂರು:- ನೋಡಲು ಬ್ಯೂಟಿ ಕ್ವೀನ್. ಇವಳ ಸೌಂದರ್ಯಕ್ಕೆ ಯಾವುದೇ ಹುಡುಗರಾಗಲಿ ಮಾರು ಹೋಗದೆ ಇರಲ್ಲ. ಅಂತದ್ರಲ್ಲಿ ಅಂಕಲ್ ಬಿಡ್ತಾರಾ ಗುರು. ಹುಡುಗಿ ತಾನೇ ಮೈಮೇಲೆ ಬಿದ್ದು ಹೋದ್ರೆ ಅಂಕಲ್ ಸುಮ್ನೆ ಆಗ್ತಾರಾ. ಸುಂದರಿ ಲುಕ್ ಗೆ ಫಿದಾ ಆಗಿ ಅವಳು ಕರೆದಳು ಅಂತ ಮನೆಗೆ ಹೋದ್ರೂ. ನಿಜಕ್ಕೂ ಕಾದಿತ್ತು ಅಂಕಲ್ ಗೆ ಶಾಕ್ ಏನಿದು ಸ್ಟೋರಿ ನೀವು ನೋಡಲೇಬೇಕು.
ವಿವಾಹಿತ ಮಹಿಳೆಗೆ ಸಾಲ ಕೊಡಿಸುವುದಾಗಿ ನಂಬಿಸಿ ಲಾಡ್ಜ್ ಗೆ ಕರೆದೊಯ್ದು ರೇಪ್: BJP ಮುಖಂಡ ಅರೆಸ್ಟ್!
ಇಲ್ಲೋರ್ವ ಅಂಕಲ್, ಬ್ಯೂಟಿ ಲುಕ್ ಗೆ ಫಿದಾ ಆಗಿದ್ದು, 20ರ ಸುಂದರಿ ನಂಬಿ ಆಕೆ ಮನೆಗೆ ಹೋಗಿದ್ದಾನೆ. ಅಲ್ಲಿ ಹೋದ ಬಳಿಕ ಆತನಿಗೆ ಬಿಗ್ ಶಾಕ್ ಎದುರಾಗಿದೆ. ಅಂತದ್ದೇನಾಯ್ತು ಅಂತೀರಾ ಈ ಸ್ಟೋರಿ ನೋಡಿ.
ಎಸ್, 57 ವರ್ಷದ ಅಂಕಲ್ ಹಾಗೂ 20 ವರ್ಷದ ಸುಂದರಿಯದ್ದು ಒಂದು ವರ್ಷದ ಗೆಳೆತನ. ಸುಂದರಿ ಕೇಳಿದ್ಲು ಅಂತಾ ಅಂಕಲ್ ಕೂಡ ಆಗಾಗ ಐದು ಹತ್ತು ಸಾವಿರ ಹಣವನ್ನ ಕೊಡ್ತಿದ್ರಂತೆ. ಸಿವಿಲ್ ಕಂಟ್ರಾಕ್ಟರ್ ಆಗಿರೋ ಅಂಕಲ್ ಗೆ ಒಳ್ಳೆ ಗೂಡ್ ಪಾರ್ಟಿ ಅಂತಾ ಪ್ಲಾನ್ಮಾಡಿದ ಸುರಸುಂದರಿ ಸಖತ್ ಪ್ಲಾನ್ ಮಾಡಿ ಅಂಕಲ್ ಗೆ ಬಲೆ ಬೀಸಿದ್ಳು.
ಟೀ ಕುಡಿದುಕೊಂಡು ಹೋಗಿ ಅಂತಾ ಮನೆಗೆ ಕರೆದಿದ್ದಾಳೆ. ಸುಂದರಿ ಸ್ಮೈಲಿಗೆ ಕರಗಿದ ಅಂಕಲ್ ಸೀದಾ ಅವಳ ಸ್ಕೂಟಿ ಫಾಲೋ ಮಾಡಿಕೊಂಡು ಹೋಗಿದ್ದಾರೆ. ಸುಂದರಿ ಮನೆಗೆ ಹೋದ ಅಂಕಲ್ ಜೇಬು ಮತ್ತು ಕೈನಾ ಸುಂದರಿ ಅಂಡ್ ಗ್ಯಾಂಗ್ ಖಾಲಿ ಮಾಡಿ ಕಳುಹಿಸಿದ್ದಾಳೆ. ಬ್ಯೂಟಿ ಜೊತೆ ಅಂಕಲ್ ಜಾಲಿ-ಜಾಲಿಯಾಗಿದ್ದಾಗ ಅಪರಿಚರು ಪೊಲೀಸರು ಅಂತಾ ಎಂಟ್ರಿ ಕೊಟ್ಟಿದ್ದಾರೆ.
