ದಿನಕ್ಕೊಂದು ಟ್ವಿಸ್ಟ್, ಹೊಸ ಕಥೆ, ಪ್ರೀತಿ ಸ್ನೇಹ, ಮನಸ್ತಾಪ ಜೊತೆಗೆ ಸಿಕ್ಕಾಪಟ್ಟೆ ಮನರಂಜನೆ ಹೀಗೆ ನಾನಾ ವಿಷಯಗಳ ಸಲುವಾಗಿ ಬಿಗ್ ಬಾಸ್ ಸಖತ್ ಸದ್ದು ಮಾಡುತ್ತಿದೆ. ಈ ಮಧ್ಯೆ ವರ್ತೂರು ಸಂತೋಷ್ ಸೇಫ್ ಆಗಿದ್ರೂ, ಮನೆಯಿಂದ ಹೊರ ಹೋಗುತ್ತೇನೆ ಎಂದು ಹೇಳಿರುವುದು ಬಿಗ್ ಟ್ವಿಸ್ಟ್ ನೀಡಿದೆ.
ಇವೆಲ್ಲದರ ಜೊತೆಗೆ ದೀಪಾವಳಿ ಖುಷಿಯಲ್ಲಿರುವ ಮನೆ ಮಂದಿಗೆ ಬಿಗ್ ಬಾಸ್ ಭಾವುಕ ಸರ್ಪ್ರೈಸ್ ನೀಡಿದೆ. ಸ್ಪರ್ಧಿಗಳಿಗೆ ಅವರ ಮನೆಯಿಂದ ಅವರಿಗಿಷ್ಟವಾದ ತಿನಿಸುಗಳನ್ನು ತರಿಸಿ ಕೊಡಲಾಗಿದೆ. ಬಾಕ್ಸ್ನಲ್ಲಿ ಬಂದ ತಮ್ಮಿಷ್ಟದ ತಿನಿಸನ್ನು ಮಾಡಿ ಕಳುಹಿಸಿದ ಮನೆಯವರನ್ನು ನೆನೆದು ಸ್ಪರ್ಧಿಗಳು ಭಾವುಕರಾಗಿದ್ದಾರೆ. ಎಲ್ಲರ ಮನೆಯಿಂದ ತಿಂಡಿ ಬಂದರೂ ಒಬ್ಬ ಸ್ಪರ್ಧಿ ಮನೆಯಿಂದ ಮಾತ್ರ ಬಾಕ್ಸ್ ಬಂದಿರಲಿಲ್ಲ.
ಅದು ವರ್ತೂರು ಸಂತೋಷ್ ಅವರ ಮನೆಯಿಂದಾಗಿತ್ತು. ನೋಡಿ ವರ್ತೂರು ಅವರು ದುಃಖದಿಂದ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಆಗಲೇ ಇಡೀ ಮನೆಯವರೆಲ್ಲರೂ ದಂಗಾಗಿ ಬಿಡುವ ಘಟನೆ ನಡೆಯಿತು. ಈ ಘಟನೆ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸೆರೆಯಾಗಿದೆ. ತೆರೆದ ಬಿಗ್ ಬಾಸ್ ಮನೆಯ ಬಾಗಿಲಿಂದ ವರ್ತೂರು ಸಂತೋಷ್ ಅವರ ಅಮ್ಮನೇ ಬುತ್ತಿ ಹಿಡಿದು ನಡೆದುಕೊಂಡು ಬರುತ್ತಿದ್ದರು. ಅವರ ಬಾಯಿಂದ ‘ಕಂದ’ ಅಂದಾಗಲಂತೂ ಸ್ಪರ್ಧಿಗಳೆಲ್ಲರಿಗೂ ತಮ್ಮ ಅಮ್ಮನೇ ಕರೆದಷ್ಟು ಖುಷಿಪಟ್ಟರು.
ವರ್ತೂರು ಸಂತೋಷ್ ಅವರು ಬಿಗ್ಬಾಸ್ ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ನಿನ್ನೆಯಿಂದಲೂ ಹೇಳುತ್ತಿದ್ದಾರೆ. ನಿರ್ಧಾರವನ್ನು ಅವರಿಗೆ ಬಿಟ್ಟು ಕಿಚ್ಚ ಸುದೀಪ್ ವೀಕೆಂಡ್ ಎಪಿಸೋಡ್ ಮುಗಿಸಿದ್ದಾರೆ. ಇಂದು ಅವರನ್ನು ಮನೆಯವರೆಲ್ಲ ಕನ್ವಿನ್ಸ್ ಮಾಡುತ್ತಿದ್ದಾರೆ