ವ್ಯಭಿಚಾರ ನಡೆಸ್ತಿದ್ದಾರಾ ಅಂತಾ ಪೊಲೀಸರ ಸೋಗಿನಲ್ಲಿ ಬ್ಲಾಕ್ಮೇಲ್ ಮಾಡಿ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸಿ ಫೋಟೊ ತೆಗೆದುಕೊಂಡಿದ್ದಾರೆ. ಕೆಳಗಡೆ ಮೇಡಂ ಇದಾರೆ ಇಲ್ಲೆ ಸೆಟಲ್ ಮಾಡ್ಕೋ ಅಂತ ಅಂಕಲ್ ಗೆ ಬೆದರಿಸಿ ಜೇಬಲ್ಲಿದ್ದ 29 ಸಾವಿರ ನಗದು, ಫೋನ್ ಪೇನಲ್ಲಿ 26 ಸಾವಿರ ಹಾಗೂ ಮೈಮೇಲಿದ್ದ ಸುಮಾರು 5 ಲಕ್ಷದ ಮೌಲ್ಯದ ಚಿನ್ನದ ಸರ, ಉಂಗುರ ಬ್ರೇಸ್ ಲೇಟ್ ಕಿತ್ತುಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಇದಾದ ನಂತರ ಸುಂದರಿ ನಯಾನಗೆ ಅಂಕಲ್ ಬಾ ಹೋಗಿ ಕಂಪ್ಲೈಂಟ್ ಕೊಡೋಣ ಅಂತಾ ಕರೆದ್ರೆ ಬ್ಯೂಟಿ ನಯನ ಹೊಸ ವರಸೆ ತೆಗೆದಿದ್ದಾಳೆ.
ಸ್ಟೇಷನ್ ಕಂಪ್ಲೈಂಟ್ ಅಂತಾ ಹೋದ್ರೆ ಮಗುನಾ ಕರ್ಕೊಂಡು ನಿಮ್ಮ ಮನೆಗೆ ಬರ್ತಿನಿ ಅಂತಾ ಮತ್ತೆ ಬ್ಲಾಕ್ ಮೇಲ್ ಮಾಡಿದ್ದಾಳೆ. ಇದಾದ ನಂತರ ಧೈರ್ಯಮಾಡಿ ಬ್ಯಾಡರಹಳ್ಳಿ ಠಾಣೆಗೆ ನೊಂದ ಕಂಟ್ರಾಕ್ಟರ್ ಅಂಕಲ್ ದೂರು ನೀಡಿದ್ದಾರೆ. ಸ್ನೇಹಿತನೊಬ್ಬನ ಮೂಲಕ 57 ವರ್ಷದ ಕಂಟ್ರಾಕ್ಟರ್ ಗೆ ನಯನಾ ಎಂಬ ಯುವತಿ ಪರಿಚಯವಾಗಿದ್ದು,
ಆರಂಭದಲ್ಲಿ ಮಗುವಿಗೆ ಹುಷಾರಿಲ್ಲ ಅಂತ 5 ಸಾವಿರ 10 ಸಾವಿರ ಹಣ ಹಾಕಿಸಿಕೊಂಡಿದ್ದಳು.
ನಂತರ ನಿತ್ಯ ಕಾಲ್ ಮಾಡಿ ಮನೆ ಬನ್ನಿ ಅಂತ ಕರೆಯುತ್ತಿದ್ಳು. ಡಿಸೆಂಬರ್ 9ರಂದು ಬೆಳಗ್ಗೆ ಬೈಕ್ ನಲ್ಲಿ ಮಾಗಡಿ ರಸ್ತೆಯಲ್ಲಿ ಹೋಗ್ತಿದ್ದಾಗ ಅಂಕಲ್ ನ ಹಿಂಬದಿಯಿಂದ ಸ್ಕೂಟರ್ ನಲ್ಲಿ ಬಂದ ನಯನ ಕರೆದು ಮಾತಾಡಿಸಿ
ಇಲ್ಲೇ ಮನೆ ಟೀ ಕುಡಿದು ಹೋಗಿ ಅಂತ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಈ ವೇಳೆ ಮನೆಗೆ ಏಕಾಏಕಿ ಅಪರಿಚಿತ ವ್ಯಕ್ತಿಗಳ ಎಂಟ್ರಿಯಾಗಿ ನಾವು ಕ್ರೈಂ ಪೊಲೀಸ್ ಎಂದು ಬೆದರಿಸಿ ಅಂಕಲ್ ಮೇಲೆ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸಿ ಫೋಟೋ ತೆಗೆದುಕೊಂಡು ಎರಡು ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾಗಿ ದೂರು ನೀಡಿದ್ದಾರೆ.
ಸದ್ಯ ಬ್ಯಾಡರಹಳ್ಳಿ ಪೊಲೀಸ್ರು ಸುಲಿಗೆ ಗ್ಯಾಂಗ್ ನ ಸಂತೋಷ್, ಅಜಯ್, ಜಯರಾಜ್ ಎಂಬುವರನ್ನ ಬಂಧಿಸಿದ್ದು, ನಾಪತ್ತೆಯಾಗಿರುವ ನವರಂಗಿ ನಯನಗಾಗಿ ಹುಡಕಾಟ ನಡೆಸಿದ್ದಾರೆ.